Sunday, October 1, 2023

Latest Posts

ದಿನಭವಿಷ್ಯ: ಮನೆಯಲ್ಲಿನ ವಾತಾವರಣ ನಿಮಗೆ ಹಿತವೆನಿಸದು, ಕೆಲವು ಬೆಳವಣಿಗೆ ಅಸಂತೋಷ ಉಂಟು ಮಾಡುವುದು

ಮೇಷ
ಯಾವುದೇ ವಿಷಯದಲ್ಲಿ ಹಠಮಾರಿ ಧೋರಣೆ ಬೇಡ. ಸಮಯಕ್ಕೆ ತಕ್ಕಂತೆ ಹೊಂದಾಣಿಕೆಯ ಸ್ವಭಾವ ಬೆಳೆಸಿಕೊಳ್ಳಿ. ಆಪ್ತರಿಂದ ಮಾನಸಿಕ ಕಿರಿಕಿರಿ ಸಂಭವ.

ವೃಷಭ
ಯಾವುದೇ ವಿಷಯ ದಲ್ಲಿ ಏಕಾಗ್ರತೆ ಸಾಧಿಸಲು ಕಷ್ಟವಾಗುವುದು.  ಅದಕ್ಕೆ ಕಾರಣ ನಿಮ್ಮ ಮನಸ್ಸಿನಲ್ಲಿರುವ ನೂರಾರು ಚಿಂತೆಗಳು, ಬೇಗುದಿಗಳು.

ಮಿಥುನ
ಮಾನಸಿಕ ಬಸವಳಿಕೆ. ಕಾರ್ಯದಲ್ಲಿ ನಿರುತ್ಸಾಹ. ಕೆಲವು ದಿನಗಳ ಬಿಡುವಿಲ್ಲದ ಚಟುವಟಿಕೆ ಇದಕ್ಕೆ ಕಾರಣ. ವಿಶ್ರಾಂತಿ ಪಡೆಯಿರಿ.

ಕಟಕ
ಮನೆಯಲ್ಲಿನ ವಾತಾವರಣ ನಿಮಗೆ ಹಿತವೆನಿಸದು. ಕೆಲವು ಬೆಳವಣಿಗೆ ಅಸಂತೋಷ ಉಂಟು ಮಾಡುವುದು.  ಅದನ್ನು ವಿರೋಧಿಸಲು ಆಗದ ಪರಿಸ್ಥಿತಿ.

ಸಿಂಹ
ಕೆಲವರ ವರ್ತನೆ ಕುರಿತಂತೆಯೆ ಚಿಂತಿಸುತ್ತಾ ನಿಮ್ಮ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ.

ಕನ್ಯಾ
ನೆಗೆಟಿವ್ ಚಿಂತನೆ ನಿಮ್ಮನ್ನು ಇಂದು ಹೆಚ್ಚು ಬಾಧಿಸಬಹುದು. ಹಳಬರ ಭೇಟಿ ಇದಕ್ಕೆ ಕಾರಣವಾಗುವುದು. ಕ್ರಿಯಾತ್ಮಕ ಕೆಲಸದಲ್ಲಿ ತೊಡಗಿರಿ.

ತುಲಾ
ಕಠಿಣ ಶ್ರಮ ಪಟ್ಟರೂ ಇಂದು ನಿಮ್ಮ ಉದ್ದೇಶ  ಈಡೇರುವುದು. ಯಾರ ಜತೆಗೂ  ಅನವಶ್ಯ ವಾಗ್ವಾದಕ್ಕೆ ಇಳಿಯದಿರಿ. ಆರ್ಥಿಕ ಪರಿಸ್ಥಿತಿ ಸುಧಾರಣೆ.

ವೃಶ್ಚಿಕ
ಸಾಧ್ಯವಾಗದ ಕೆಲಸ ಎಂಬುದಾಗಿ ಭಾವಿಸಿದ್ದು  ಸುಗಮವಾಗಿ ನಡೆಯಲಿದೆ. ಇದರಿಂದ ಆತ್ಮವಿಶ್ವಾಸ ಹೆಚ್ಚುವುದು. ಕೌಟುಂಬಿಕ ಪರಿಸರ ನಿಮಗೆ ಪೂರಕ.

ಧನು
ಮುಂಜಾನೆ ಅವಧಿ ಉದ್ವಿಗ್ನತೆ, ಅಸುರಕ್ಷತೆ ಬಾಧಿಸಬಹುದು. ಆದರೆ ನಂತರ ಎಲ್ಲವೂ ಸರಿಯಾಗುವುದು. ಅಪರಾಹ್ನ  ಪೂರಕ ಬೆಳವಣಿಗೆ.

ಮಕರ
ಏನೋ ಕಳಕೊಂಡ ಭಾವನೆ. ಮನಸ್ಸಿನಲ್ಲಿ ಉದಾಸ  ಭಾವ. ಕೆಲವರಿಂದ ನೋವು. ಬಂಧುಗಳ ಜತೆ ಸೌಹಾರ್ದದಿಂದ ವರ್ತಿಸಿರಿ.

ಕುಂಭ
ಏಕಾಗ್ರತೆ ನಾಶ. ಅಸಹನೆ ಹೆಚ್ಚಳ. ನೀವು ಎದುರಿಸುತ್ತಿರುವ ಕೆಲವು ಸಮಸ್ಯೆಗಳು ಇದಕ್ಕೆ ಕಾರಣ. ಕರ್ತವ್ಯಕ್ಕೆ ಆದ್ಯತೆ ಕೊಡಿ. ಇತರ ವಿಷಯ ಬದಿಗಿಡಿ.

ಮೀನ
ಇಂದು ನೆಮ್ಮದಿ ಹಾಳು.  ಖಾಸಗಿ ಬದುಕಿನ  ಚಿಂತೆ. ಕೆಲವು ಕಠಿಣ ನಿರ್ಧಾರ ತಾಳುವುದು ಅನಿವಾರ್ಯವಾ ದೀತು. ಬಂಧು ದ್ವೇಷ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!