ದಿನಭವಿಷ್ಯ: ಕೆಟ್ಟ ಆಲೋಚನೆಗಳು ದೂರವಾಗುವ ದಿನ, ಖುಷಿಯಲ್ಲಿ ಕಾಲಕಳೆಯುವಿರಿ..

ಮೇಷ
ಇತರರಿಗೆ ನೆರವಾಗಲು ಮುಂದಾಗುವಿರಿ. ಅದರಿಂದ ನಿಮಗೇ ತೃಪ್ತಿ ಸಿಗುವುದು. ಆತ್ಮೀಯರ ಜತೆಗೆ ಕಾಲ ಕಳೆಯುವ ಅವಕಾಶ. ಆರ್ಥಿಕ ಸಮಸ್ಯೆ ಪರಿಹಾರ.

ವೃಷಭ
ಇತ್ತೀಚಿನ ಕೆಟ್ಟ ಅನುಭವ, ಕಷ್ಟಗಳನ್ನು ಮರೆಯಿರಿ.  ಅದನ್ನೇ ನೆನಪಿಸಿಕೊಂಡು ಕೊರಗಬೇಡಿ. ಎಲ್ಲರೊಡನೆ ಬೆರೆತು ಆನಂದಿಸಲು ಕಲಿಯಿರಿ.

ಮಿಥುನ
ಅಶಾಂತ ಮನಸ್ಥಿತಿ. ಮನಸ್ಸು ಕೆಡಿಸುವ ಬೆಳವಣಿಗೆ ಸಂಭವಿಸಬಹುದು. ಅದನ್ನು ದಿಟ್ಟವಾಗಿ ಎದುರಿಸಿ. ದ್ವಂದ್ವ ಬಗೆಹರಿಸಿಕೊಳ್ಳಿ.

ಕಟಕ
ಪ್ರತಿಕೂಲ ಬೆಳವಣಿಗೆ ಸಂಭವಿಸಿದರೂ ಅದರಿಂದ ಬೇಸರ ಪಡದಿರಿ. ಒಳಿತು ಅದರ ಬೆನ್ನಿಗೇ ಬರಲಿದೆ. ಕಾಯುವ ತಾಳ್ಮೆ ಬೇಕಾಗಿದೆ.

ಸಿಂಹ
ನಕಾರಾತ್ಮಕ ಚಿಂತನೆಗಳಿಂದ ಮನಸ್ಸು ಮುಕ್ತವಾಗುವುದು. ನಿಮಗೆ ಹರ್ಷ ತರುವ ಬೆಳವಣಿಗೆ.  ಇದ್ದುದರಲ್ಲೆ ಖುಷಿ ಕಾಣಲು ಪ್ರಯತ್ನಿಸಿರಿ.

ಕನ್ಯಾ
ಕೋಪ ತಾಪ ಏರಿಸುವ ಬೆಳವಣಿಗೆ ಸಂಭವಿಸಬಹುದು. ತಾಳ್ಮೆಯಿಂದ ವ್ಯವಹರಿಸಿದರೆ ಪರಿಸ್ಥಿತಿ ತಿಳಿಯಾದೀತು. ಮನಸ್ಸು ನಿಗ್ರಹ ಅವಶ್ಯ.

ತುಲಾ
ಖಾಸಗಿ ಬದುಕಿಗೆ, ಸಂಬಂಧಗಳ ಕುರಿತು ಹೆಚ್ಚು ಗಮನ ಕೊಡಿ. ವೃತ್ತಿಯ ಒತ್ತಡದಲ್ಲೇ ಕಳೆದು ಹೋಗದಿರಿ. ಸಂಬಂಧ ಹಾಳಾಗದಂತೆ ನೋಡಿಕೊಳ್ಳಿ.

ವೃಶ್ಚಿಕ
ನಿಮ್ಮ ವ್ಯವಹಾರಕ್ಕೆ ಅಡ್ಡಿ ಉಂಟಾಗಲಿದೆ.  ವಿಫಲತೆಯ ಭೀತಿ. ಆದರೆ ದಿನಕಳೆದಂತೆ ಭೀತಿ ನಿವಾರಣೆ. ಎಲ್ಲವೂ ಸುಸ್ಥಿತಿಗೆ ಬರುವುದು. ಆತ್ಮೀಯರ ಸಹಕಾರ.

ಧನು
ಸಣ್ಣ ವಿಷಯವೊಂದು ಮನಸ್ಸಿನ ನೆಮ್ಮದಿ ಕದಡುತ್ತದೆ.  ನಿಜವಾಗಿ ಈ ಬಗ್ಗೆ ಹೆಚ್ಚು ಚಿಂತೆ ಅನಗತ್ಯ.  ಧ್ಯಾನ, ಪ್ರಾರ್ಥನೆ ಸಹಕಾರಿಯಾದೀತು .

ಮಕರ
ನಿಮ್ಮ ಕಾರ್ಯಶೈಲಿ ಸಮಸ್ಯೆ ಸೃಷ್ಟಿಸಬಹುದು. ಅದರಲ್ಲಿ  ಬದಲಾವಣೆ ಮಾಡಿದರೆ ಒಳಿತು.  ಕೆಲವರ ಜತೆಗಿನ ನಿಷ್ಠುರ ಭಾವ ಬಿಡಿ, ಸ್ನೇಹ ಸಾಧಿಸಿದರೆ ಒಳ್ಳೆಯದು.

ಕುಂಭ
ನೀವು ಬಯಸಿದಂತೆ ದಿನ ಸಾಗುವುದಿಲ್ಲ. ಇದರಿಂದ ಬೇಸರ. ಆದರೆ ಹತಾಶೆ ಬೇಡ.  ಮುಂದಿನ ದಿನಗಳಲ್ಲಿ ನಿಮಗೆ ಪೂರಕ ಸನ್ನಿವೇಶ ಸೃಷ್ಟಿಯಾಗಲಿದೆ.

ಮೀನ
ಕೆಲಸದಲ್ಲಿ ಏಕಾಗ್ರತೆ ಮೂಡದು. ಮನಸ್ಸಿಗೆ ಅಸಂತೋಷ. ಕೆಲವು ಒತ್ತಡಗಳು ಕಾಡುತ್ತವೆ. ಬಂಧುವೊಬ್ಬರು ನಿಮ್ಮ ಕುಟುಂಬದಲ್ಲಿ ಸಮಸ್ಯೆ ಸೃಷ್ಟಿಸುತ್ತಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!