October 10, 2026
Saturday, October 10, 2026
spot_img

CINE | ಒಟಿಟಿಯಲ್ಲಿ ಧೂಳೆಬ್ಬಿಸಲು ರೆಡಿಯಾದ ‘ಅತಿರಡಿ’: ಯಾವಾಗ? ಎಲ್ಲಿ ಸ್ಟ್ರೀಮಿಂಗ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದ ಮಲಯಾಳಂನ ಕಾಂಪಸ್ ಎಂಟರ್‌ಟೈನರ್ ಚಿತ್ರ ‘ಅತಿರಡಿ’ ಈಗ ಒಟಿಟಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಜಾಗತಿಕವಾಗಿ ಭಾರಿ ಹೈಪ್ ಸೃಷ್ಟಿಸಿದ್ದ ಈ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಸೋನಿ ಲಿವ್ ಸಂಸ್ಥೆ ಅಧಿಕೃತವಾಗಿ ಖರೀದಿಸಿದ್ದು, ಜೂನ್ 19 ರಿಂದ ದಕ್ಷಿಣ ಭಾರತದ ಭಾಷೆಗಳು ಸೇರಿದಂತೆ ಹಿಂದಿಯಲ್ಲೂ ಪ್ರಸಾರ ಮಾಡುವುದಾಗಿ ಪ್ರಕಟಿಸಿದೆ.

‘ಸಾಮ್‌ಕುಟ್ಟಿ Vs ಶ್ರೀಕುಟ್ಟನ್’ ಕಾಲೇಜು ಜಟಾಪಟಿಯ ಕಥೆ

ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಅರುಣ್ ಅನಿರುದ್ಧನ್ ನಿರ್ದೇಶನದ ಈ ಚಿತ್ರವು ಅತ್ಯಂತ ರೋಚಕವಾದ ಕಥಾಹಂದರವನ್ನು ಹೊಂದಿದೆ. ಕಾಲೇಜಿನಲ್ಲಿ ದೀರ್ಘಕಾಲದಿಂದ ನಿಂತುಹೋಗಿದ್ದ ಸಾಂಪ್ರದಾಯಿಕ ಹಬ್ಬವನ್ನು ಪುನರಾರಂಭಿಸಲು ನಾಯಕ ಸಾಮ್‌ಕುಟ್ಟಿ ಮುಂದಾಗುತ್ತಾನೆ. ಆದರೆ, ಈ ಹಬ್ಬ ನಡೆದರೆ ತನ್ನ ಲೈವ್ ಮ್ಯೂಸಿಕ್ ಶೋ ಕನಸು ಭಗ್ನಗೊಳ್ಳುತ್ತದೆ ಎಂದು ಭಾವಿಸುವ ಮಾಜಿ ರೌಡಿ ಶ್ರೀಕುಟ್ಟನ್ ಅದನ್ನು ತಡೆಯಲು ಭೀಕರ ಹಾದಿ ಹಿಡಿಯುತ್ತಾನೆ. ಇವರಿಬ್ಬರ ನಡುವಿನ ಕಾಂಪಸ್ ವಾರ್, ಕಾಮಿಡಿ ಹಾಗೂ ಹೈ-ವೋಲ್ಟೇಜ್ ಆ್ಯಕ್ಷನ್ ಚಿತ್ರದ ಹೈಲೈಟ್ ಆಗಿದೆ.

ಇದನ್ನೂ ಓದಿ:

‘ಮಿನ್ನಲ್ ಮುರಳಿ’ ಕಾಂಬಿನೇಷನ್ ಧಮಾಕಾ!

2021ರ ಸೂಪರ್ ಹೀರೊ ಚಿತ್ರ ‘ಮಿನ್ನಲ್ ಮುರಳಿ’ಯಲ್ಲಿ ಟೊವಿನೋ ಥಾಮಸ್ ನಟಿಸಿದ್ದರೆ, ಬೇಸಿಲ್ ಜೋಸೆಫ್ ಅದರ ನಿರ್ದೇಶಕರಾಗಿದ್ದರು. ಈಗ ‘ಅತಿರಡಿ’ ಚಿತ್ರದ ಮೂಲಕ ಈ ಇಬ್ಬರು ದಿಗ್ಗಜರು ತೆರೆಯ ಮೇಲೆ ಮುಖಾಮುಖಿಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಭಾರಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿನೀತ್ ಶ್ರೀನಿವಾಸನ್ ಮತ್ತು ರಿಯಾ ಶಿಬು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Must Read