ದಿನಭವಿಷ್ಯ: ಈ ರಾಶಿಯವರಿಗೆ ಇಂದು ಅದೃಷ್ಟದ ದಿನ, ಅಂದುಕೊಂಡಿದ್ದೆಲ್ಲವೂ ಆಗುವ ಸಾಧ್ಯತೆ

ಮೇಷ
ಅಗತ್ಯ ಇದ್ದಲ್ಲಿ ಮಾತ್ರ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ಇಲ್ಲವಾದರೆ ವೃಥಾ ವಿವಾದ ಸೃಷ್ಟಿ. ಹೊಂದಿಕೊಂಡು ನಡೆಯಲು ಕಲಿಯಿರಿ.

ವೃಷಭ
ಹಿಂದೆ ಮಾಡಿದ ತಪ್ಪು ಒಪ್ಪಿಕೊಳ್ಳಲು ಮತ್ತು ಅದನ್ನು ಸರಿಪಡಿಸಲು ಮುಂದಾಗಿ. ಆರೋಗ್ಯ ತಪಾಸಣೆಯ ಅಗತ್ಯ ಬೀಳಬಹುದು.

ಮಿಥುನ
ಹಣ ಹೂಡಿಕೆಯಲ್ಲಿ ಎಚ್ಚರ ಇರಲಿ. ನಿಮಗೆ ಅರಿಯದ ಕ್ಷೇತ್ರದಲ್ಲಿ ಹಣ ಹೂಡಬೇಡಿ. ಕೌಟುಂಬಿಕ ಕಷ್ಟ ಬಾಧಿಸಿದರೂ ಎಲ್ಲರ ಸಹಕಾರ ಲಭ್ಯ.

ಕಟಕ
ನಿಮ್ಮ ಆಪ್ತರ ಕೆಲಸದ ಒತ್ತಡ ಕಡಿಮೆ ಮಾಡಲು ನೆರವು ನೀಡಿ. ಅವರ ಜತೆ ಕಾಲ ಕಳೆಯಿರಿ. ಹೊಸ ವ್ಯವಹಾರದಲ್ಲಿ ಹಣ ಹೂಡಬೇಡಿ.

ಸಿಂಹ
ಸಿಹಿ ಪದಾರ್ಥ ಸೇವಿಸುವ ಇಚ್ಛೆಗೆ ಕಡಿವಾಣ ಹಾಕಿ. ಆರೋಗ್ಯದ ಬಗ್ಗೆ ಗಮನ ಕೊಡಿ. ವೃತ್ತಿಯಲ್ಲಿ ಕೆಲವು ಒತ್ತಡ ಎದುರಿಸುವಿರಿ.

ಕನ್ಯಾ
ಹಣದ ವಿಚಾರದಲ್ಲಿ ಎಲ್ಲರನ್ನು ನಂಬಬೇಡಿ. ಕುಟುಂಬ ಸದಸ್ಯರ ಭಾವನೆಗೆ ಸ್ಪಂದಿಸಿರಿ. ಆರೋಗ್ಯ ಸಮಸ್ಯೆ ಬಾಧಿಸಬಹುದು.

ತುಲಾ
ಕೆಲವರ ಜತೆ ಹೆಚ್ಚು ಬಿಗಿಯಾಗಿರಿ. ನಿಮ್ಮ ಒಳ್ಳೆತನ ದುರುಪಯೋಗ ಮಾಡಲು ಅವಕಾಶ ಕೊಡದಿರಿ. ಖರ್ಚು ಮಿತಗೊಳಿಸಿ.

ವೃಶ್ಚಿಕ
ದಿನವಿಡೀ ಯಾವುದೋ ಗೊಂದಲದ ಮನಸ್ಥಿತಿ. ವೃತ್ತಿಯಲ್ಲಿ ಪ್ರತಿಕೂಲ ಪರಿಸ್ಥಿತಿ. ಭಾವುಕತೆಯಿಂದ ಬಳಲುವಿರಿ.

ಧನು
ಉತ್ಸಾಹಪೂರ್ಣ ದಿನ. ವೃತ್ತಿಯಲ್ಲಿ ಯಶಸ್ಸು. ಕಿರಿಯರು ಗೌರವ ನೀಡುವರು. ಆರೋಗ್ಯ ಸಮಸ್ಯೆ ನಿವಾರಣೆ. ಮಾನಸಿಕ ನಿರಾಳತೆ.

ಮಕರ
ಸಣ್ಣ ಆರೋಗ್ಯ ಸಮಸ್ಯೆಯಿದ್ದರೂ ಈಗಲೆ ಅದನ್ನು ಬಗೆಹರಿಸಿ. ಅದನ್ನು ಮುಂದುವರಿಯಲು  ಬಿಡದಿರಿ. ವೃತ್ತಿಯಲ್ಲಿ ಒತ್ತಡ ಎದುರಿಸುವಿರಿ.

ಕುಂಭ
ಹಣದ ವ್ಯವಹಾರ ಸುಸೂತ್ರಗೊಳಿಸಿ. ಗೊಂದಲಕ್ಕೆ ಆಸ್ಪದ ನೀಡದಿರಿ. ಕೌಟುಂಬಿಕ ವಾಗ್ವಾದ ನಡೆದೀತು. ಸಹನೆಯಿಂದ ವರ್ತಿಸಿ.

ಮೀನ
ವ್ಯವಹಾರದಲ್ಲಿ ಗೊಂದಲ ಉಂಟಾದರೆ ಸೂಕ್ತ ಸಲಹೆ ಪಡೆಯಿರಿ. ಆರೋಗ್ಯ ಸಮಸ್ಯೆ ನಿರ್ಲಕ್ಷಿಸದಿರಿ. ಬಂಧು ಭೇಟಿಯಿಂದ ಸಂಭ್ರಮ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!