ಮೇಷ
ಹತಾಶೆ, ನೆಗೆಟಿವ್ ಚಿಂತನೆ ಆವರಿಸಬಹುದು. ನೀವು ಬಯಸಿದ ಕೆಲಸ ಆಗಲಾರದು. ತಾಳ್ಮೆಯಿರಲಿ, ಒಳ್ಳೆ ಕಾಲ ಬರುವುದು ಖಂಡಿತ.
ವೃಷಭ
ಸದ್ಯದ ಪರಿಸ್ಥಿತಿ ನಿರಾಶೆ ತರಬಹುದು. ಆಶಾವಾದ ಬಿಡಬೇಡಿ. ಹೃದಯದ ಮಾತು ಕೇಳಿ ಮುಂದುವರಿಯಿರಿ. ಎಲ್ಲ ಸರಿಯಾಗಲಿದೆ.
ಮಿಥುನ
ಸಂತೋಷ, ಉತ್ಸಾಹ ತುಂಬಿದ ದಿನ. ಇತರರಿಗೆ ನೆರವು ನೀಡುವಿರಿ. ಇದು ಕೆಲವರಿಗೆ ಅಚ್ಚರಿ ತಂದೀತು. ಕೌಟುಂಬಿಕ ಒತ್ತಡ ನಿವಾರಣೆ.
ಕಟಕ
ಯಾವುದೋ ಕಾರಣಕ್ಕೆ ಭಾವುಕರಾಗುವಿರಿ. ಕೋಪ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಆತುರದ ನಿರ್ಧಾರ ತಾಳಬೇಡಿ. ಸಿಂಹ
ಅಸಹನೆ ಹೆಚ್ಚಿಸುವ ಬೆಳವಣಿಗೆ. ಅದು ನಿಮ್ಮ ವರ್ತನೆ ಮೇಲೆ ಪರಿಣಾಮ ಬೀರದಂತೆ ಎಚ್ಚರ ವಹಿಸಿ. ಕೆಲವರ ಅಸಹಕಾರ ಸಂಭವ.
ಕನ್ಯಾ
ಮನಸ್ಸು ಇಂದು ನಿರಾಳವಾಗಲಿದೆ. ಕಾಡುತ್ತಿದ್ದ ಸಮಸ್ಯೆ ಪರಿಹಾರ. ಧಾರ್ಮಿಕ ಕಾರ್ಯದಿಂದ ಮಾನಸಿಕ ನೆಮ್ಮದಿ ಪಡೆಯಿರಿ.
ತುಲಾ
ಧಾರ್ಮಿಕತೆ. ಅಧ್ಯಾತ್ಮದೆಡೆಗೆ ಮನಸ್ಸು ಹರಿಯಬಹುದು. ಇದು ನಿಮ್ಮನ್ನು ನೀವೇ ಅರ್ಥ ಮಾಡಿಕೊಳ್ಳುವ ಯತ್ನ. ಮಾನಸಿಕ ನೆಮ್ಮದಿ.
ವೃಶ್ಚಿಕ
ಖಾಸಗಿ ಬದುಕನ್ನು ನಿರ್ಲಕ್ಷಿಸಿದ್ದರೆ ಇನ್ನಾದರೂ ಆ ಬಗ್ಗೆ ಗಮನ ಕೊಡಿ. ನಿಮ್ಮ ಸುತ್ತ ಪಾಸಿಟಿವ್ ಬದಲಾವಣೆಗಳನ್ನು ತನ್ನಿ. ಧನಪ್ರಾಪ್ತಿ ಹೆಚ್ಚಳ.
ಧನು
ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಒತ್ತಡ ಎದುರಿಸುವಿರಿ. ನಿಮ್ಮ ಸಾಮರ್ಥ್ಯದ ಪೂರ್ಣ ಬಳಕೆ ಮಾಡಿಕೊಳ್ಳಿ. ಬದಲಾವಣೆ ಕಾಣುವಿರಿ.
ಮಕರ
ಅಶಾಂತ ದಿನ. ದೈಹಿಕ ನೋವು ಅಥವಾ ಮಾನಸಿಕ ಒತ್ತಡ ಇದಕ್ಕೆ ಕಾರಣವಾದೀತು. ದಿನದ ಜಂಜಡದಿಂದ ಹೊರಬನ್ನಿ, ವಿರಾಮ ಪಡೆಯಿರಿ.
ಕುಂಭ
ಭಾವುಕ ಪ್ರಸಂಗ ಎದುರಿಸುವಿರಿ. ಇದು ಸಕಾರಾತ್ಮಕವೇ ಆಗಲಿದೆ. ಪ್ರೀತಿಪಾತ್ರರ ಒಡನಾಟ ಸಂತೋಷ ತರಲಿದೆ. ಆರೋಗ್ಯ ಸುಸ್ಥಿರ.
ಮೀನ
ನಿಮ್ಮ ಬದುಕಿನ ಪ್ರಮುಖ ವಿಷಯಕ್ಕೆ ಆದ್ಯತೆ ಕೊಡಿ. ಮಹತ್ವದ್ದಲ್ಲದ ವಿಷಯಕ್ಕೆ ಶ್ರಮ ವ್ಯರ್ಥ ಮಾಡದಿರಿ. ಕೌಟುಂಬಿಕ ಒತ್ತಡ.
ದಿನಭವಿಷ್ಯ: ಈ ರಾಶಿಯವರಿಗೆ ಇಂದು ನೆಮ್ಮದಿಯ ದಿನ, ಸಮಸ್ಯೆಗೆ ಪರಿಹಾರ ಸಿಗಲಿದೆ

