ಮೇಷ
ವೃತ್ತಿಯಲ್ಲಿ ಸಂಘರ್ಷದ ಪರಿಸ್ಥಿತಿ ಉಂಟಾದೀತು. ಸಹನೆ ಕಾಯ್ದುಕೊಳ್ಳಬೇಕು. ಮನೆಯಲ್ಲಿ ಸಣ್ಣ ಸಮಸ್ಯೆಯೊಂದು ನೆಮ್ಮದಿ ಕದಡುವುದು.
ವೃಷಭ
ಭಾವನಾತ್ಮಕ ಪರಿಸ್ಥಿತಿ ಎದುರಿಸಬೇಕಾದೀತು. ಇತರರ ಮುಂದೆ ದುರ್ಬಲ ಮನಸ್ಸಿ ನವರೆಂದು ತೋರಿಸಿ ಕೊಳ್ಳಬೇಡಿ. ದೃಢ ನಿಲುವು ತೋರಿ.
ಮಿಥುನ
ಏಕತಾನತೆಯ ಬದುಕು ಬೇಸರ ಹುಟ್ಟಿಸಬಹುದು. ಹೊಸದೇನೋ ಮಾಡಲು ತುಡಿತ ಹುಟ್ಟಬಹುದು. ಆದರೆ ಅದಕ್ಕೆ ಸೂಕ್ತ ಕಾಲಾವಕಾಶ ದೊರಕದು.
ಕಟಕ
ಪ್ರತಿಯೊಂದು ಕೆಲಸ ನಿಯಮಾನುಸಾರ ಮಾಡಿರಿ. ವಿಭಿನ್ನ ದಾರಿ ತುಳಿದರೆ ಅದು ಫಲ ನೀಡಲಾರದು. ಹಣ ಗಳಿಕೆಗೆ ಸುಲಭ ದಾರಿ ಹುಡುಕದಿರಿ.
ಸಿಂಹ
ಬಂಧುತ್ವಕ್ಕೆ ಸಂಬಂಧಿಸಿ ಸಂತೋಷದ ಸುದ್ದಿ ಕೇಳುವಿರಿ. ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣುವುದು. ಎಲ್ಲರೊಡನೆ ಹೊಂದಾಣಿಕೆ ಸಾಧಿಸಿ.
ಕನ್ಯಾ
ಅತಿಯಾದ ಕೆಲಸದ ಒತ್ತಡವು ನಿಮ್ಮ ಉಲ್ಲಾಸ ಕಸಿಯಬಹುದು. ಸಂಜೆ ವೇಳೆಗೆ ಜಡತೆ ಆವರಿಸಬಹುದು. ಆಪ್ತರ ಜತೆಗಿನ ಸಂಗ ಉತ್ಸಾಹ ತುಂಬಬಲ್ಲುದು.
ತುಲಾ
ಪ್ರಯಾಣದ ಯೋಜನೆ ಇದ್ದರೆ ಅದನ್ನು ಮುಂದೆ ಹಾಕಿ. ಈಗ ಪ್ರಯಾಣಕ್ಕೆ ಸಕಾಲವಲ್ಲ. ಕೌಟುಂಬಿಕ ವಿಷಯಗಳನ್ನು ಆದ್ಯತೆ ಯಲ್ಲಿ ನಿಭಾಯಿಸಿ. ಆರ್ಥಿಕ ಬಿಕ್ಕಟ್ಟು.
ವೃಶ್ಚಿಕ
ಆಪ್ತರೊಂದಿಗೆ ಹೆಚ್ಚು ಕಾಲ ಕಳೆಯಲು ಬಯಸುವಿರಿ. ಅದರಲ್ಲಿ ಸಫಲರೂ ಆಗುವಿರಿ. ಆದರೂ ಕೆಲವು ತೊಡಕುಗಳು ಸಂತೋಷ ಹಾಳುಮಾಡಬಹುದು.
ಧನು
ಆರ್ಥಿಕ ಹೊರೆ ಬಾಧಿಸುವುದು. ಖರ್ಚು ಕಡಿಮೆ ಮಾಡಬೇಕು. ಅನವಶ್ಯ ವಸ್ತು ಖರೀದಿಗೆ ಹೋಗದಿರಿ. ಕೌಟುಂಬಿಕ ವಿಷಯವೊಂದು ಚಿಂತೆಗೆ ಕಾರಣ.
ಮಕರ
ನೀವು ಮಹತ್ವಾಕಾಂಕ್ಷಿ. ಆದರೆ ನಿಮ್ಮ ಸಾಮರ್ಥ್ಯಕ್ಕೆ ಎಟುಕದ ಕೆಲಸ ಮಾಡಲು ಹೋಗಬೇಡಿ. ಅದರಿಂದ ನಿರಾಶೆಯಾದೀತು. ಕೌಟುಂಬಿಕ ಅಸಹಕಾರ.
ಕುಂಭ
ನಿಮ್ಮ ಕಾರ್ಯಗಳು ಸತತ ವಿಫಲವಾಗುವುದು ನಿಮಗೆ ಹತಾಶೆ ಹುಟ್ಟಿಸುತ್ತದೆ. ನಿರಾಶೆ ಬೇಡ, ತಾಳ್ಮೆಯಿಂದ ಕಾದರೆ ಎಲ್ಲವೂ ಸರಿಹೋಗುವುದು.
ಮೀನ
ಕೆಲವು ಕಾರ್ಯಗಳ ಫಲಿತಾಂಶಕ್ಕೆ ಕಾಯಬೇಕು. ತಕ್ಷಣವೇ ಫಲ ಸಿಗಬೇಕೆಂದು ಆತುರ ಸಲ್ಲದು. ಇದನ್ನು ನೀವಿಂದು ನೆನಪಲ್ಲಿ ಇಟ್ಟುಕೊಳ್ಳಬೇಕು.