ದಿನಭವಿಷ್ಯ: ಇಂದು ಕೆಲಸದಲ್ಲಿ ಯಶಸ್ವಿಯಾಗುವಿರಿ, ವ್ಯವಹಾರ ವೃದ್ಧಿಯಾಗಲಿದೆ..

ಮೇಷ
ಅತೀ ಆಪ್ತರ ಜತೆ ಭಿನ್ನಾಭಿಪ್ರಾಯ. ಸಾಂಸಾರಿಕ ಕಲಹ.  ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ವೃತ್ತಿಯಲ್ಲಿ ಅನಿರೀಕ್ಷಿತ ಧನಲಾಭ.

ವೃಷಭ
ದಿನವಿಡೀ ಕಾರ್ಯದ ಒತ್ತಡ. ಹೆಚ್ಚಿನ ಹೊಣೆಗಾರಿಕೆ. ನಿಮ್ಮ  ಯೋಜನೆ ಸಫಲತೆ ಕಾಣುವುದು. ಕುಟುಂಬದ ಜತೆ ಹೆಚ್ಚು ಕಾಲ ಕಳೆಯುವಿರಿ.

ಮಿಥುನ
ಹೆಚ್ಚು ಹೊಣೆಗಾರಿಕೆ. ಇತರರ ಕೆಲಸವನ್ನೂ ನೀವೇ ಮಾಡಬೇಕಾದ ಪ್ರಸಂಗ. ಆರ್ಥಿಕ ವ್ಯವಹಾರದಲ್ಲಿ ಲಾಭ. ಬಂಧುಗಳಿಂದ ಉತ್ತಮ ಸಹಕಾರ.

ಕಟಕ
ಕೆಲಸದಲ್ಲಿ ಕಠಿಣ ಸವಾಲು ಎದುರಿಸುವಿರಿ. ನಿಮ್ಮ ಆತ್ಮವಿಶ್ವಾಸ ಕಳಕೊಳ್ಳದಿರಿ. ಅಂತಿಮವಾಗಿ ಎಲ್ಲವೂ ನಿಮ್ಮ ಪರವಾಗಿ ನಡೆಯುವುದು.

ಸಿಂಹ
ಕುಟುಂಬ ಸದಸ್ಯರ ಬೇಡಿಕೆಗಳಿಗೆ  ಆದ್ಯತೆ ಕೊಡಬೇಕಾಗುವುದು.  ಬಂಧುಗಳ ಸಹಕಾರ ನಿರೀಕ್ಷಿಸಬೇಡಿ. ಕಠಿಣ ಕಾರ್ಯ ಸುಲಭವಾಗಿ ನೆರವೇರುತ್ತದೆ.

ಕನ್ಯಾ
ವೃತ್ತಿಯಲ್ಲಿ ಯಶಸ್ವಿ ದಿನ.  ವ್ಯವಹಾರ ವೃದ್ಧಿ. ಉದ್ದೇಶ ಈಡೇರಿಕೆ. ಕೌಟುಂಬಿಕ ಬದುಕು ಸಮಾಧಾನಕರ. ಪ್ರೀತಿಪಾತ್ರರ ಮನಸ್ಸು ಗೆಲ್ಲುವಿರಿ.

ತುಲಾ
ಇಂದು ಮಹತ್ವದ ನಿರ್ಧಾರ ತಾಳಲು ಹೋಗದಿರಿ. ಅದು ನಿರೀಕ್ಷಿತ ಫಲ ನೀಡದು. ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಮೂಡುವುದು.

ವೃಶ್ಚಿಕ
ಇಂದು ನಿಮಗೆ ಪೂರಕವಾದ ದಿನ.  ಹಾಗಾಗಿ ಎಲ್ಲ ಕಾರ್ಯಗಳು ಸಫಲ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ವೃತ್ತಿಯಲ್ಲಿ ಉನ್ನತಿ, ಮೆಚ್ಚುಗೆ.

ಧನು
ವಸ್ತು ಖರೀದಿಯ ಹುಮ್ಮಸ್ಸಿನಿಂದ ಜೇಬಿಗೆ ಕತ್ತರಿ ಬೀಳಬಹುದು. ಉಳಿತಾಯಕ್ಕೂ ಗಮನ ಕೊಡಿ. ಕುಟುಂಬ ಸಮಸ್ಯರ ಜತೆ  ಶಾಂತ ಮನಸ್ಸಿನಿಂದ ವರ್ತಿಸಿರಿ.

ಮಕರ
ಕೌಟುಂಬಿಕ ವಿಷಯದಲ್ಲಿ ಉದ್ವಿಗ್ನತೆ ಹೆಚ್ಚಿಸುವ ಬೆಳವಣಿಗೆ ನಡೆದೀತು. ಪರಿಸ್ಥಿತಿಯನ್ನು ಸಂಯಮದಿಂದ ನಿಭಾಯಿಸಿ. ರೋಷಾವೇಶ ಬಿಡಿ.

ಕುಂಭ
ಪ್ರೀತಿಪಾತ್ರರ ಜತೆ ವಾಗ್ವಾದ ನಡೆದೀತು. ಅವರ ಅಭಿಪ್ರಾಯಕ್ಕೂ ಮನ್ನಣೆ ನೀಡಲು ಕಲಿತರೆ ಇಂತಹ ಸಂಘರ್ಷ ನಿವಾರಿಸಬಹುದು.

ಮೀನ
ಚಿಂತೆಗೆ ಕಾರಣವಾಗುವ ಪ್ರಸಂಗ ಉಂಟಾದೀತು. ಅದನ್ನು ಸಹನೆಯಿಂದ ನಿಭಾಯಿಸಿ. ಸಮಸ್ಯೆಗೆ ಪರಿಹಾರ ಕಷ್ಟವಲ್ಲ ಎಂಬ ಅರಿವು ನಿಮಗೆ ಆಗಲಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!