ದಿನಭವಿಷ್ಯ: ಖಾಸಗಿ ಬದುಕಿನಲ್ಲಿ ಮಹತ್ತರ ಬದಲಾವಣೆ, ಪ್ರೀತಿಪಾತ್ರರ ಜೊತೆ ಬಾಂಧವ್ಯ ವೃದ್ಧಿ

ಮೇಷ
ಕಷ್ಟಪಡದೇ ಫಲ ದೊರಕಬೇಕು ಎಂದು ಬಯಸದಿರಿ. ಕಠಿಣ ಶ್ರಮ ಅಗತ್ಯ. ಮನೆಯವರ ಮನಸ್ಸು ಅರಿತು ಅವರ ಭಾವನೆಗೆ  ಸ್ಪಂದಿಸಿರಿ.

ವೃಷಭ
ಅತಿ ಭಾವುಕತೆ ನಿಮ್ಮ ಗುರಿ ಸಾಧಿಸಲು ಅಡ್ಡ ಬಂದೀತು.  ಕೆಲವು ವಿಷಯಗಳಲ್ಲಿ ಕಠಿಣ ವರ್ತನೆ ನಿಮಗೆ ಒಳಿತು ತರುವುದು.

ಮಿಥುನ
ಎಂಥ ಕಷ್ಟದಲ್ಲೂ ಎದೆಗುಂದದೆ ಮುನ್ನಡೆ ಯುವ  ಮನಸ್ಥಿತಿ. ಇದು ಸಮಸ್ಯೆ ನಿವಾರಿಸುವಲ್ಲಿ ನೆರವಾಗುವುದು. ಬಂಧುಗಳ ಭೇಟಿ.

ಕಟಕ
ಖಾಸಗಿ ಬದುಕಲ್ಲಿ ಮಹತ್ವದ ಬೆಳವಣಿಗೆ.   ನಿಮ್ಮ ಇಷ್ಟದ ವ್ಯಕ್ತಿಯ ಜತೆ ಬಾಂಧವ್ಯ ವೃದ್ಧಿ. ಭಿನ್ನಾಭಿಪ್ರಾಯ ನಿವಾರಣೆ. ಆರ್ಥಿಕ ಸ್ಥಿತಿ ಉತ್ತಮ.

ಸಿಂಹ
ಸಮಸ್ಯೆ ಉಂಟಾದರೆ ಅದನ್ನು ಹಾಗೇ ಬಿಡಬೇಡಿ. ಪರಿಹರಿಸಲೆತ್ನಿಸಿ.ಇಲ್ಲ ವಾದರೆ ಮುಂದೆ ದೊಡ್ಡ ಸಮಸ್ಯೆಯಾಗುತ್ತದೆ.ಸಹನೆ ಇರಲಿ.

ಕನ್ಯಾ
ಕೆಲ ವಿಷಯಗಳಲ್ಲಿ ಗೊಂದಲದ ಮನಸ್ಥಿತಿ. ಸ್ಪಷ್ಟ ನಿಲುವಿಗೆ ಬರಲಾಗದೆ ತೊಳಲಾಟ. ಪರಿಸ್ಥಿತಿ ಸರಿಯಾಗಿ ಪರಾಮರ್ಶಿಸಿ ಸೂಕ್ತ ನಿರ್ಧಾರ ತಾಳಿರಿ.

ತುಲಾ
ದಿನವಿಡೀ ಚಟುವಟಿಕೆ. ಸಮಸ್ಯೆ ಸಣ್ಣದಾಗಿದ್ದರೂ  ಕಡೆಗಣಿಸದಿರಿ. ಮುಂದಕ್ಕೆ ಕ್ಲಿಷ್ಟವಾಗಬಹುದು. ಪರಿಹರಿಸಲು ಯತ್ನಿಸಿ.

ವೃಶ್ಚಿಕ
ಅನ್ಯರ ಕೆಟ್ಟ ಪ್ರಭಾವ ದಿಂದ ಹೊರಬರಲು ಪ್ರಯತ್ನಿಸಿ. ಅಂತಹವರ  ಸಹವಾಸ ತ್ಯಜಿಸಿ. ನಿಮ್ಮ ವೃತ್ತಿ, ಹೊಣೆಗಾರಿಕೆ  ಅರಿತು ನಡೆಯಿರಿ.

ಧನು
ವೃತ್ತಿ ಮತ್ತು ವ್ಯವಹಾರಕ್ಕೆ ಆದ್ಯತೆ ನೀಡುವುದರ ಜೊತೆಗೆ ಕುಟುಂಬ ಮತ್ತು ಪ್ರೀತಿ ಪಾತ್ರರ ಕಡೆಗೂ ಗಮನವಿರಲಿ.

ಮಕರ
ಆಪ್ತರೊಂದಿಗೆ  ಸಂತೋಷದಿಂದ ಕಳೆಯುವ ಉದ್ದೇಶಕ್ಕೆ ಅಡ್ಡಿ, ಕೆಲವರ ಮಾತು ಕೌಟುಂಬಿಕ ಶಾಂತಿ ಕಲಕಬಹುದು.

ಕುಂಭ
ಕೆಲವೊಂದು ವ್ಯಕ್ತಿಗಳ ಒಡನಾಟ ಅಸಹನೀಯ ಎನಿಸಬಹುದು. ಆತುರದ ನಿರ್ಧಾರ ಬೇಡ, ಸಹನೆಯಿಂದ ವರ್ತಿಸಿರಿ. ಹೊಂದಿಕೊಂಡು ಬಾಳಿ.

ಮೀನ
ಖಾಸಗಿ ಬದುಕಲ್ಲಿ ಭಾವನಾತ್ಮಕ ಬೆಳವಣಿಗೆ. ಆಪ್ತರ ಜತೆ ವೈಮನಸ್ಸು ದುಡುಕಿನ ನಿರ್ಧಾರ ಒಳಿತು ತಾರದು. ತಾಳ್ಮೆ ಇರಲಿ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!