ಮೇಷ
ಕಾಡುವ ಸಮಸ್ಯೆ ಪರಿಹಾರಕ್ಕೆ ನಿಮ್ಮ ಹಿಂದಿನ ಅನುಭವ ನೆರವಾಗುವುದು. ಇತರರ ಮಾತುಗಳಿಗೆ ತಲೆಕೆಡಿಸಿಕೊಳ್ಳದಿರಿ.
ವೃಷಭ
ಹೆಚ್ಚು ಹೊಣೆಗಾರಿಕೆ ನಿಮ್ಮ ಮೇಲೇರುವುದು. ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇ ಆದಲ್ಲಿ ನಿಮಗೆ ಇನ್ನಿತರ ಲಾಭವೂ ದೊರಕಲಿದೆ.
ಮಿಥುನ
ಬದುಕಿನಲ್ಲಿ ತುಸು ಹೊಂದಾಣಿಕೆ ಮಾಡಿಕೊಳ್ಳಬೇಕು. ನಿಮ್ಮ ನಿಲುವಿಗೇ ಅಂಟಿ ಕೂರಬೇಡಿ. ಹಣದ ಸಮಸ್ಯೆ ಕಾಡಬಹುದು.
ಕಟಕ
ಇತರರಿಗಾಗಿ ನಿಮ್ಮ ಜೇಬು ಬರಿದಾಗಬಹುದು. ಆಪ್ತರ ಬೇಡಿಕೆ ಈಡೇರಿಸುವ ಭರದಲ್ಲಿ ಆರ್ಥಿಕ ಸ್ಥಿತಿ ಮರೆಯಬೇಡಿ.
ಸಿಂಹ
ನಿಮ್ಮ ಕಾರ್ಯಕ್ಕೆ ತೀವ್ರ ಪೈಪೋಟಿ ಎದುರಾಗುವುದು. ದಿಟ್ಟವಾಗಿ ಕಾರ್ಯವೆಸಗಿ. ಆರ್ಥಿಕ ದುಸ್ಥಿತಿ ಚಿಂತೆಗೆ ಕಾರಣವಾಗುವುದು.
ಕನ್ಯಾ
ಕೆಲವು ವಿಷಯಗಳು ನಿಮ್ಮಲ್ಲಿ ಅಂಜಿಕೆ ಸೃಷ್ಟಿಸಿವೆ. ಭವಿಷ್ಯದ ಕುರಿತು ಅತಿಯಾಗಿ ಚಿಂತಿಸದಿರಿ. ವರ್ತಮಾನದಲ್ಲಿ ಬದುಕಲು ಕಲಿಯಿರಿ.
ತುಲಾ
ಕೌಟುಂಬಿಕ ಕಾರ್ಯ ಗಳು ಇಂದು ನಿಮ್ಮನ್ನು ದಿನವಿಡೀ ಕಾಡುತ್ತವೆ. ಉಳಿದ ವಿಷಯಗಳಿಗೆ ಗಮನ ಹರಿಸಲು ಸಮಯ ಸಾಲುವುದಿಲ್ಲ.
ವೃಶ್ಚಿಕ
ಖಾಸಗಿ ಬದುಕಿನ ಕುರಿತು ಹೆಚ್ಚು ಗಮನ ನೀಡಿ. ಕೌಟುಂಬಿಕ ಬಿಕ್ಕಟ್ಟು ಪರಿಹರಿಸಲು ಹೊಂದಾಣಿಕೆ ಸೂಕ್ತ. ದುಡುಕು ಬೇಡ.
ಧನು
ಬಿಡುವಿಲ್ಲದ ದಿನ. ಇತರರಿಗಾಗಿಯೂ ನೀವಿಂದು ಕೆಲಸ ಮಾಡಬೇಕಾಗುತ್ತದೆ. ಆದರೆ ಹೆಚ್ಚು ರಿಸ್ಕ್ ತೆಗೆದುಕೊಳ್ಳದಿರಿ.
ಮಕರ
ನಿಮಿಗಿಷ್ಟವಾದ ಕಾರ್ಯದಲ್ಲಿ ತೊಡಗುವಿರಿ. ಈ ವಿಷಯದಲ್ಲಿ ಯಾವುದೇ ನಿರ್ಬಂಧ ಇಂದು ನಿಮ್ಮನ್ನು ಕಾಡದು.
ಕುಂಭ
ನಿಮ್ಮ ಯಶಸ್ಸು ಇತರರು ಕರುಬುವಂತೆ ಮಾಡಲಿದೆ. ನಿಮ್ಮ ಬಗ್ಗೆ ಕೆಲವರಿಂದ ಅಪಪ್ರಚಾರ. ಬಹಿರಂಗವಾಗಿ ಅವರನ್ನು ಖಂಡಿಸದಿರಿ.
ಮೀನ
ನೆರೆಕರೆಯಿಂದ ಕಿರಿಕಿರಿ. ಜಗಳವಾಡದೆ ದೂರ ಉಳಿಯುವುದೇ ಸೂಕ್ತ. ಸಂಘರ್ಷದಿಂದ ಮನಶ್ಯಾಂತಿ ಇನ್ನಷ್ಟು ಕೆಡಬಹುದು.