ಮೇಷ
ದಿನವಿಡೀ ಬಿಡುವಿಲ್ಲದ ಕಾರ್ಯ. ಹೊಣೆಗಾರಿಕೆ ಹೆಚ್ಚು. ಸಂಜೆ ವೇಳೆಗೆ ದೇಹಾಲಾಸ್ಯ ಕಾಡಬಹುದು. ಹಳೆಯ ಗೆಳೆಯರ ಭೇಟಿ. ಖರ್ಚು ಅಧಿಕ.
ವೃಷಭ
ಕೆಲಸದ ಹೊರೆ ಅಧಿಕ. ಆದರೆ ಅದನ್ನು ಸಮಯ ಮಿತಿಯಲ್ಲಿ ಪೂರೈಸಲು ಸಫಲ. ಸಂಜೆ ವೇಳೆಗೆ ಎಲ್ಲ ಹೊಣೆಗಾರಿಕೆ ನಿರ್ವಹಿಸಿದ ತೃಪ್ತಿ.
ಮಿಥುನ
ಮನೆಯ ಅಭಿವೃದ್ಧಿಯ ಕುರಿತು ಯೋಜನೆ ಹಾಕಲು ಸಕಾಲ. ಎಲ್ಲವೂ ನಿಮಗೆ ಪೂರಕವಾಗಿ ಪರಿಣಮಿಸಲಿದೆ. ಆರ್ಥಿಕ ವ್ಯಯ ಹೆಚ್ಚು.
ಕಟಕ
ಬಾಕಿ ಉಳಿದ ಪ್ರಮುಖ ಕಾರ್ಯ ಇಂದು ಪೂರೈಸಲು ಶಕ್ತರಾಗುವಿರಿ. ಕುಟುಂಬದ ಜತೆ ಶಾಪಿಂಗ್ ನಡೆಸುವ ಅವಕಾಶ.
ಸಿಂಹ
ಅನಿರೀಕ್ಷಿತ ಲಾಭದ ದಿನ. ನಿಮ್ಮ ಕುಶಲ ಕಲೆ ಇತರರನ್ನು ಅಚ್ಚರಿಗೆ ತಳ್ಳುವುದು. ಸ್ವಂತ ಉದ್ಯಮ ಹೊಂದಿರುವವರಿಗೆ ವ್ಯವಹಾರದಲ್ಲಿ ಯಶ.
ಕನ್ಯಾ
ಎಲ್ಲ ವಿಷಯಗಳು ಇಂದು ನಿಮಗೆ ಪೂರಕವಾಗಿ ವರ್ತಿಸಲಿವೆ. ಹಾಗಾಗಿ ಪ್ರಮುಖ ಕಾರ್ಯ ಎಸಗಲು ಮುಂದೆ ಹೆಜ್ಜೆ ಇಡಿ. ಹಿಂಜರಿಕೆ ಬೇಡ.
ತುಲಾ
ಉತ್ಸಾಹ, ಉಲ್ಲಾಸ ಇಂದು ನಿಮ್ಮ ದಿನಚರಿ. ಕೌಟುಂಬಿಕ ಸಮಾಗಮ. ಸಣ್ಣ ಸಮಸ್ಯೆ ತಲೆದೋರಿದರೂ ಅದನ್ನು ಮರೆತು ಆನಂದಿಸುವಿರಿ.
ವೃಶ್ಚಿಕ
ಇಂದಿನ ಯೋಜನೆಗೆ ಸಣ್ಣ ಅಡ್ಡಿ ಬಂದೀತು. ಕೆಲವರ ಅಸಹಕಾರ ನಿಮ್ಮ ಮನಸ್ಸು ಮುದುಡಿಸುವುದು. ಧೃತಿಗೆಡದಿರಿ. ನಿಮ್ಮ ಕಾರ್ಯ ಮುಂದರಿಸಿ.
ಧನು
ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ಅವಕಾಶ ದೊರಕಲಿದೆ. ಕೌಟುಂಬಿಕ ಶಾಂತಿ, ಸಮಾಧಾನ. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ ಲಭ್ಯ.
ಮಕರ
ಇತರರ ಅಸಹಕಾರ. ಕಾಲಮಿತಿಯಲ್ಲಿ ನಿಮ್ಮ ಕೆಲಸ ಪೂರೈಸಲಾಗದು. ಅನಪೇಕ್ಷಿತ ಖರ್ಚು. ಆದರೂ ಕುಟುಂಬದ ಸಂಗದಲ್ಲಿ ಸಂತೋಷ ಆನುಭವಿಸುವಿರಿ.
ಕುಂಭ
ದಿನದ ಆರಂಭ ಅಡೆತಡೆ, ವಿಘ್ನಗಳಿಂದ ಶುರುವಾಗುವುದು. ಆದರೆ ದಿನದಂತ್ಯಕ್ಕೆ ಎಲ್ಲವೂ ಸುಗಮ. ಒತ್ತಡ ನಿವಾರಣೆ. ಮಾನಸಿಕ ನಿರಾಳತೆ.
ಮೀನ
ಅಧಿಕ ಕೆಲಸದ ಒತ್ತಡ. ದಿನವಿಡೀ ವಿರಾಮವಿಲ್ಲದೆ ದುಡಿಯುವಿರಿ. ಹತಾಶೆ ಕಾಡಬಹುದು. ಗುಣಾತ್ಮಕ ಚಿಂತನೆ ಬೆಳೆಸಿಕೊಳ್ಳಿ.