ಮೇಷ
ಕೌಟುಂಬಿಕ ವಿಚಾರದಲ್ಲಿ ಭಾವನಾತ್ಮಕ ಏರುಪೇರು. ಸಣ್ಣ ವಿಷಯವೊಂದು ಭಾವೋದ್ವೇಗ ಸೃಷ್ಟಿಸುತ್ತದೆ. ಅನಾರೋಗ್ಯ ಕಾಡಲಿದೆ.
ವೃಷಭ
ಇಂದು ಸಣ್ಣ ವಿಷಯವು ವಿರಸಕ್ಕೆ ಕಾರಣವಾಗದಂತೆ ಎಚ್ಚರ ವಹಿಸಿ. ಎಲ್ಲರ ಜತೆ ಸೌಹಾರ್ದಯುತ ನಡವಳಿಕೆ ಅಗತ್ಯ. ಸಾಂಸಾರಿಕ ಕಲಹ.
ಮಿಥುನ
ಖರ್ಚು ಕಡಿಮೆ ಮಾಡಿ ಉಳಿತಾಯ ಹೆಚ್ಚಿಸಲು ಗಮನ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ದುಂದುವೆಚ್ಚ ಅಧಿಕ. ಆತ್ಮೀಯರ ಜತೆಗಿನ ವಿರಸ ನಿವಾರಣೆ.
ಕಟಕ
ಇಂದು ಪ್ರಮುಖ ಕೆಲಸ ಮುಗಿಸಲೇ ಬೇಕಾದ ಒತ್ತಡ. ಅದನ್ನು ಸಮರ್ಥವಾಗಿ ನಿಭಾಯಿಸಲು ಸಫಲರಾಗುವಿರಿ. ಕುಟುಂಬದ ಸಹಕಾರ.
ಸಿಂಹ
ನಿಮ್ಮ ಇಚ್ಛೆ ಈಡೇರುವ ದಿನ. ಹೆಚ್ಚು ಕಷ್ಟವಿಲ್ಲದೆ ಉದ್ದೇಶ ಸಫಲ. ನೀವು ತೆಗೆದುಕೊಳ್ಳುವ ಪ್ರತಿಯೊಂದು ನಡೆ ಈ ನಿಟ್ಟಿನಲ್ಲಿ ಮುಖ್ಯ ಹೆಜ್ಜೆಯಾಗಲಿದೆ.
ಕನ್ಯಾ
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಸನ್ನಿವೇಶ. ಸಂಬಂಧದಲ್ಲಿ ಮೂಡಿದ್ದ ಅಪಸ್ವರ ನಿವಾರಣೆ. ಇತರರನ್ನು ಅರ್ಥ ಮಾಡಿಕೊಳ್ಳಲು ಸಫಲರಾಗುವಿರಿ.
ತುಲಾ
ಯಶಸ್ವಿ ದಿನ. ಆರ್ಥಿಕ ಪರಿಸ್ಥಿತಿ ಉತ್ತಮ. ಸಂಬಂಧದಲ್ಲಿ ಸೌಹಾರ್ದತೆ ಕಾಪಾಡಲು ಗಮನ ಕೊಡಿ. ವಾಗ್ವಾದಕ್ಕೆ ಇಳಿಯದಿರಿ.
ವೃಶ್ಚಿಕ
ಗುರಿ ಸಾಧನೆ. ಕೆಲಸದಲ್ಲಿ ಉನ್ನತಿ. ಆರ್ಥಿಕ ಪ್ರಗತಿ. ಒಬ್ಬರ ಕುರಿತಾದ ತಪ್ಪಭಿಪ್ರಾಯ ನಿವಾರಣೆ ಆದೀತು. ಹಿರಿಯರ ಜತೆ ವಾಗ್ವಾದಕ್ಕೆ ಇಳಿಯದಿರಿ. ಬಂಧುಗಳ ಸಹಕಾರ.
ಧನು
ನಗುತ್ತಲೇ ಎಲ್ಲರ ಜತೆ ವ್ಯವಹರಿಸಿ. ಎಲ್ಲ ಕಾರ್ಯ ಸುಲಲಿತವಾಗಿ ನಡೆಯುವುದನ್ನು ಕಾಣುವಿರಿ. ಆರ್ಥಿಕ ಬಿಕ್ಕಟ್ಟು ನಿವಾರಣೆ, ಧನಲಾಭ.
ಮಕರ
ನಿಮ್ಮ ಪಾಲಿಗಿಂದು ಸುಗಮ ದಿನ. ನೀವು ಬಯಸಿದ ವಿಚಾರ ಸುಲಲಿತವಾಗಿ ಇತ್ಯರ್ಥ. ಆಪ್ತ ಬಂಧುಗಳ ಜತೆ ಆತ್ಮೀಯ ಕಾಲಕ್ಷೇಪ. ಆರ್ಥಿಕ ವ್ಯಯ ಕಡಿಮೆ.
ಕುಂಭ
ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಪ್ರತಿಫಲ ಪಡೆಯಲಾರಿರಿ. ನಿರಾಶೆ ಉಂಟಾದೀತು. ಇತರರ ಪ್ರಭಾವಕ್ಕೆ ಸಿಲುಕಿ ಸಮ್ಮತವಲ್ಲದ ಕೆಲಸ ಮಾಡಬೇಡಿ.
ಮೀನ
ವೃತ್ತಿಯಲ್ಲಿ ನೀವು ಅಪೇಕ್ಷಿಸಿದ ಫಲ ಲಭ್ಯ. ಕೌಟುಂಬಿಕ ಉದ್ವಿಗ್ನತೆ ಮನಸ್ಸಿನ ಶಾಂತಿ ಕದಡಬಹುದು. ಹಿರಿಯರಿಗೆ ಅನಾರೋಗ್ಯಚಿಂತೆ.