ಮೇಷ
ಮನೆಯಲ್ಲಿ ಅಧಿಕ ಹೊಣೆ, ಅಧಿಕ ಕಿರಿಕಿರಿ. ನೆಂಟರ ಜತೆ ವಾಗ್ವಾದ ನಡೆಯಬಹುದು. ಮನಶ್ಯಾಂತಿ ಹಾಳು ಮಾಡಿಕೊಳ್ಳದೆ ಸಮಚಿತ್ತ ಕಾಯ್ದುಕೊಳ್ಳಿ.
ವೃಷಭ
ನೀವು ಇಷ್ಟ ಪಡುವ ವ್ಯಕ್ತಿ ಭಾವನಾತ್ಮಕವಾಗಿ ಹತ್ತಿರವಾಗುವರು. ಬಾಂಧವ್ಯ ವೃದ್ಧಿ. ಆರ್ಥಿಕವಾಗಿ ನಿಮ್ಮ ಹೂಡಿಕೆ ಉತ್ತಮ ಫಲ ನೀಡುವುದು.
ಮಿಥುನ
ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವ ಬೆಳವಣಿಗೆ. ಪ್ರಮುಖ ನಿರ್ಧಾರದಲ್ಲಿ ಅಚಲವಾಗಿರಿ. ಅನ್ಯರ ಪ್ರಭಾವಕ್ಕೆ ಒಳಗಾಗಿ ನಿಲುವು ಬದಲಿಸಬೇಡಿ. ಕೌಟುಂಬಿಕ ಶಾಂತಿ.
ಕಟಕ
ನಿಮಗೆ ಪೂರಕವಾದ ದಿನ. ಮನೆಯಲ್ಲಿ ಭಾವನಾತ್ಮಕ ಸಂಘರ್ಷ ಉಂಟಾದರೂ ಬೇಗನೆ ಸರಿ ಹೋಗುವುದು. ಆಪ್ತ ಬಂಧುವಿನಿಂದ ಸಹಾಯಹಸ್ತ.
ಸಿಂಹ
ವೃತ್ತಿಯಲ್ಲಿ ಬದಲಾವಣೆ ಉಂಟಾದೀತು. ನಿಮ್ಮ ಹೊಣೆ ಸರಿಯಾಗಿ ನಿಭಾಯಿಸಿ. ಮುಖ್ಯ ಕಾರ್ಯ ಮಾಡುವ ಮುನ್ನ ಸರಿಯಾಗಿ ಆಲೋಚಿಸಿರಿ.
ಕನ್ಯಾ
ಉದ್ಯೋಗದಲ್ಲಿ ನೀವು ಹೆಚ್ಚುವರಿ ಜವಾಬ್ದಾರಿ ಹೊರಬೇಕಾಗುವುದು. ಕೆಲವರು ನಿಮ್ಮನ್ನೇ ಮುಂದೆ ಮಾಡುತ್ತಾರೆ. ಕೆಲಸಗಳ್ಳರಿಗೆ ನೆರವು ನೀಡಲು ಹೋಗದಿರಿ.
ತುಲಾ
ವೃತ್ತಿ ಮತ್ತು ಖಾಸಗಿ ಬದುಕಿನಲ್ಲಿ ಉನ್ನತಿ ಸಾಧಿಸಲು ಅವಕಾಶ ಒದಗಲಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವುದು ನಿಮ್ಮ ಹೊಣೆಗಾರಿಕೆ.
ವೃಶ್ಚಿಕ
ಸಹೋದ್ಯೋಗಿಯಿಂದ ಸಮಸ್ಯೆ. ನಿಮ್ಮ ಕುರಿತು ದ್ವೇಷ ಕಾರಬಹುದು. ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಿ. ಈ ದಿನ ಸಂಘರ್ಷ ಒಳಿತು ತರಲಾರದು.
ಧನು
ವೃತ್ತಿಯಲ್ಲಿ ಸೌಹಾರ್ದ ವಾತಾವರಣ. ಬಿಕ್ಕಟ್ಟು ಶಮನ. ಮನಸ್ತಾಪ ನಿವಾರಣೆ. ಮನೆಯಲ್ಲೂ ಖುಷಿ ತರುವ ಮನಸ್ಥಿತಿ. ಕುಟುಂಬ ಸದಸ್ಯರಿಂದ ಸಹಕಾರ.
ಮಕರ
ಕೆಲ ವಿಷಯಗಳಲ್ಲಿ ವಿನೀತ ಭಾವ ಒಳಿತು. ನಾನು ಬಗ್ಗಬಾರದು ಎಂಬ ಛಲ ಒಳಿತಲ್ಲ. ಹೊಂದಾಣಿಕೆ ಎಲ್ಲಕ್ಕಿಂತ ಮುಖ್ಯ. ವಾಗ್ವಾದಕ್ಕೆ ಆಸ್ಪದ ಕೊಡದಿರಿ.
ಕುಂಭ
ಪ್ರತೀ ವಿಷಯದಲ್ಲೂ ಇಂದು ಎಚ್ಚರಿಕೆಯಿಂದ ಹೆಜ್ಜೆಯಿಡಿ. ನಿಮಗೆ ಹಿನ್ನಡೆಯಾಗುವ ಬೆಳವಣಿಗೆ ಸಂಭವ. ನೈತಿಕ ಚೌಕಟ್ಟು ಮೀರದಿರಿ.
ಮೀನ
ಕೆಲಸದಲ್ಲಿ ಬಿಡುವಿಲ್ಲದ ಒತ್ತಡ. ಹೊಣೆಗಾರಿಕೆ ಹೆಚ್ಚಳ. ಎಲ್ಲರ ಜತೆ ಉತ್ತಮ ಸಂವಹನ ಸಾಧಿಸಿ. ತಪ್ಪಭಿಪ್ರಾಯ ಬಿಕ್ಕಟ್ಟು ಉಂಟು ಮಾಡಬಹುದು.