ದಿನಭವಿಷ್ಯ: ಸಮಸ್ಯೆ, ಆತಂಕ ನಿವಾರಣೆಯಾಗುವ ದಿನವಿದು.. ಯಾವ ತೊಂದರೆಯೂ ಇಲ್ಲ

ಮೇಷ
ಅತಿಯಾದ ದೈಹಿಕ ಶ್ರಮದಿಂದ ಬಸವಳಿಯುವ ಪ್ರಸಂಗ ಒದಗೀತು. ಸಣ್ಣ ವಿಷಯಕ್ಕೂ  ಅಸಹನೆ ತೋರುವಿರಿ. ಸಂಯಮ ತಾಳುವುದು ಅಗತ್ಯ.

ವೃಷಭ
ಪ್ರಾಕ್ಟಿಕಲ್ ಆಗಿ ಚಿಂತಿಸಿ. ಭಾವಾವೇಶಕ್ಕೆ ಒಳಗಾಗಿ ಅನುಚಿತ ಕ್ರಮಕ್ಕೆ ಎಳಸದಿರಿ. ಅನ್ಯರ ಎದುರು ಮುಜುಗರಕ್ಕೆ ಸಿಲುಕದಂತೆ ಎಚ್ಚರ ವಹಿಸಿ.

ಮಿಥುನ
ಇಂದು ನಿಮ್ಮ ಮನಸ್ಥಿತಿ ಶಾಂತವಾಗಿರದು. ಅಸಹಜ ಪ್ರಸಂಗ ಎದುರಾದೀತು. ಭಾವನೆ ನಿಯಂತ್ರಣ ತಪ್ಪಬಹುದು. ಕೌಟುಂಬಿಕ ಒತ್ತಡ.

ಕಟಕ
ಸಂತೋಷ, ಉಲ್ಲಾಸದ ದಿನ. ನಿಮ್ಮ ಕಾರ್ಯದಲ್ಲಿ ಕೆಲವರ ಸಹಕಾರ ಪಡೆಯುವಿರಿ. ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಬೇಕಾದೀತು.

ಸಿಂಹ
ಬಿಡುವಿಲ್ಲದ ದಿನ. ಹಾಗೆಂದು ಅತ್ಯಂತ ಸಫಲತೆಯನ್ನೂ ಪಡೆಯುವಿರಿ. ನೀವು ಇಷ್ಟ ಪಡುವ ಕಾರ್ಯದಲ್ಲಿ ತೊಡಗುವ ಅವಕಾಶ.

ಕನ್ಯಾ
ಪ್ರೀತಿಪಾತ್ರರ ಅಪ್ರಿಯ ವರ್ತನೆಯ ಕಾರಣದಿಂದಾಗಿ ನೀವಿಂದು ಅಸಹನೆಗೆ ಒಳಗಾಗುವಿರಿ. ನಿಮ್ಮ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿರಿ.

ತುಲಾ
ಗೊಂದಲ, ಅಸಹನೆ ಕಾಡುವುದು. ಅದಕ್ಕೆ ಕಾರಣ ಪ್ರೀತಿಪಾತ್ರರ ಜತೆಗಿನ ಸಂಘರ್ಷ. ಅರ್ಥ ಮಾಡಿಕೊಂಡು ವ್ಯವಹರಿಸಿದರೆ ಇದನ್ನು ನಿವಾರಿಸಬಹುದು.

ವೃಶ್ಚಿಕ
ಸಮಸ್ಯೆಗೆ ಪ್ರಾಕ್ಟಿಕಲ್ ಪರಿಹಾರ ಕಂಡುಕೊಳ್ಳಲು ಸಫಲರಾಗುವಿರಿ. ದೊಡ್ಡ ಸಮಸ್ಯೆಗೆ ತೀರಾ ಸರಳ ಪರಿಹಾರವೂ ಸಾಧ್ಯ ಎಂಬುದನ್ನು ಕಂಡುಕೊಳ್ಳುವಿರಿ.

ಧನು
ಸಮಸ್ಯೆ , ಆತಂಕ ನಿವಾರಣೆ ಆಗುವ ದಿನವಿದು. ನಿಮ್ಮ ಪ್ರಯತ್ನವಿಲ್ಲದೆ ತಾನಾಗಿ ಅವು ಪರಿಹಾರ ಕಾಣುವವು. ಮಾನಸಿಕ ನಿರಾಳತೆ.

ಮಕರ
ನೀವು ಕೈಗೊಳ್ಳುವ ಕ್ರಮವು ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ನೆಮ್ಮದಿ ತರುವುದು. ನಿಮ್ಮ ಸಾಮರ್ಥ್ಯದ ಅರಿವು ಮೇಲಧಿಕಾರಿಗೆ ಆಗಲಿದೆ.

ಕುಂಭ
ಹಿಂದೆ ಆದ ಘಟನೆಯು ನಿಮ್ಮ ಮನದಲ್ಲಿ ಕಹಿಯನ್ನು ಉಳಿಸಿದ್ದರೆ ಅದನ್ನು ತೊಡೆದು ಹಾಕಲು ಸಕಾಲ. ಭವಿಷ್ಯದ ಕಡೆಗೆ ಕಣ್ಣು ಹಾಯಿಸಿರಿ.

ಮೀನ
ನಿಮ್ಮ ಬದುಕಿನ ಕುರಿತು ನೀವೇ ನಿರ್ಧಾರ ತಾಳಬೇಕು. ಬೇರೆಯವರ ಮಾತು ಕೇಳಲು ಹೋಗದಿರಿ. ಅನ್ಯರು ಮೂಗು ತೂರಿಸಲು ಬಿಡಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!