ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಅವರು ಶುಕ್ರವಾರ ಉಕ್ರೇನ್ ಸರಕಾರಕ್ಕೆ ನಾಲ್ಕು BHISHM ಕ್ಯೂಬ್ಸ್ಗಳನ್ನು ನೀಡಿದ್ದಾರೆ. ಈ ಕ್ಯೂಬ್ಸ್ಗಳನ್ನು ಸ್ವೀಕರಿಸಿ, ಮಾನವೀಯ ನೆರವಿಗಾಗಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಧನ್ಯವಾದ ತಿಳಿಸಿದ್ದಾರೆ.
ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ಸಮಯದಲ್ಲಿ BHISHM ಕ್ಯೂಬ್ಸ್ಗಳು ಉಕ್ರೇನ್ಗೆ ಸಹಕಾರಿಯಾಗಲಿದೆ. ಏಕೆಂದರೆ ಇದು ಗಾಯಗೊಂಡವರಿಗೆ ತುರ್ತು ವೈದ್ಯಕೀಯ ಆರೈಕೆಯನ್ನು ಒದಗಿಸುತ್ತದೆ.
BHISHM ಕ್ಯೂಬ್ಸ್ಗಳು ವಿಪತ್ತು ನಿರ್ವಹಣೆಗಾಗಿ ವಿಶೇಷವಾದ ‘ಮೇಡ್ ಇನ್ ಇಂಡಿಯಾ’ ಮೊಬೈಲ್ ಆಸ್ಪತ್ರೆಯಾಗಿದ್ದು, ಇದನ್ನು ಏರ್‌ಲಿಫ್ಟ್ ಮಾಡಬಹುದು. BHISHM ಎಂಬ ಹೆಸರು ‘ಭಾರತ್ ಹೆಲ್ತ್ ಇನಿಶಿಯೇಟಿವ್ ಫಾರ್ ಸತ್ಯಯೋಗ್ ಆಯಂಡ್ ಮೈತ್ರಿ’ಯನ್ನು ಸೂಚಿಸುತ್ತದೆ. ಇದು ಭಾರತದ ಸಹಕಾರ ಮತ್ತು ಸ್ನೇಹದ ಮನೋಭಾವವನ್ನು ಸಂಕೇತಿಸುತ್ತದೆ.
ಆಘಾತ, ರಕ್ತಸ್ರಾವ, ಸುಟ್ಟಗಾಯಗಳು ಮತ್ತು ಮುರಿತಗಳು ಮುಂತಾದ ತುರ್ತು ಪರಿಸ್ಥಿತಿಗಳ ಸುಮಾರು 200 ಪ್ರಕರಣಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಈ ಕ್ಯೂಬ್ಸ್ ಹೊಂದಿದೆ. ಮೂಲಭೂತ ಆಪರೇಷನ್ ರೂಮ್‌ಗೆ (OR) ಅಗತ್ಯವಾದ ಶಸ್ತ್ರಚಿಕಿತ್ಸಾ ಸಾಧನಗಳನ್ನು ಹೊಂದಿದೆ. ಇದು ದಿನಕ್ಕೆ 10-15 ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸೀಮಿತ ಪ್ರಮಾಣದಲ್ಲಿ ತನ್ನದೇ ಆದ ವಿದ್ಯುತ್ ಮತ್ತು ಆಮ್ಲಜನಕವನ್ನು ಸಹ ಉತ್ಪಾದಿಸುತ್ತದೆ.
ಈ ಕುರಿತು ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಡ್ಡಿ, ಭೀಷ್ಮವು ವೈದ್ಯಕೀಯ ಸೌಲಭ್ಯಗಳನ್ನು ತ್ವರಿತವಾಗಿ ನಿಯೋಜಿಸಬಹುದಾದ ರೀತಿಯಲ್ಲಿ ಖಾತ್ರಿಪಡಿಸುವ ಒಂದು ಅನನ್ಯ ಪ್ರಯತ್ನವಾಗಿದೆ. ಇದು ವೈದ್ಯಕೀಯ ಆರೈಕೆಗಾಗಿ ಔಷಧಗಳು ಮತ್ತು ಸಲಕರಣೆಗಳನ್ನು ಒಳಗೊಂಡಿರುವ ಕ್ಯೂಬ್ಸ್ಗಳನ್ನು ಒಳಗೊಂಡಿದೆ. ಭೀಷ್ಮ ಕ್ಯೂಬ್ಸ್ಗಳನ್ನು ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ನೀಡಲಾಯಿತು ಎಂದು ತಿಳಿಸಿದ್ದಾರೆ.
ಈ ಕ್ಯೂಬ್ಸ್ನ ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ವೈದ್ಯಕೀಯ ತಜ್ಞರ ತಂಡವನ್ನು ಉಕ್ರೇನ್ಗೆ ನಿಯೋಜಿಸಲಾಗಿದೆ. ಈ ತಂಡವು ಉಕ್ರೇನಿಯನ್ ಸಿಬ್ಬಂದಿಗೆ ಆರಂಭಿಕ ತರಬೇತಿಯನ್ನು ನೀಡುತ್ತದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.