ದಿನಭವಿಷ್ಯ: ಕೆಲವು ಕಟ್ಟುಪಾಡು ಹರಿದೆಸೆದು ಬದುಕಬೇಕು ಎಂದು ಬಯಸುತ್ತೀರಾ? ಹಾಗಿದ್ದರೆ ಇಂದು ಸೂಕ್ತ ದಿನ..

ಮೇಷ
ವೃತ್ತಿಯಲ್ಲಿ ಹೆಚ್ಚಿನ ಒತ್ತಡವು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಏರುಪೇರನ್ನು ಗಂಭೀರವಾಗಿ ಮನಸ್ಸಿಗೆ  ಹಚ್ಚಿಕೊಳ್ಳದಿರಿ.

ವೃಷಭ
ಆರ್ಥಿಕ ಗಳಿಕೆಗೆ ಹೊಸ ದಾರಿ ಕಂಡುಕೊಳ್ಳುವ ಯತ್ನ ಸಫಲ.ಕುಟುಂಬ ಸದಸ್ಯರಿಂದ ಉತ್ತಮ ಬೆಂಬಲ ಸಿಗುವುದು. ಸಣ್ಣ ಆರೋಗ್ಯ ಸಮಸ್ಯೆ ಉಂಟಾದೀತು.

ಮಿಥುನ
ಕುಟುಂಬದಲ್ಲಿ ಭಿನ್ನಮತ ತಲೆದೋರೀತು. ನಿಮ್ಮ ಕಠಿಣ ದುಡಿಮೆ ಇತರರಿಗೆ ಪ್ರೇರಣಾದಾಯಿ. ಆದರೆ ವಿರೋಧಿಗಳೂ ಇದ್ದಾರೆ, ಗೊತ್ತಿರಲಿ.

ಕಟಕ
ಕೆಲವು ಕಟ್ಟುಪಾಡು ಹರಿದೆಸೆದು ಬದುಕಬೇಕು ಎಂದು ಬಯಸುತ್ತೀರಾ? ಹಾಗಿದ್ದರೆ ಇಂದು ಸೂಕ್ತ ದಿನ. ನಿಮ್ಮ ಅಭಿಲಾಷೆ ಈಡೇರುವುದು.

ಸಿಂಹ
ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸುವುದು. ಆರ್ಥಿಕ ಪರಿಸ್ಥಿತಿ ಕೂಡಾ ಇಂದು ಉತ್ತಮ. ಬಂಧುಗಳಿಂದ ಸಹಕಾರ. ಕಾರ್ಯದಲ್ಲಿ ಸಫಲತೆ.

ಕನ್ಯಾ
ಯಶಸ್ಸು , ಹೊಗಳಿಕೆ ನಿಮ್ಮ ತಲೆಗೇರದಿರಲಿ. ಅಹಂಕಾರದ ವರ್ತನೆ ಕೊನೆಗೆ ನಿಮಗೇ ಮುಳುವಾದೀತು. ನಯವಿನಯ ನಿಮ್ಮಲ್ಲಿರಲಿ.

ತುಲಾ
ಭಾವನಾತ್ಮಕ ಏರುಪೇರಿನ ದಿನ. ಯಾರು ಹಿತೈಷಿಗಳು ಯಾರು ವಿರೋಧಿಗಳು ಎಂದು ಅರಿಯದೆ ಗೊಂದಲ. ಎಚ್ಚರಿಕೆ ಯಿಂದ ನಡಕೊಳ್ಳಿ.

ವೃಶ್ಚಿಕ
ಆಪ್ತರೆನಿಸಿದವರು ಹಠಾತ್ತನೆ ಭೇಟಿ ನೀಡುವರು. ಕೌಟುಂಬಿಕ ಬದುಕು ಹೆಚ್ಚು ಸೌಹಾರ್ದಪೂರ್ಣ. ವೃತ್ತಿಯ ಸಮಸ್ಯೆ ಇಂದು ಪರಿಹಾರ.

ಧನು
ಕೆಲಸದಲ್ಲಿ , ವ್ಯವಹಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಕೆ ಬೇಡ. ಅಂತಿಮವಾಗಿ ನಿಮಗೇ ಯಶ ಸಿಗುವುದು ಕೌಟುಂಬಿಕ ಸಂತೋಷ.

ಮಕರ
ಹೊಟ್ಟೆ ಕೆಡುವಂತಹ ಪ್ರಸಂಗ ಉದ್ಭವಿಸೀತು. ಹಿತವಾದ ಆಹಾರ ಸೇವನೆಯೇ ಒಳಿತು. ಇತರರ ಅಭಿಪ್ರಾಯಕ್ಕೆ ಮನ್ನಣೆ ಕೊಡಿ. ಇಲ್ಲವಾದರೆ ಸಂಘರ್ಷ.

ಕುಂಭ
ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳಲು ಕಷ್ಟ ಪಡುವಿರಿ. ನಿಮ್ಮ ಮಾತುಗಳಿಗೆ ಮನ್ನಣೆ ಸಿಗುವುದಿಲ್ಲ. ನೀವೇ ಹೊಂದಾಣಿಕೆ ಮಾಡಿಕೊಳ್ಳಬೇಕು.

ಮೀನ
ವೃತ್ತಿಯ ಒತ್ತಡದ ಮಧ್ಯೆ ಕುಟುಂಬದ ಕಡೆಗೂ ಗಮನ ಕೊಡಿ. ನಿಮ್ಮದೇ ಅಭಿಪ್ರಾಯವನ್ನು ಹೇರಲು ಹೋಗದಿರಿ. ಸಹನೆಯಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!