ದಿನಭವಿಷ್ಯ: ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ಅತ್ಯುತ್ತಮ ದಿನ, ನಿಮ್ಮನ್ನು ತಡೆಯೋರು ಯಾರೂ ಇಲ್ಲ

ಮೇಷ
ಕೊರಗೊಂದು ಮನಸ್ಸನ್ನು ಕಾಡುತ್ತಿದೆ.ಅದರಿಂದ ಸದ್ಯಕ್ಕೆ ಮುಕ್ತಿ ಸಿಗಲಾರದು. ಸ್ವಲ್ಪ ಕಾಲ ಕಾಯಬೇಕು. ಬಳಿಕ ನಿವಾರಣೆಯಾಗಲಿದೆ.
ವೃಷಭ
ಕೆಲಸದ ಕ್ಷೇತ್ರದಲ್ಲಿ ಒತ್ತಡ ನಿವಾರಣೆ. ಸುಗಮವಾಗಿ ಕಾರ್ಯ ನಿರ್ವಹಿಸಲು ಅನುಕೂಲ. ವಿದ್ಯಾರ್ಥಿಗಳ  ಪಾಲಿಗೆ ಶುಭಕರ ಬೆಳವಣಿಗೆ.ಮಿಥುನ
ಕೌಟುಂಬಿಕ ವ್ಯವಹಾರದಲ್ಲಿ ಕಿರಿಕಿರಿ. ಅದನ್ನು ಸಮಾಧಾನದಿಂದ ನಿಭಾಯಿಸಿ. ವೃತ್ತಿಯ ಮೇಲೆ ಪರಿಣಾಮ ಬೀರದಂತೆ  ನೋಡಿಕೊಳ್ಳಿ.

ಕಟಕ
ಜತೆಗಿರುವ ಕೆಲವರ  ವರ್ತನೆ ಅಸಹನೀಯ ಎನಿಸಬಹುದು. ಆದರೆ ಅವರ ಜತೆ ಹೊಂದಿ ಬಾಳುವುದು ಮುಖ್ಯ. ಅನ್ಯರ ಭಾವನೆ ಗೌರವಿಸಿ.
ಸಿಂಹ
ಮಾನಸಿಕ ಬೇಗುದಿ, ತಾಕಲಾಟ.  ಸಮಸ್ಯೆ ಗುರುತಿಸಿ ಪರಿಹರಿಸಿ. ವ್ಯಕ್ತಿಯೊಬ್ಬರು ಕೌಟುಂಬಿಕ ಶಾಂತಿ ಕೆಡಿಸುವರು.  ನಿಮ್ಮ ಎಚ್ಚರದಲ್ಲಿರಿ.ಕನ್ಯಾ
ಸಣ್ಣ ವಿಷಯಕ್ಕೆ ಸಂಗಾತಿ ಜತೆ ತಿಕ್ಕಾಟ ನಡೆದೀತು. ಸಂಯಮದ ವರ್ತನೆ ಅಗತ್ಯ. ವ್ಯವಹಾರ ಸಂಬಂಧ ದೂರ ಪ್ರಯಾಣ.

ತುಲಾ
ಕೆಲವು ವ್ಯಕ್ತಿಗಳನ್ನು  ಬದಲಿಸುವ ಯತ್ನಕ್ಕೆ ಹೋಗದಿರಿ. ಅದರಲ್ಲಿ ಯಶ ಸಿಗದು. ಆರ್ಥಿಕ ಹೊರೆ ಹೆಚ್ಚು. ಖರ್ಚು ನಿಭಾಯಿಸಬೇಕು.

ವೃಶ್ಚಿಕ
ನಿಮ್ಮ ಸುತ್ತಲಿನ ಬದಲಾವಣೆ ನಿಮಗೆ ಪೂರಕವಾಗುವುದು. ಹಾಗಾಗಿ ಬದಲಾವಣೆಗೆ ವಿರೋಧ ತೋರದಿರಿ. ಹೊಂದಾಣಿಕೆ ಮುಖ್ಯ.
ಧನು
ಕುಟುಂಬಸ್ಥರ ಜತೆ ಆತ್ಮೀಯ ಕಾಲಕ್ಷೇಪ. ಬಂಧುಗಳಿಂದ ಹಿತ ತರುವ ಸುದ್ದಿ. ಆರ್ಥಿಕ ಲಾಭವೂ ಉಂಟಾದೀತು. ತೃಪ್ತಿಕರ ದಿನವಿದು.
ಮಕರ
ಕೆಲವರೆಡೆಗೆ ನೀವು ತೋರುವ ಕಾಳಜಿಗೆ ಅದೇ ಬಗೆಯ ಸ್ಪಂದನೆ ದೊರಕದು. ಅದರಿಂದ ಬೇಗುದಿ. ಮನೆಯಲ್ಲಿ ಹೆಚ್ಚಿನ ಜವಾಬ್ದಾರಿ.
ಕುಂಭ
ಉದ್ಯೋಗದಲ್ಲಿ ಯಶಸ್ವಿ ವ್ಯವಹಾರ. ಅಡ್ಡಿಗಳ ನಿವಾರಣೆ. ಸಂಗಾತಿಗಳ ನಡುವಿನ ಭಿನ್ನಮತ ಪರಿಹಾರ. ಹೆಚ್ಚುವರಿ ಹಣ ಗಳಿಕೆ.
ಮೀನ
ನಿಮ್ಮನ್ನು ವಿರೋಧಿಸುವ  ಕೆಲವರು ನಿಮ್ಮ ಅವನತಿಗೆ ಯೋಜನೆ ಹಾಕಿಯಾರು, ಎಚ್ಚರವಿರಿ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!