ದಿನಭವಿಷ್ಯ: ಸಂಸಾರದ ಬಗ್ಗೆ ಗಮನಹರಿಸಿ, ಅದೇ ನಿಮ್ಮ ನೆಮ್ಮದಿಯ ನಿಲ್ದಾಣ..

ಮೇಷ
ಮಾನಸಿಕ ತಲ್ಲಣ. ಏಕಾಂತ ಬಯಸುವಿರಿ. ಅದರಿಂದ ಫಲವಿಲ್ಲ. ಎಲ್ಲರ ಜತೆ ಬೆರೆತು ವ್ಯವಹರಿಸಿದರೆ ತಲ್ಲಣ ಪರಿಹಾರ. ವೃತ್ತಿಯಲ್ಲಿ ಯಶ ಕಾಣಬಹುದು.

ವೃಷಭ
ಸಮಾನಮನಸ್ಕ ವ್ಯಕ್ತಿಗಳ ಜತೆಗಿನ ಸಮಾಲೋಚನೆ ನಿಮಗೆ ಪ್ರಯೋಜನ ನೀಡಲಿದೆ. ಕಾರ್ಯ ಸಫಲತೆ.ಶೀತ, ಜ್ವರದಂತಹ ಅನಾರೋಗ್ಯ ಸಂಭವ.

ಮಿಥುನ
ಮನೆಯಲ್ಲಿ ಅಭಿಪ್ರಾಯ ಭೇದ.ಜಗಳ ಉಂಟಾದೀತು. ಸಮಾಧಾನದಿಂದ ವರ್ತಿಸಿರಿ. ಎಣ್ಣೆ ತಿಂಡಿ ಹೆಚ್ಚು ಸೇವಿಸದಿರಿ. ಆರೋಗ್ಯ ಕೆಟ್ಟೀತು.

ಕಟಕ
ಅಹಿತಕರ ಪ್ರಸಂಗದಿಂದ ನಿಮ್ಮ ವಿಶ್ವಾಸ ಕುಂದುವುದು. ಮಾಡಬೇಕಾದ ಕೆಲಸ  ಧೈರ್ಯದಿಂದ ಮಾಡಿ ಮುಗಿಸಿ. ಇತರರ ಅವಲಂಬನೆ ಬೇಡ.

ಸಿಂಹ
ಕೌಟುಂಬಿಕ ಪರಿಸರ ಸೌಹಾರ್ದದಾಯಕ. ಮನೆಯವರ ಜತೆ ಆತ್ಮೀಯ ಕಾಲಕ್ಷೇಪ. ವೃತ್ತಿಯಲ್ಲಿ ನಿಮಗೆ ಅನುಕೂಲಕರವಾದ ವಾತಾವರಣ.

ಕನ್ಯಾ
ಬಂಧುಗಳ ಜತೆ ವ್ಯವಹರಿಸುವಾಗ ವಿವೇಕದಿಂದ ವರ್ತಿಸಿ. ನಿಮ್ಮ ನಡೆನುಡಿ ಅವರಿಗೆ ನೋವು ತರದಂತೆ  ನೋಡಿಕೊಳ್ಳಿ. ಸೌಹಾರ್ದ ಕಾಯಿರಿ.

ತುಲಾ
ನಿಮ್ಮ ವ್ಯವಹಾರದಲ್ಲಿ ಮನಸ್ಸಾಕ್ಷಿಯಂತೆ ನಡಕೊಳ್ಳಿ. ಇತರರ ಸಲಹೆಗೆ ಕಾಯದಿರಿ. ನಿಮಗೆ ಒಳಿತಾಗಲಿದೆ. ನಡೆನುಡಿಯಲ್ಲಿ  ವಿನಯವಿರಲಿ.

ವೃಶ್ಚಿಕ
ಸಾಂಸಾರಿಕ ಬದುಕು ನೆಮ್ಮದಿದಾಯಕ. ಕೆಲವರ ಚಾಡಿಮಾತುಗಳಿಗೆ ಕಿವಿಕೊಡದಿರಿ. ಉದ್ಯೋಗದಲ್ಲಿ  ನಿಮ್ಮ ಆಶಯ ಈಡೇರಿಕೆ. ಧನಲಾಭ.

ಧನು
ಇತರರ ಜತೆ ವ್ಯವಹರಿಸುವಾಗ ಆಕ್ರಮಣಕಾರಿ ಧೋರಣೆ ಬಿಡಿ. ಅದರಿಂದ ಕಾರ್ಯ ಸಾಧಿಸದು. ನಯವಿನಯ ಒಳಿತು.

ಮಕರ
ಪ್ರತಿಯೊಂದು ಕೆಲಸ ಪರಿಪೂರ್ಣವಾಗಿ ಮಾಡಲು ಆದ್ಯತೆ ಕೊಡಿ. ಅರೆಬರೆ ಕೆಲಸ ಮುಂದಕ್ಕೆ ಕಿರಿಕಿರಿ ಸೃಷ್ಟಿಸಬಹುದು. ಸಾಲ ನೀಡಲು ಹೋಗದಿರಿ.

ಕುಂಭ
ಬಿಡುವಿಲ್ಲದ ದಿನ. ಹಾಗಾಗಿ ನಿಮ್ಮ ಪೂರ್ವನಿರ್ಧರಿತ ಕೆಲಸ ಪೂರ್ಣಗೊಳ್ಳದು. ಮನೆಯ ಅಶಾಂತ ವಾತಾವರಣ ತಿಳಿಯಾಗಲಿದೆ.

ಮೀನ
ಯಾವುದೋ ಚಿಂತೆ ಕಾಡುತ್ತದೆ. ದೊಡ್ಡ ವಿಷಯವಲ್ಲದಿದ್ದರೂ ಮನಸ್ಸಿನಲ್ಲಿ ಅಸಮಾಧಾನ. ಇದೆಲ್ಲ ನೀವಾಗಿ ಸೃಷ್ಟಿಸಿಕೊಂಡ ಸಮಸ್ಯೆಗಳು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!