ದಿನಭವಿಷ್ಯ: ಕೆಲಸದಲ್ಲಿ ನೀವು ಮಾಡುತ್ತಿರೋ ಹೊಸ ಪ್ರಯೋಗದಲ್ಲಿ ಯಶಸ್ಸು ಕಾಣುತ್ತೀರಿ..

ಮೇಷ
ವೃತ್ತಿ ವ್ಯವಹಾರದಲ್ಲಿ ಉದ್ವಿಗ್ನ ಸ್ಥಿತಿ ಸಂಭವ. ಸಹನೆ ಕಾಯ್ದುಕೊಳ್ಳಿ. ಆರೋಗ್ಯ ಸಮಸ್ಯೆ ಇರುವವರು ಎಚ್ಚರ ವಹಿಸಿ. ಔಷಧ ಸೇವನೆ ಮರೆಯದಿರಿ.

ವೃಷಭ
ಹೊಸ ವ್ಯವಹಾರಕ್ಕೆ ಹೂಡಿಕೆ ಮಾಡುವ ಮುನ್ನ ಆಲೋಚಿಸಿ. ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ. ಕೌಟುಂಬಿಕ ಸಹಕಾರ ಪಡೆಯಿರಿ.

ಮಿಥುನ
ನಿಮ್ಮಿಂದ ಇತರರು ಬಹಳಷ್ಟನ್ನು ನಿರೀಕ್ಷೆ ಮಾಡುತ್ತಾರೆ. ಅವರಿಗೆ ನಿರಾಶೆ ತರದಿರಿ. ಆಹಾರ ಸೇವನೆಯಲ್ಲಿ ಹಿತಮಿತ ಸಾಧಿಸಿ. ಆರೋಗ್ಯ ಕಾಪಾಡಿಕೊಳ್ಳಿ.

ಕಟಕ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಇತರರ ಅಸಹಕಾರ. ಕೌಟುಂಬಿಕ ಸಮಸ್ಯೆ ಪರಿಹಾರ, ಅದರಿಂದ ನೆಮ್ಮದಿ.

ಸಿಂಹ
ನಿಮ್ಮ ಆರೋಗ್ಯ ಸುಧಾರಣೆಗೆ ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಕೆಟ್ಟ ಆಹಾರ ದೂರವಿಡಿ. ಕೌಟುಂಬಿಕ ನೆಮ್ಮದಿ.

ಕನ್ಯಾ
ನಿಮ್ಮ ಆರ್ಥಿಕ ಪರಿಸ್ಥಿತಿ ಕುರಿತು ಹೆಚ್ಚಿನ ಗಮನ ಹರಿಸಿರಿ. ಹಠಾತ್ ಖರ್ಚಿನ ಪ್ರಸಂಗ ಉಂಟಾದೀತು. ಕೌಟುಂಬಿಕ ಅಸಹಕಾರ ಎದುರಿಸುವಿರಿ.

ತುಲಾ
ವೃತ್ತಿಯಲ್ಲೂ, ಕುಟುಂಬದಲ್ಲೂ ಅಧಿಕ ಜವಾಬ್ದಾರಿ. ಅದನ್ನು ಸರಿಯಾಗಿ ನಿಭಾಯಿಸಿ. ಆತ್ಮೀಯರು ನಿಮ್ಮ ನೆರವಿಗೆ ಬರುವರು. ವ್ಯಯ ಅಧಿಕ.

ವೃಶ್ಚಿಕ
ವೃತ್ತಿಯಲ್ಲಿ ಅಧಿಕ ಒತ್ತಡ. ಒಂದರ ನಂತರ ಮತ್ತೊಂದು ಕೆಲಸ ನಿಮ್ಮ ಹೆಗಲೇರುವುದು. ಇತರರ ಅಸಹಕಾರ ಅಸಹನೆ ತರಬಹುದು. ಸಂಯಮ ಮುಖ್ಯ.

ಧನು
ವೃತ್ತಿಯಲ್ಲಿ ಹೊಸ ಪ್ರಯೋಗ ನಿಮಗೆ ಉತ್ತಮ ಫಲ ನೀಡುವುದು. ತಲೆನೋವು, ರಕ್ತದೊತ್ತಡದ ಸಮಸ್ಯೆ ಕಾಡಬಹುದು.

ಮಕರ
ಹೊಸ ವ್ಯವಹಾರಕ್ಕೆ ಕೈಹಾಕುವ ಮೊದಲು ಕೌಟುಂಬಿಕ ಬದ್ಧತೆ ಪೂರೈಸಿಕೊಳ್ಳಿ. ಬಳಿಕ  ನಿಮಗೆ ಸಾಕಷ್ಟು ಸಮಯ ಸಿಗಲಾರದು. ಹಣದ ವ್ಯಯ ಅಧಿಕ.

ಕುಂಭ
ಸಂಬಂಧದ ವಿಚಾರದಲ್ಲಿ ಉಡಾಫೆ ಸಲ್ಲದು. ಅದನ್ನು ಗಂಭೀರವಾಗಿ ಪರಿಗಣಿಸಿ. ಸಂಬಂಧ ಕೆಟ್ಟರೆ ಸರಿಪಡಿಸುವುದು ಕಷ್ಟ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮೀನ
ಆಪ್ತರೊಂದಿಗೆ ಭಿನ್ನಮತ ಏರ್ಪಟ್ಟೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ವೃತ್ತಿಗೆ ಸಂಬಂಧಿಸಿ ಶುಭ ಬೆಳವಣಿಗೆ. ಆರ್ಥಿಕ ಉನ್ನತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!