ಮೇಷ
ವೃತ್ತಿಯಲ್ಲಿ ಸಹೋದ್ಯೋಗಿಗಳ ಪೈಪೋಟಿ ಎದುರಿಸುವಿರಿ. ಆರ್ಥಿಕ ಹಿನ್ನಡೆ ಬಾಧಿಸುವುದು. ಆತ್ಮೀಯರ ಜತೆ ಸಣ್ಣ ವಿಷಯಕ್ಕೆ ಜಗಳ.
ವೃಷಭ
ಪ್ರಮುಖ ನಿರ್ಧಾರ ತಾಳುವ ಮುನ್ನ ಅದರ ಸಾಧಕಭಾದಕ ಯೋಚಿಸಿರಿ. ತಪ್ಪು ನಿರ್ಣಯ ಮನಶ್ಯಾಂತಿ ಕೆಡಿಸಬಹುದು. ಧನ ವ್ಯಯ ಹೆಚ್ಚು.
ಮಿಥುನ
ಕೆಲವರು ನಿಮ್ಮ ವಿರುದ್ಧ ಪಿತೂರಿ ನಡೆಸಿಯಾರು. ಹಾಗೆಂದು ಅವರನ್ನು ಎದುರಿಸಲು ನಿಮ್ಮಿಂದ ಕಷ್ಟವಾಗದು. ಅಂತಿಮ ಗೆಲುವು ನಿಮ್ಮದೆ. ಚಿಂತೆ ಬೇಡ.
ಕಟಕ
ನಿಮ್ಮ ಸಮಸ್ಯೆಗೆ ಇತರರ ಬಳಿ ಪರಿಹಾರ ಕೇಳಲು ಹೋಗುವುದಕ್ಕಿಂತ ನಿಮ್ಮಲ್ಲೇ ಪರಿಹಾರ ಕಂಡುಕೊಳ್ಳಿ. ಕಷ್ಟಪಟ್ಟರೆ ಯಾವುದೂ ಅಸಾಧ್ಯವಲ್ಲ.
ಸಿಂಹ
ಕೆಲದಿನಗಳ ಕೋಲಾಹಲದ ಬಳಿಕ ನಿಮ್ಮ ಬದುಕು ಸರಿದಾರಿಗೆ ಮರಳುತ್ತದೆ. ಅಸ್ತವ್ಯಸ್ತಗೊಂಡ ವಿಷಯಗಳು ಇತ್ಯರ್ಥ ಕಾಣುತ್ತವೆ.
ಕನ್ಯಾ
ಕೆಲವರ ಕುರಿತಂತೆ ತಪ್ಪು ಕಲ್ಪನೆ ಬೆಳೆಸಿಕೊಳ್ಳುವಿರಿ. ಇಂತಹ ಪೂರ್ವಗ್ರಹ ತೊಡೆಯಬೇಕು. ಆಗ ನಿಮಗೆ ಎಲ್ಲರ ಜತೆ ಹೊಂದಿಕೊಳ್ಳಲು ಸುಲಭವಾಗುವುದು.
ತುಲಾ
ನಿಮ್ಮ ಬಜೆಟಿಗೆ ಮೀರಿದ ಖರ್ಚು ಮಾಡುವಿರಿ. ಬಳಿಕ ಆ ಕುರಿತು ಪಶ್ಚಾತ್ತಾಪ ಪಡುವಿರಿ. ಕೌಟುಂಬಿಕ ಬೇಡಿಕೆ ಈಡೇರಿಸಲು ಆದ್ಯತೆ ಕೊಡುವಿರಿ.
ವೃಶ್ಚಿಕ
ಆತ್ಮೀಯರ ಜತೆಗಿನ ಸಂಬಂಧ ಹಾಳಾಗುವ ಪ್ರಸಂಗ ಬಂದೀತು. ಅದಕ್ಕೆ ಆಸ್ಪದ ಕೊಡದಿರಿ. ಅವರ ಮನಸ್ಥಿತಿ ಅರಿತು ವ್ಯವಹರಿಸಿರಿ. ಕಠಿಣ ನಿಲುವು ತರವಲ್ಲ.
ಧನು
ಎಲ್ಲರ ಜತೆ ಬೆರೆತು ಬಾಳಲು ಕಲಿಯಿರಿ. ಎಲ್ಲರಿಂದ ಪ್ರತ್ಯೇಕವಾಗಿ ಉಳಿಯುತ್ತೇನೆ ಎಂಬ ಧೋರಣೆ ಪ್ರಯೋಜನ ತರದು. ಹೊಂದಾಣಿಕೆ ಬಾಳಲ್ಲಿ ಮುಖ್ಯ.
ಮಕರ
ನಿಮ್ಮನ್ನು ಕಾಡುತ್ತಿರುವ ಸಮಸ್ಯೆ ಪರಿಹರಿಸಲು ನೀವೇ ಸಮರ್ಥರು. ಆದರೂ ಇತರರ ನೆರವಿಗೆ ಕಾಯುವುದೇಕೆ? ಸೂಕ್ತ ಕ್ರಮ ತೆಗೆದುಕೊಳ್ಳಿ.
ಕುಂಭ
ನಿಮ್ಮ ಮಾನಸಿಕ ಕ್ಷೆಭೆಗೆ ಸಾಂತ್ವನ ತುಂಬುವವರು ಬಳಿ ಬರುತ್ತಾರೆ. ಅವರ ಮಾತುಗಳಿಗೆ ಕಿವಿಗೊಡಿ. ಆರೋಗ್ಯಕ್ಕೆ ಹಾನಿಕರ ಹವ್ಯಾಸ ಬಿಡಿ.
ಮೀನ
ನಿಮಗೆ ಉದ್ವಿಗ್ನತೆ ಸೃಷ್ಟಿಸಿದ ವಿಷಯ ಇಂದು ಇತ್ಯರ್ಥ ಕಾಣಲಿದೆ. ನೀವು ಉದ್ದೇಶಿಸಿದ ಕಾರ್ಯ ದಲ್ಲಿ ಧೈರ್ಯದಿಂದ ಮುನ್ನಡೆಯಿರಿ.