ದಿನಭವಿಷ್ಯ: ಬಹುದಿನದಿಂದ ಈಡೇರದ ಕೆಲಸವೊಂದು ಇಂದು ಈಡೇರಲಿದೆ.. ತಾಳ್ಮೆ ಇರಲಿ..

ಮೇಷ
ಸಮಸ್ಯೆ ಪರಿಹಾರಕ್ಕೆ  ವಿವಿಧ ವಿಧಾನಗಳ ಮೊರೆ ಹೋಗುವಿರಿ. ಧಾರ್ಮಿಕ ವಿಚಾರ ಸಮಾಧಾನ ತಂದೀತು.  ಆದರೆ ಅದರ ಜತೆಗೆ ಪ್ರಯತ್ನವೂ ಅಗತ್ಯ.

ವೃಷಭ
ಮನದಲ್ಲಿ ಏನೋ ಕೊರಗು. ನೀವು ಬಯಸಿದ ಬೆಳವಣಿಗೆ ಆಗಿಲ್ಲವೆಂದು ನಿರಾಶೆ. ಸಮಸ್ಯೆ ಎದುರಿಸುವ ಧೈರ್ಯ ಹೆಚ್ಚಿಸಿಕೊಳ್ಳಿ. ಬಂಧುಗಳಿಂದ ಸಹಕಾರ.

ಮಿಥುನ
ಮನಸ್ಸಿನಲ್ಲಿ ನಿರಾಶೆ, ಅಸಂತೋಷ, ಕೊರಗು. ಅದಕ್ಕೆ ಕೆಲವಾರು ಕಾರಣ ಇರಬಹುದು. ಮನಸನ್ನು ತಹಬಂದಿಗೆ ತಂದುಕೊಳ್ಳಲು ಪ್ರಯತ್ನಿಸಿರಿ.

ಕಟಕ
ಮಾನಸಿಕ ಅಥವಾ ದೈಹಿಕ ಕಾರಣದಿಂದ ನಿಮಗಿಂದು ಅಶಾಂತ ಮನಸ್ಥಿತಿ. ಕೆಲಸದಲ್ಲಿ ಏಕಾಗ್ರತೆ ಮೂಡದು. ಒತ್ತಡದ ಕಾರ್ಯ ಇಂದು ಬದಿಗಿಡಿ.

ಸಿಂಹ
ನಿಮ್ಮ ಖಾಸಗಿ ಬದುಕಿಗೂ ತುಸು ಗಮನ ಕೊಡಿ. ಕೆಲಸದ ಧಾವಂತದಲ್ಲಿ ಖಾಸಗಿ ಬದುಕು ಮರೆಯಬೇಡಿ. ಸ್ನೇಹಿತರಿಂದ ಟೀಕೆ ಕೇಳುವಿರಿ.

ಕನ್ಯಾ
ಆದ್ಯತೆಯ ಕೆಲಸ ಮೊದಲು ಮುಗಿಸಿ. ನೀವಾಗಿ ಬೇರೆ ವಿಷಯಕ್ಕೆ ಆದ್ಯತೆ ಕೊಡದಿರಿ. ಪ್ರೀತಿ, ಕುಟುಂಬ, ಕೆಲಸದ ಮಧ್ಯೆ ಸಮನ್ವಯ ಸಾಧಿಸಿರಿ.

ತುಲಾ
ನೀವು ಕಾಳಜಿ ವಹಿಸುವ ವ್ಯಕ್ತಿಗಳ ಇಂದಿನ ವರ್ತನೆ ನಿಮ್ಮಲ್ಲಿ ಅಸಹನೆ ತುಂಬಬಹುದು. ದಿನವಿಡೀ ನಿಮ್ಮನ್ನು ಕಾಡಬಹುದು. ಅವರನ್ನು ನಿಯಂತ್ರಿಸಿರಿ.

ವೃಶ್ಚಿಕ
ಸಂತೋಷದ ಮತ್ತು ಸಫಲ ದಿನ. ನೀವು ಬಯಸಿದ ಕಾರ್ಯ ಈಡೇರುವುದು.  ಇತರರಿಗೆ ನೆರವು ನೀಡುವಿರಿ. ಬಂಧುಗಳಿಂದ ಸಹಕಾರ.

ಧನು
ಈ ದಿನ ನಿರುತ್ಸಾಹ ಕಾಡುವುದು. ಕೆಲಸವೊಂದು ಇನ್ನೂ ಪೂರೈಸದ ಹತಾಶೆ. ಬಂಧುಗಳಿಂದ ಟೀಕೆ ಕೇಳಿಬಂದೀತು. ಸಂಯಮ ವಹಿಸಿ.

ಮಕರ
ಭಾವುಕರಾಗುವ ಪ್ರಸಂಗ ಉಂಟಾದೀತು. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ. ನೀವು ದುರ್ಬಲರೆಂದು ತೋರಿಸಬೇಡಿ. ಆಪ್ತರ ಜತೆಗೆ ಜಗಳವಾಡದಿರಿ.

ಕುಂಭ
ಕಾರ್ಯವೊಂದು ಈಡೇರುತ್ತದೆ. ನೆಗೆಟಿವ್ ಚಿಂತನೆ ಮನಸ್ಸಿನಿಂದ ತೊಲಗುತ್ತದೆ. ಹಾಗಾಗಿ ನಿರಾಳರಾಗುವಿರಿ. ಕೆಲಸದ ಒತ್ತಡದಿಂದಲೂ ನಿಮಗೆ ಮುಕ್ತಿ.

ಮೀನ
ಇತ್ತೀಚಿನ ಕೆಲವು ಬೆಳವಣಿಗೆ ನಿಮ್ಮನ್ನು ನಿರಾಶೆಗೆ ದೂಡುತ್ತದೆ.  ಉತ್ಸಾಹ ತುಂಬಿಕೊಳ್ಳಲು ಯತ್ನಿಸಿರಿ. ಗುಣಾತ್ಮಕ ಚಿಂತನೆ ಬೆಳೆಸಿಕೊಳ್ಳಿ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!