ದಿನಭವಿಷ್ಯ: ದೂರ ಪ್ರಯಾಣದ ಅವಕಾಶ, ಅದರಿಂದ ಕೆಲವು ಕಿರಿಕಿರಿ ಅನುಭವಿಸುವಿರಿ!

ಮೇಷ
ವೃತ್ತಿ ಒತ್ತಡ ಮರೆತು, ಕುಟುಂಬಸ್ಥರ ಸಂಗ ದಲ್ಲಿ ಕಾಲ ಕಳೆಯುವ ಅವಕಾಶ. ಮನೆಗೆ ಸಂಬಂಧಿಸಿ ಕೆಲವು ಅಗತ್ಯ ಕಾರ್ಯ ಪೂರೈಸಿ.

ವೃಷಭ
ಉದ್ಯೋಗದಲ್ಲಿ ಹೊಸ ಪ್ರಯೋಗಗಳಿಗೆ ಯತ್ನಿಸದಿರಿ. ಅದರಿಂದ ಉತ್ತಮ ಫಲ ಸಿಗದು. ಸಾಂಸಾರಿಕ ಬಿಕ್ಕಟ್ಟು ಶಮನ. ಇದರಿಂದ ಮನಸ್ಸಿಗೆ ನಿರಾಳತೆ.

ಮಿಥುನ
ದೂರ ಪ್ರಯಾಣದ ಅವಕಾಶ . ಅದರಿಂದ ಕೆಲವು ಕಿರಿಕಿರಿ ಅನುಭವಿಸುವಿರಿ. ವೃತ್ತಿಯಲ್ಲಿ  ಕೆಲವರ ವಿರೋಧ ಎದುರಿಸುವಿರಿ.

ಕಟಕ
ಆಕ್ರಮಣಶೀಲರಾಗಿ ವರ್ತಿಸುವಿರಿ. ಆದರೆ ಅನವಶ್ಯ ವಿಚಾರದಲ್ಲಿ ಜಗಳ ಕಾಯದಿರಿ. ಸಿಡುಕಿನಿಂದ ಕೆಡುಕು. ಸಹನೆಯನ್ನು ಕಾಯ್ದುಕೊಳ್ಳಿ.

ಸಿಂಹ
ಒಳ್ಳೆಯ ಕೆಲಸ ಎಂದೂ ವ್ಯರ್ಥವಾಗದು. ಅದರ ಫಲ ಸಿಗುವುದು. ಇದರ ಅನುಭವ ನಿಮಗೆ ಆಗಲಿದೆ. ಇತರರಿಗೆ ನೆರವು ನೀಡಲು ಹಿಂಜರಿಯದಿರಿ.

ಕನ್ಯಾ
ಅವ್ಯಕ್ತ ಆತಂಕವೊಂದು ದಿನವಿಡೀ ಕಾಡ ಬಹುದು. ಅದನ್ನು ನಿಭಾಯಿಸಲು ನಿಮ್ಮಿಂದಾಗದು. ಬೇರೆ ವಿಚಾರಗಳಲ್ಲಿ ಮನಸ್ಸು ತೊಡಗಿಸಿ.

ತುಲಾ
ಧಾರ್ಮಿಕ ವಿಚಾರ ಗಳಲ್ಲಿ ಇಂದು ಹೆಚ್ಚು ಆಸಕ್ತಿ. ಕಷ್ಟಗಳಿಂದ ಪಾರಾಗಲು ದೇವರ ಮೊರೆ ಹೋಗುವಿರಿ. ಸಾಂಸಾರಿಕ ವಿರಸ.
ಸಹನೆ ಇರಲಿ.

ವೃಶ್ಚಿಕ
ಕೆಲದಿನಗಳ ಕಠಿಣ ಶ್ರಮದ ಬಳಿಕ ಇಂದು ಅದರ ಫಲ ಉಣ್ಣಲು ತಯಾರಾಗಿರಿ. ನೀವು ಕುಶಿ ಪಡುವ ಬೆಳವಣಿಗೆ ಸಂಭವಿಸುವುದು. ನಿರೀಕ್ಷೆ ಈಡೇರಿಕೆ.

ಧನು
ಕಾಲ ಯಾರಿಗೂ ಕಾಯದು. ನೀವೂ ಅಷ್ಟೆ , ಸಮಯ ವ್ಯರ್ಥ ಮಾಡದೆ ಕಾರ್ಯದಲ್ಲಿ ತೊಡಗಬೇಕು. ಕೆಲಸ ಮುಂದೂಡುತ್ತಾ ಬರಬೇಡಿ.

ಮಕರ
ಹಣಕಾಸು ವಿಚಾರ ಗಳಲ್ಲಿ ಇಂದು ಎಚ್ಚರ ವಹಿಸಿ. ಆರ್ಥಿಕವಾಗಿ ಹಿನ್ನಡೆ ಉಂಟಾಗುವ ಸಾಧ್ಯತೆಗಳಿವೆ. ಕೌಟುಂಬಿಕ ನೆಮ್ಮದಿ ಕಲಕಬಹುದು.

ಕುಂಭ
ಇಂದು ಅದೃಷ್ಟ ನಿಮ್ಮ ಜತೆಗಿದೆ. ಯಾವುದೇ ಕಾಯ ವಿಫಲಗೊಳ್ಳದು. ನೈತಿಕ ವಿಚಾರಗಳಲ್ಲಿ ನಿಮ್ಮ ನಿಲುವಿನೊಂದಿಗೆ ರಾಜಿ ಮಾಡಬೇಡಿ. ಒತ್ತಡಕ್ಕೆ ಸಿಲುಕದಿರಿ.

ಮೀನ
ಹಳೆ ನೆನಪು ಕಾಡುವಂತಹ ವ್ಯಕ್ತಿಗಳ ಭೇಟಿ. ಪ್ರೀತಿಪಾತ್ರರು ನಿಮ್ಮ ದಿನವನ್ನು ಆನಂದಗೊಳಿಸುತ್ತಾರೆ. ವೃತ್ತಿಯಲ್ಲಿ ಹೆಚ್ಚು ಏರುಪೇರಿರದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!