ಮೇಷ
ಕುಟುಂಬ ಸದಸ್ಯರ ಜತೆಗಿನ ಭಿನ್ನಮತ ನಿವಾರಿಸಲು ಆದ್ಯತೆ ಕೊಡಿ. ಎಲ್ಲವನ್ನು ಮರೆತು ಮುಂದೆ ಸಾಗುವುದು ಒಳ್ಳೆಯದು. ಆರ್ಥಿಕ ಒತ್ತಡ ಹೆಚ್ಚು.
ವೃಷಭ
ಕೆಲಸದಲ್ಲಿ ನಿರಾಸಕ್ತಿ. ಯಾವುದೋ ಕೊರತೆ, ಸಮಸ್ಯೆ ಕಾಡುವುದು. ಕರ್ತವ್ಯದ ಮೇಲೆ ಗಮನ ಕೇಂದ್ರೀಕರಿಸಿ. ಕೌಟುಂಬಿಕ ಬೇಡಿಕೆ ಹೆಚ್ಚಳ.
ಮಿಥುನ
ವೃತ್ತಿ ಕ್ಷೇತ್ರದಲ್ಲಿ ಕೋಲಾಹಲ. ಆದರೂ ಅನ್ಯರಿಗೆ ಮಾರ್ಗದರ್ಶಿಯಾಗುವ ವರ್ತನೆ ತೋರುವಿರಿ. ಆತ್ಮೀಯರ ಬೆಂಬಲ.
ಕಟಕ
ಹೆಚ್ಚು ವಿಶ್ವಾಸ, ಧೈರ್ಯ. ಗುರಿ ಸಾಧನೆಯಲ್ಲಿ ಸಫಲ.ಭವಿಷ್ಯದ ಯೋಜನೆ ಹಾಕಿಕೊಳ್ಳಲು ಸಕಾಲ. ಧನವ್ಯಯ.
ಸಿಂಹ
ಬಾಕಿ ಉಳಿದ ಕಾರ್ಯ ಇಂದು ಪೂರೈಸಿ.ಅನವಶ್ಯ ವಿಳಂಬ ಮಾಡದಿರಿ. ಅನವಶ್ಯ ವಿಷಯಕ್ಕೆ ಹಣ ಖರ್ಚು ಮಾಡದಿರಿ.
ಕನ್ಯಾ
ಇತರರ ಜತೆ ವ್ಯವಹರಿಸುವಾಗ ಎಚ್ಚರ ವಹಿಸಿ. ನಿಮ್ಮನ್ನು ತಮ್ಮ ಸ್ವಾರ್ಥಕ್ಕೆ ಕೆಲವರು ಬಳಸಿಕೊಳ್ಳುವರು. ಅದಕ್ಕೆ ಬಲಿಯಾಗದಿರಿ.
ತುಲಾ
ಇತರರ ಜತೆ ವ್ಯವಹಾರದಲ್ಲಿ ತೊಡಕು. ಭಿನ್ನಮತ ಉಂಟಾದೀತು. ನಿಮ್ಮ ಮೇಲೆ ಅಪಪ್ರಚಾರ ನಡೆಯಲು ಅವಕಾಶ ಕೊಡದಿರಿ.
ವೃಶ್ಚಿಕ
ಉತ್ಸಾಹದ ದಿನ. ಹಿನ್ನಡೆ ಬಾಧಿಸದು. ಪ್ರೀತಿಪಾತ್ರರ ಜತೆ ಕಾಲಕ್ಷೇಪ. ಜೀವನಶೈಲಿ ಬದಲಾವಣೆಯಿಂದ ಲಾಭವಿದೆ.
ಧನು
ಮಾನಸಿಕವಾಗಿ ಹೆಚ್ಚು ಬಳಲಿಕೆ. ಅದಕ್ಕೆ ಕೆಲವಾರು ಒತ್ತಡ ಕಾರಣ. ವೃತ್ತಿಯಲ್ಲಿ ಸಮಸ್ಯೆ ಎದುರಿಸುವಿರಿ. ಕೌಟುಂಬಿಕ ಉದ್ವಿಗ್ನತೆ. ಧ್ಯಾನ ಪ್ರಯೋಜನಕಾರಿ.
ಮಕರ
ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ. ಹೊರಗೆ ತಿನ್ನಲು ಹೋಗದಿರಿ. ಕೆಲವು ಪ್ರಮುಖ ವಿಷಯದಲ್ಲಿ ಗೊಂದಲದ ಮನಸ್ಥಿತಿ.
ಕುಂಭ
ವೃತ್ತಿ ಮತ್ತು ಖಾಸಗಿ ಬದುಕಲ್ಲಿ ನಿರಾಶೆ ತರುವ ಬೆಳವಣಿಗೆ. ಕೆಲಸದಲ್ಲಿ ಏಕಾಗ್ರತೆ ಕಷ್ಟ. ಪ್ರೀತಿಪಾತ್ರರ ಜತೆ ಜಗಳ ಉಂಟಾದೀತು.
ಮೀನ
ಸಮಸ್ಯೆಯೊಂದು ಪರಿಹಾರ ಕಂಡು ಮನಸ್ಸಿಗೆ ನಿರಾಳತೆ. ವೃತ್ತಿಯಲ್ಲಿ ಕೆಲವರ ವರ್ತನೆ ಅಸಹನೀಯ ಎನಿಸೀತು. ಹೊಂದಾಣಿಕೆ ಮುಖ್ಯ.