ಗುರುವಾರ, 16 ಸೆಪ್ಟೆಂಬರ್ 2021
ಮೇಷ
ಹೆಚ್ಚು ಕೆಲಸ, ಒತ್ತಡ. ಹೊಣೆಗಾರಿಕೆಯೂ ಹೆಚ್ಚು. ಖರ್ಚುಗಳು ಅಕ. ಒಟ್ಟಾರೆಯಾಗಿ ದಿನವಿಡೀ ಒತ್ತಡದ ಬದುಕು. ಪ್ರೀತಿಪಾತ್ರರು ಸಂತಸ ತುಂಬುವರು.
ವೃಷಭ
ಇಂದು ಹೆಚ್ಚು ತಾಳ್ಮೆಯಿಂದ ವರ್ತಿಸ ಬೇಕು. ಮನೆ ಮತ್ತು ಕೆಲಸದ ಜಾಗದಲ್ಲಿ ಅಪ್ರಿಯ ಬೆಳವಣಿಗೆ. ನಿಮ್ಮ ವಿರೋಗಳ ಮೇಲುಗೈ.
ಮಿಥುನ
ದಿನದ ಆರಂಭದಲ್ಲಿ ಕೆಲವು ಕಷ್ಟಗಳನ್ನು ಎದುರಿಸುವಿರಿ. ಬಳಿಕ ಎಲ್ಲವೂ ಸುಗಮವಾಗಿ ಸಾಗುವುದು. ದಿನದಂತ್ಯಕ್ಕೆ ತೃಪ್ತಿಕರ ಭಾವ. ಮಾನಸಿಕ ನಿರಾಳತೆ.
ಕಟಕ
ಕೌಟುಂಬಿಕ ವಿಷಯ ವೊಂದು ನಿಮ್ಮನ್ನು ಭಾವುಕಗೊಳಿಸುತ್ತದೆ. ಮನೋನಿಗ್ರಹ ಅವಶ್ಯ. ಆರೋಗ್ಯಕ್ಕೆ ಸಂಬಂಸಿ ಖರ್ಚು ಹೆಚ್ಚಾಗಬಹುದು.
ಸಿಂಹ
ಆರ್ಥಿಕವಾಗಿ ಸುದಿನ. ಧನಲಾಭ. ಉಳಿತಾಯ ಹೆಚ್ಚು. ಉದ್ಯಮದಲ್ಲಿ ಯಶಸ್ಸು. ಕೌಟುಂಬಿಕ ಸವಾಲು ಸಮರ್ಥವಾಗಿ ಎದುರಿಸುವಿರಾದರೂ ಬಂಧುತ್ವಕ್ಕೆ ಧಕ್ಕೆ.
ಕನ್ಯಾ
ವೃತ್ತಿಯಲ್ಲಿ ತೊಡಕು. ಉದ್ಯೋಗಕ್ಕೆ ಸಂಬಂಸಿ ಪ್ರಮುಖ ನಿರ್ಧಾರ ತಾಳಬೇಡಿ. ಅನಿರೀಕ್ಷಿತ ಖರ್ಚು ಮನಶ್ಶಾಂತಿ ಕೆಡಿಸುತ್ತದೆ. ಖರ್ಚು ನಿಯಂತ್ರಿಸಿ.
ತುಲಾ
ಆಪ್ತರಿಂದ ಆರ್ಥಿಕ ನೆರವು ಪಡೆಯುವ ಸಂಭವ. ಉದ್ಯೋಗದಲ್ಲಿ ಎಲ್ಲವೂ ಸುಗಮ. ಉಳಿತಾಯಕ್ಕೆ ಆದ್ಯತೆ ಕೊಡಿ. ಖರ್ಚುಗಳನ್ನು ನಿಯಂತ್ರಿಸಿ.
ವೃಶ್ಚಿಕ
ಉದ್ಯೋಗ ಸಂಬಂಧ ಪ್ರಯಾಣ ಸಂಭವ. ಆದರೆ ಅದು ನಿಮಗೆ ಹಿತಕರವೆನಿಸದು. ವೃತ್ತಿಯಲ್ಲಿ ಹೊಸ ಅವಕಾಶ ಲಭ್ಯ. ಕೌಟುಂಬಿಕ ನೆಮ್ಮದಿ.
ಧನು
ಇಂದಿನ ದಿನ ನಿಮಗೆ ಪೂರಕ. ಯಾವುದೇ ಕಾರ್ಯ ಉತ್ತಮ ಫಲ ನೀಡುವುದು. ಕೌಟುಂಬಿಕ ಸೌಹಾರ್ದ ವೃದ್ಧಿ. ಮಿತ ಆಹಾರ ಆರೋಗ್ಯಕ್ಕೆ ಒಳಿತು.
ಮಕರ
ಹೆಚ್ಚು ವಿಶೇಷಗಳಿಲ್ಲದ ದಿನ. ಏಕತಾನತೆಯ ಕೆಲಸ. ಕೌಟುಂಬಿಕ ಒತ್ತಡ ಕಡಿಮೆ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ಸಾಮಾಜಿಕ ಕಾರ್ಯ ಹೆಚ್ಚು.
ಕುಂಭ
ಇತರರ ತಪ್ಪು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಅದನ್ನು ಸರಿಪಡಿಸಬೇಕಾದ ಹೊಣೆ ನಿಮ್ಮ ಮೇಲೆ ಬೀಳುತ್ತದೆ. ಕೌಟುಂಬಿಕ ಹೊಂದಾಣಿಕೆ ಕೊರತೆ.
ಮೀನ
ಬುದ್ಧಿಮತ್ತೆಯಿಂದ ಕಾರ್ಯ ನಡೆಸಬೇಕು. ಇಲ್ಲವಾದರೆ ಸೂಕ್ತ ಫಲ ದೊರಕದು. ನಿಮ್ಮ ತಾಳ್ಮೆ ಪರೀಕ್ಷಿಸುವ ಪ್ರಸಂಗ ಉದ್ಭವಿಸುತ್ತದೆ. ಕೌಟುಂಬಿಕ ಭಿನ್ನಮತ.