ದಿನಭವಿಷ್ಯ: ನಿಮಗಿಷ್ಟದ ಕೆಲಸ ಮಾಡಲು ಹೋಗಿ ಸಮಸ್ಯೆಗೆ ಸಿಲುಕುತ್ತೀರಿ, ಜಾಗ್ರತೆ

ಮೇಷ
ನಿಮ್ಮ ಸಹನೆ ಕೆಣಕುವ ಪ್ರಸಂಗ ಎದುರಾಗುತ್ತದೆ. ಮನೋನಿಯಂತ್ರಣ ಅವಶ್ಯ. ಮನೆಯಲ್ಲಿನ ಕೆಲಸ ಆದ್ಯತೆ ಕೊಡಬೇಕು.

ವೃಷಭ
ಕರ್ತವ್ಯದಲ್ಲಿ ವೈಫಲ್ಯ ಉಂಟಾಗಬಹುದು. ಇದರಿಂದ ಟೀಕೆಗೆ ಗುರಿಯಾಗುವಿರಿ.  ಆರೋಗ್ಯದತ್ತ ಗಮನ ಕೊಡಿ. ತಾಳ್ಮೆ ಅವಶ್ಯ.

ಮಿಥುನ
ಬದಲಾದ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಎಚ್ಚರಿಕೆ ತೆಗೆದುಕೊಳ್ಳಿ. ಕರ್ತವ್ಯದಲ್ಲಿ ಉದಾಸೀನತೆ ಒಳಿತಲ್ಲ.

ಕಟಕ
ಸಂವಹನದ ಕೊರತೆಯಿಂದ ಆಪ್ತರಲ್ಲಿ ಭಿನ್ನಮತ.ಮಾತುಕತೆಯಿಂದ  ಅದನ್ನು ಪರಿಹರಿಸಿ. ಕೌಟುಂಬಿಕ ಅಸಹಕಾರ.

ಸಿಂಹ
ದಿನವಿಡೀ ಆಲಸ್ಯ.  ಆರ್ಥಿಕ ವ್ಯವಹಾರದಲ್ಲಿ  ಅಂಕಿಅಂಶಗಳತ್ತ ಹೆಚ್ಚು ಗಮನಹರಿಸಿ. ಕಣ್ತಪ್ಪಿದರೆ ಪ್ರಮಾದ ವಾದೀತು.

ಕನ್ಯಾ
ತೋಚಿದ್ದನ್ನೆಲ್ಲ ಮಾತನಾಡಬೇಡಿ. ಕೆಲವರಿಗೆ ನೋವು ಉಂಟಾದೀತು. ಅದು ಮನಸ್ತಾಪಕ್ಕೆ ಕಾರಣವಾಗುವುದು.

ತುಲಾ
ನಿಮ್ಮ ಕೆಲಸ ಇತರರಿಗೆ ಪ್ರೇರಣೆ ನೀಡುತ್ತದೆ.  ಸಾಮಾಜಿಕ ಕಾರ್ಯದಲ್ಲಿ ನಿಮಗೆ ಮೆಚ್ಚುಗೆ ಲಭಿಸುವುದು. ಹಣದ ಸಮಸ್ಯೆ ಪರಿಹಾರ.

ವೃಶ್ಚಿಕ
ನಿಮಗಿಷ್ಟವಾದ ಕಾರ್ಯ ಮಾಡಲು ಹೋಗಿ ವಿವಾದಕ್ಕೆ ಸಿಲುಕುವಿರಿ. ಕೌಟುಂಬಿಕ ಸಹಕಾರ ಸಿಗಲಿದೆ. ಖರ್ಚು ಅಧಿಕ.

ಧನು
ಯಾರದೋ ಸಮಸ್ಯೆ ಪರಿಹರಿಸುವ ಹೊಣೆ ನಿಮ್ಮ ಹೆಗಲೇರಬಹುದು. ಸಾಧ್ಯವಾದಷ್ಟು ಅದರಿಂದ ದೂರವಿರಿ. ವಿವಾದ ಸಂಭವ.

ಮಕರ
ಅನವಶ್ಯ ಖರ್ಚು ಹೆಚ್ಚಳ. ನಿಮ್ಮ ಆರೋಗ್ಯದ ಕುರಿತಂತೆ ಎಚ್ಚರಿಕೆ ವಹಿಸಬೇಕು. ಆಹಾರ ಸೇವನೆಯಲ್ಲಿ ಜಾಗೃತರಾಗಿರಿ.

ಕುಂಭ
ಕೆಲವು ಸಮಸ್ಯೆ ನೆಮ್ಮದಿ ಹಾಳು ಮಾಡುವುದು. ಇತರರ ಸಹಕಾರ ಲಭಿಸದೆ ಅಸಹನೆ. ಕೌಟುಂಬಿಕ ಕಲಹ, ಉದ್ವಿಗ್ನತೆ.

ಮೀನ
ಕಚೇರಿಯಲ್ಲಿ ಜಾಣ್ಮೆ ಯಿಂದ ನಡಕೊಳ್ಳಿ. ಇತರರ ಜಗಳದಲ್ಲಿ ನೀವು ಬಲಿಪಶು ಆಗಬಹುದು.ಕೌಟುಂಬಿಕ ಒತ್ತಡ ಹೆಚ್ಚಳ. ಸಮಚಿತ್ತ ಅವಶ್ಯ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!