ಮೇಷ
ಅಧಿಕಾರಿಗಳ ಅವಕೃಪೆಗೆ ಗುರಿಯಾಗುವ ಸಾಧ್ಯತೆ. ಮನೆಯಲ್ಲೂ ಹೆಚ್ಚುವರಿ ಕೆಲಸದ ಹೊರೆ. ಖರ್ಚು ಹೆಚ್ಚಳ. ಒಟ್ಟಿನಲ್ಲಿ ಒತ್ತಡದ ದಿನ.
ವೃಷಭ
ಆರ್ಥಿಕ ಪರಿಸ್ಥಿತಿ ಉತ್ತಮ. ಸಾಲ ಕೊಟ್ಟಿದ್ದರೆ ವಾಪಸ್ ಸಿಗಲಿದೆ. ಮನೆಯಲ್ಲಿ ಉತ್ಸಾಹದ ವಾತಾವರಣ.ಬಹುಕಾಲದ ಬಳಿಕ ಆತ್ಮೀಯರ ಭೇಟಿ.
ಮಿಥುನ
ನಿಮ್ಮ ಕೆಲಸದಲ್ಲಿ ತಪ್ಪು ಉಂಟಾದೀತು. ಅದನ್ನು ಕೂಡಲೇ ಸರಿಪಡಿಸಿ. ಏಕಾಗ್ರಚಿತ್ತತೆ ಕಳಕೊಳ್ಳದಿರಿ. ದೃಢಚಿತ್ತವಿರಲಿ.
ಕಟಕ
ಪ್ರಮುಖ ವಿಚಾರ ದಲ್ಲಿ ಕಠಿಣ ನಿಲುವು ಬೇಡ. ಹೊಂದಾಣಿಕೆ ಮುಖ್ಯ. ಮನೆ ಖರ್ಚು ಹೆಚ್ಚುವುದು. ಮಿತವ್ಯಯಕ್ಕೆ ಮನಸ್ಸು ಮಾಡುವಿರಿ.
ಸಿಂಹ
ವೃತ್ತಿಯಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಿಸುವಿರಿ. ಇತರರ ಅಸಹಕಾರ. ಸುಗಮ ಕೆಲಸವೂ ಕಷ್ಟವಾಗುವುದು. ಮನೆಯಲ್ಲಿ ಸಮಾಧಾನ.
ಕನ್ಯಾ
ಕೆಲ ವಿಷಯ ಚಿಂತೆಗೆ ಕಾರಣವಾಗುವುದು. ಅವಶ್ಯವಾದ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಕೆ. ಇತರರಿಗೆ ನೋವಾಗುವ ಭೀತಿ ಕಾಡುವುದು.
ತುಲಾ
ನಿಮ್ಮ ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಮಹತ್ತರ ಬದಲಾವಣೆ ಆಗುವುದು. ಆರ್ಥಿಕ ವ್ಯವಹಾರ ತುಸು ಹಿನ್ನಡೆ ಕಾಣಬಹುದು. ಇದು ತಾತ್ಕಾಲಿಕವಷ್ಟೆ.
ವೃಶ್ಚಿಕ
ಹೊಸ ಚಿಂತೆ ಬಾಧಿಸಬಹುದು. ಅದರ ಪರಿಹಾರ ಸುಲಭವೆ. ಆದರೆ ನೀವು ಅನವಶ್ಯ ಒತ್ತಡ ತಂದುಕೊಳ್ಳುವಿರಿ. ಸೂಕ್ತ ಸಲಹೆ ಪಡೆಯಿರಿ.
ಧನು
ಆರ್ಥಿಕವಾಗಿ ಉತ್ತಮ ದಿನವಲ್ಲ. ನಿರೀಕ್ಷಿಸಿದ ಧನಪ್ರಾಪ್ತಿ ಆಗದು. ಉದ್ಯೋಗ ದಲ್ಲಿ ಅನಿಶ್ಚಿತತೆಯ ಭೀತಿ ಉಂಟಾಗುವುದು.
ಮಕರ
ಹಳೆಯ ಹೂಡಿಕೆ ಯೊಂದು ಒಳ್ಳೆಯ ಫಲ ನೀಡುವುದು. ಅನಿರೀಕ್ಷಿತ ವಲಯದಿಂದ ಸಹಕಾರ. ಖರೀದಿ ವ್ಯವಹಾರ ಖರ್ಚು ಹೆಚ್ಚಿಸಬಹುದು.
ಕುಂಭ
ಎಂದಿನಂತೆ ಸಹಜ ದಿನ. ವಿಶೇಷವೇನೂ ಘಟಿಸದು. ನಿಮ್ಮ ಕೆಲಸಕ್ಕೆ ಆದ್ಯತೆ ಕೊಡಿ. ಖಾಸಗಿ ಸಮಸ್ಯೆ ವೃತ್ತಿ ಮೇಲೆ ಪರಿಣಾಮ ಬೀರದಿರಲಿ.
ಮೀನ
ನಿಮ್ಮ ಪಾಲಿಗಿಂದು ಉತ್ತಮ ದಿನ. ಆರೋಗ್ಯ ಸುಧಾರಣೆ. ಆರ್ಥಿಕ ಸಮಸ್ಯೆ ನಿವಾರಣೆ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಹರ್ಷದ ದಿನ.
ದಿನಭವಿಷ್ಯ: ಆರೋಗ್ಯ ಸುಧಾರಣೆ ಮಾಡಿಕೊಳ್ಳಲು ಇಂದು ಉತ್ತಮ ದಿನ
