Sunday, June 4, 2023

Latest Posts

ದಿನಭವಿಷ್ಯ : ಇಂದು ಶಾಂತಚಿತ್ತರಾಗಿ ಆಲೋಚಿಸಿ, ಏಕೆಂದರೆ ನೀವು ಮಹತ್ವದ ತೀರ್ಮಾನ ಕೈಗೊಳ್ಳಬೇಕಾದೀತು

ಮೇಷ
ಹಣ, ವೃತ್ತಿಯ  ವಿಚಾರದಲ್ಲಿ ಮಹತ್ವದ ನಿರ್ಧಾರ ತಾಳುವ ಮುನ್ನ ಸಾಕಷ್ಟು ಆಲೋಚಿಸಿ. ಹೊಸ ಉದ್ಯಮಕ್ಕೆ ಈಗಲೇ ಕೈ ಹಾಕದಿರಿ. ಕೌಟುಂಬಿಕ ಒತ್ತಡ.

ವೃಷಭ
ಇತರರ ಜತೆಗಿನ ಪೈಪೋಟಿಯಲ್ಲಿ  ಇಂದು ನಿಮಗೆ ಯಶ ಸಿಗುವುದು. ಎಲ್ಲ ಕಾರ್ಯಗಳಲ್ಲಿ ಸಫಲತೆ.  ಕುಟುಂಬ ಸದಸ್ಯರಿಂದ ಸಹಕಾರ ಲಭ್ಯ.

ಮಿಥುನ
ಇಂದು ಶಾಂತಚಿತ್ತರಾಗಿ ಆಲೋಚಿಸಿ. ಏಕೆಂದರೆ ನೀವು ಮಹತ್ವದ ತೀರ್ಮಾನ ಕೈಗೊಳ್ಳಬೇಕಾದೀತು. ಅವಸರ, ಒತ್ತಡಕ್ಕೆ ಅವಕಾಶ ನೀಡದಿರಿ.

ಕಟಕ
ವೃತ್ತಿಯಲ್ಲಿ ಕೆಲವು ಆಶಾವಾದಿ ಸಂಕೇತಗಳು ತೋರಿಬರುತ್ತವೆ. ಅದರಿಂದ ನಿಮ್ಮ ಕೆಲವು ಸಂಕಷ್ಟಗಳು ಪರಿಹಾರ ಕಾಣಲಿವೆ. ಜತೆಗೇ ನಿಮ್ಮ ಪ್ರಯತ್ನವೂ ಬೇಕು.

ಸಿಂಹ
ಅನಿರೀಕ್ಷಿತ ಕೆಲಸದ ಹೊರೆ ಬೀಳಬಹುದು. ಆತಂಕ ಬೇಡ. ಇತರರ  ಸಹಕಾರದಿಂದ ಅದನ್ನು ನಿಭಾಯಿಸುವಿರಿ. ಸಣ್ಣ ಮಟ್ಟಿನ ಅನಾರೋಗ್ಯ ಕಾಡಬಹುದು.

ಕನ್ಯಾ
ಅನಿರೀಕ್ಷಿತ ಧನಲಾಭ. ಸಂಬಂಧದಲ್ಲಿ  ಏರಿಳಿತ ಸಂಭವ. ಆಪ್ತೇಷ್ಟರ ಬೇಕುಬೇಡಗಳಿಗೆ ಸೂಕ್ತವಾಗಿ ಸ್ಪಂದಿಸಿರಿ. ಅವರ ಮನಸ್ಸಿಗೆ ನೋವು ತರಬೇಡಿ.

ತುಲಾ
ನೀವು ಬಯಸಿದ ಬೆಳವಣಿಗೆ ಉಂಟಾಗುವುದು. ಮನಸ್ಸಿನ ಒತ್ತಡ ನಿವಾರಣೆ. ಇದರಿಂದ ಆರೋಗ್ಯವೂ ಸುಸ್ಥಿತಿಗೆ ಬರುವುದು.

ವೃಶ್ಚಿಕ
ಸಮತೋಲಿತ ಮನಸ್ಥಿತಿ ಇಂದು ನಿಮ್ಮದು.  ಹೊಸಬರ ಸ್ನೇಹ ಸಾಧ್ಯವಾದೀತು. ಖಾಸಗಿ ಬದುಕಿನಲ್ಲಿ ಅದೃಷ್ಟ ನಿಮ್ಮೊಂದಿಗಿರುವುದು. ಕಾರ್ಯ ಸಾಧನೆ.

ಧನು
ನಿಮ್ಮ ಕೆಲಸಕ್ಕೆ  ಹೆಚ್ಚಿನ ಆಸ್ಥೆ ನೀಡಿ. ಉದಾಸೀನತೆ ತೊರೆಯಿರಿ. ಇಲ್ಲವಾದರೆ ನಿರೀಕ್ಷಿತ ಫಲ ದೊರಕಲಾರದು. ಕೌಟುಂಬಿಕ ಒತ್ತಡ.

ಮಕರ
ಹೆಚ್ಚಿನ ಹೊಣೆಗಾರಿಕೆ, ಹೆಚ್ಚು ಒತ್ತಡ. ಮಾನಸಿಕ ಶಾಂತಿ ದೂರ. ಒಟ್ಟಿನಲ್ಲಿ ಇಂದಿನ ದಿನ ನಿಮ್ಮ ಪಾಲಿಗೆ ಪೂರಕವೆನಿಸದು. ಕುಟುಂಬಸ್ಥರ ಸಂಗದಲ್ಲಿ ಸಾಂತ್ವನ ಪಡೆಯಿರಿ.

ಕುಂಭ
ಅನಪೇಕ್ಷಿತ ವ್ಯಕ್ತಿಗಳ ಅನಿರೀಕ್ಷಿತ ಭೇಟಿಯಿಂದ  ನಿಮ್ಮ ಮನಸ್ಸಿನ ಶಾಂತಿ ಕದಡಬಹುದು. ನಿಮ್ಮ ಕರ್ತವ್ಯಕ್ಕೆ ಚ್ಯುತಿಯಾಗದಂತೆ ನೋಡಿಕೊಳ್ಳಿ.

ಮೀನ
ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ ಎಂಬ ಅರಿವು ಆಗಲಿದೆ. ಮೊದಲಿಗೆ ಮಾನಸಿಕ ಒತ್ತಡ ಕಡಿಮೆ ಮಾಡಿ. ಅನವಶ್ಯ ವಾಗ್ವಾದಕ್ಕೆ ಹೋಗದಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!