ದಿನಭವಿಷ್ಯ: ಆಪ್ತರ ಸಂಗದಲ್ಲಿ ಹೆಚ್ಚು ಖುಷಿ ಕಾಣುವಿರಿ, ಕೆಲಸದ ಒತ್ತಡವೂ ಇಲ್ಲ

ಮೇಷ
ವೃತ್ತಿ ವ್ಯವಹಾರದಲ್ಲಿ ಕೆಲವು ಗೊಂದಲ ಬಾಧಿಸಬಹುದು. ಅದನ್ನು ನಿವಾರಿಸಿ ಕಾರ್ಯ ಎಸಗಿ. ಇಲ್ಲವಾದರೆ ಮಾಡಿದ ಕೆಲಸವೂ ವ್ಯರ್ಥ.

ವೃಷಭ
ಯೋಜಿಸಿ ಕಾರ್ಯ ಎಸಗಿ. ಅದರಿಂದ ಅನವಶ್ಯ ಗೊಂದಲ ನಿವಾರಣೆ. ಖಾಸಗಿ ಬದುಕು ಮತ್ತು ವೃತ್ತಿಯ ಮಧ್ಯೆ ಸಮತೋಲನ ಸಾಧಿಸಿರಿ.

ಮಿಥುನ
ಆಪ್ತರ ಸಂಗದಲ್ಲಿ ಹೆಚ್ಚು ಖುಷಿ ಕಾಣುವಿರಿ. ವೃತ್ತಿಯ ಒತ್ತಡ ನಿಮ್ಮನ್ನು ಇಂದು ಬಾಧಿಸಲಾರದು. ಹಣದ ವಿಚಾರದಲ್ಲಿ ನಿಮಗೆ ಪೂರಕವಾದ ಬೆಳವಣಿಗೆ.

ಕಟಕ
ಮನಸ್ಸಿನ ಒತ್ತಡ ನಿಭಾಯಿಸಿ. ಇಲ್ಲವಾದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರೀತು. ಆರ್ಥಿಕ ಒತ್ತಡ ತುಸು ನಿವಾರಣೆ. ಸಾಂಸಾರಿಕ ನೆಮ್ಮದಿ.

ಸಿಂಹ
ಖಾಸಗಿ ಬದುಕು ಮತ್ತು ವೃತ್ತಿಯಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ. ಭಾವುಕರಾಗದೆ ವರ್ತಿಸಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ.

ಕನ್ಯಾ
ಸಮಸ್ಯೆಗಳನ್ನು ಇತರರೊಂದಿಗೆ ಚರ್ಚಿಸಿ. ಅದರಿಂದ ಮನಸ್ಸಿಗೆ ಸಮಾಧಾನ ದೊರಕಬಹುದು. ನಿಮ್ಮಲ್ಲೇ ಕೊರಗುತ್ತಾ ಕೂರಬೇಡಿ.

ತುಲಾ
ಆರ್ಥಿಕವಾಗಿ ನಿಮಗೆ ಪೂರಕ ದಿನ. ಮನೆಯ ಸದಸ್ಯರ ಭಾವನೆಗಳಿಗೆ ಬೆಲೆ ಕೊಡಿ. ಅವರ ಬೇಡಿಕೆ ಕಡಗಣಿಸದಿರಿ. ವೃತ್ತಿಯ ಒತ್ತಡ ಮನೆಗೆ ತರಬೇಡಿ.

ವೃಶ್ಚಿಕ
ಖಾಸಗಿ ವಿಷಯಗಳು ಮನಸ್ಸಿನ ಶಾಂತಿ ಕದಡುತ್ತವೆ. ಇತರರೂ ನಿಮ್ಮ ವಿಚಾರದಲ್ಲಿ ಮೂಗು ತೂರಿಸುತ್ತಾರೆ. ಸಂಯಮದಿಂದ ಪರಿಸ್ಥಿತಿ ನಿಭಾಯಿಸಿ.

ಧನು
ಭಾವನಾತ್ಮಕ ತಲ್ಲಣ ಅನುಭವಿಸುವಿರಿ. ಆತ್ಮೀಯರೊಂದಿಗಿನ ವ್ಯವಹಾರ ಅದಕ್ಕೆ ಕಾರಣ. ನಿಮ್ಮನ್ನು ಕಡೆಗಣಿಸುವ ಭಾವನೆ ಕಾಡಬಹುದು.

ಮಕರ
ನಿಮ್ಮ ಗುರಿಯನ್ನು ಸುಲಭದಲ್ಲಿ ಸಾಧಿಸುವಿರಿ. ಸಾಂಸಾರಿಕ ಬಿಕ್ಕಟ್ಟು ಸೌಹಾರ್ದ ಪರಿಹಾರ. ಭಿನ್ನಮತ ನಿವಾರಣೆಗೆ ಮಾತುಕತೆಯೇ ದಾರಿ.

ಕುಂಭ
ಯಾವಾಗಲೂ ಇತರರ ಬಗ್ಗೆಯೆ ಚಿಂತಿಸುತ್ತಾ ನಿಮ್ಮ ಹಿತ ಕಡೆಗಣಿಸಬೇಡಿ. ನಿಮ್ಮ ಹಿತಾಸಕ್ತಿ ಬಗ್ಗೆಯೂ ಆಲೋಚಿಸಿ. ಕೌಟುಂಬಿಕ ಸಹಕಾರ.

ಮೀನ
ನಿಮ್ಮ ಖರ್ಚು ಇಂದು ಹೆಚ್ಚಬಹುದು. ಆದರೆ ಅದು ಅನಿವಾರ್ಯ. ಆದುದರಿಂದ ಅದಕ್ಕೆ ಹೆಚ್ಚು ಚಿಂತಿಸಬೇಡಿ. ಮನೆಯಲ್ಲಿ ಬಿಕ್ಕಟ್ಟು ಪರಿಹಾರ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!