ಮೇಷ
ವೃತ್ತಿಯಲ್ಲಿ ಎಲ್ಲವೂ ನಿಮಗೆ ಅನುಕೂಲಕರ. ನೀವೆಣಿಸಿದಂತೆ ಎಲ್ಲ ಸಾಗುವುದು. ಕೌಟುಂಬಿಕ ಬದುಕು ತೃಪ್ತಿಕರ. ಹಣಕಾಸು ಸ್ಥಿತಿ ಸಮಾಧಾನಕರ.
ವೃಷಭ
ಹಣದ ವಿಚಾರದಲ್ಲಿ ಎಚ್ಚರದಿಂದ ನಡಕೊಳ್ಳಿ. ನಷ್ಟವಾಗುವ ಅಥವಾ ಅಪವ್ಯಯವಾಗುವ ಸಾಧ್ಯತೆ ಕಂಡುಬರುತ್ತಿದೆ. ಶೀತ, ಜ್ವರದ ಸಮಸ್ಯೆ ಕಾಡಬಹುದು.
ಮಿಥುನ
ವೃತ್ತಿಯಲ್ಲಿ ಒತ್ತಡ ಹೆಚ್ಚು. ಹೆಚ್ಚುವರಿ ಕೆಲಸದ ಹೊರೆ. ಮನೆಯಲ್ಲಿ ಮಾತಿನ ಮೇಲೆ ಹಿಡಿತವಿಡಿ. ಅನವಶ್ಯ ವಾಗ್ವಾದಕ್ಕೆ ಆಸ್ಪದ ನೀಡದಿರಿ.
ಕಟಕ
ವ್ಯವಹಾರದಲ್ಲಿ ಯಶ. ಉದ್ಯೋಗದಲ್ಲಿ ಬಡ್ತಿಯ ಅವಕಾಶ. ಧನಲಾಭ. ಕಟು ಅಭಿಪ್ರಾಯ ವ್ಯಕ್ತಪಡಿಸುವಾಗ ಸಂಘರ್ಷಕ್ಕೆ ಅವಕಾಶ ನೀಡದಿರಿ.
ಸಿಂಹ
ಹೆಚ್ಚು ಹಣ ಆರ್ಜಿಸುವ ಉದ್ದೇಶ ಪೂರೈಸದು. ಖರ್ಚೇ ಹೆಚ್ಚಾಗಲಿದೆ. ಆರೋಗ್ಯ ಸಂಬಂಧಿ ಚಿಂತೆ ಪರಿಹಾರ. ಕೌಟುಂಬಿಕ ವ್ಯಾಜ್ಯ ನಿವಾರಣೆ.
ಕನ್ಯಾ
ವೃತ್ತಿಯಲ್ಲಿ ಸಫಲ ವ್ಯವಹಾರ. ಕಾರ್ಯ ಪೂರೈಸುವುದು. ಭುಜ ನೋವು ಅಥವಾ ಹಿಮ್ಮಡಿ ನೋವು ಬಾಧಿಸುವುದು. ಮಾನಸಿಕ ಒತ್ತಡ.
ತುಲಾ
ಹಲವಾರು ವಿಚಾರಗಳು ಇಂದು ನಿಮ್ಮ ಒತ್ತಡ ಹೆಚ್ಚಿಸುತ್ತವೆ. ಕೆಲಸದ ಫಲಿತಾಂಶದಲ್ಲಿ ಅತೃಪ್ತಿ. ಕೆಲವರ ಜತೆ ವಾಗ್ವಾದ ನಡೆದೀತು. ಸಹನೆ ಅತೀ ಅವಶ್ಯ.
ವೃಶ್ಚಿಕ
ಬಿಗಿಯಾದ ಕೆಲಸದ ಅವಧಿ ನಿಮ್ಮ ಒತ್ತಡ ಹೆಚ್ಚಿಸಲಿದೆ. ಸಂಗತಿ ಜತೆಗೆ ಭಿನ್ನಮತ ಉಂಟಾದೀತು. ಆರೋಗ್ಯದ ಕುರಿತೂ ಚಿಂತಿಸುವಿರಿ. ಖರ್ಚು ಹೆಚ್ಚಾಗಲಿದೆ.
ಧನು
ನಿಮ್ಮ ಕಾರ್ಯ ನಿಮಗೇ ಸಂತೃಪ್ತಿ ನೀಡಲಿದೆ. ನಿಮ್ಮ ಕರ್ತವ್ಯ ಪೂರೈಸಿದ ಸಮಾಧಾನ. ಕೌಟುಂಬಿಕ ಸೌಹಾರ್ದ ಹೆಚ್ಚು. ಆರ್ಥಿಕ ಬಿಕ್ಕಟ್ಟು ಪರಿಹಾರ.
ಮಕರ
ಇಂದು ಸವಾಲಿನ ದಿನ. ಮಾನಸಿಕ ಒತ್ತಡ ಹೆಚ್ಚು. ಕುಟುಂಬ ಸದಸ್ಯರಿಂದ ಹಿತವಚನ ಕೇಳಿಬಂದರೆ ಅದಕ್ಕೆ ಕಿವಿಗೊಡಿ. ಉದ್ಯಮಿಗಳಿಗೆ ಧನಲಾಭ.
ಕುಂಭ
ಇಂದು ತೃಪ್ತಿಕರ ದಿನ. ಕೌಟುಂಬಿಕ ಸಂಬಂಧ ಸುಧಾರಣೆ. ವೃತ್ತಿಯಲ್ಲಿ ನೀವು ನಿರೀಕ್ಷಿಸಿದ ಬೆಳವಣಿಗೆ. ದೈಹಿಕ ಸಮಸ್ಯೆ ನಿವಾರಣೆಯಾಗಿ ನಿರಾಳತೆ.
ಮೀನ
ಸಂತೋಷ ಮತ್ತು ಸಾಧನೆಯ ದಿನ. ಏಕಾಂಗಿಗಳಿಗೆ ಸಂಗಾತಿ ಸಿಗುವ ಸಾಧ್ಯತೆ. ಶೇರು ವ್ಯವಹಾರದಲ್ಲಿ ಲಾಭ. ಶಾಪಿಂಗ್ ಸಂಭ್ರಮ. ಬಂಧುಗಳ ಭೇಟಿ.