ದಿನಭವಿಷ್ಯ: ವೃತ್ತಿಯಲ್ಲಿ ಅದೃಷ್ಟ ನಿಮ್ಮ ಪರವಾಗಿದೆ, ಉನ್ನತಿ ಸಾಧಿಸುವಿರಿ

ಮೇಷ
ಗೊಂದಲದ ಮನಸ್ಥಿತಿ.ಎಲ್ಲವೂ ನೀವು ಬಯಸಿದಂತೆ ಸಾಗದು. ಹಾಗೆಂದು ಹತಾಶೆ ಬೇಡ.ಆತ್ಮವಿಶ್ವಾಸವಿರಲಿ.ಕೆಲವರಿಗೆ ಚರ್ಮದ ಅಲರ್ಜಿ ಕಾಣಿಸೀತು.

ವೃಷಭ
ವೃತ್ತಿಯಲ್ಲಿ ಅದೃಷ್ಟ ನಿಮ್ಮ ಪರವಾಗಿದೆ. ಉನ್ನತಿ ಸಾಧಿಸುವಿರಿ. ಎಲ್ಲರಿಂದ  ಸಹಕಾರ ಪಡೆಯುವಿರಿ. ಇತರರ ಸಲಹೆಯನ್ನು  ಸ್ಫೂರ್ತಿಯಿಂದ ತೆಗೆದುಕೊಳ್ಳಿ.

ಮಿಥುನ
ಬಾಕಿ ಇರುವ ಕೆಲಸ ಮೊದಲು ಮುಗಿಸಿರಿ. ಇಲ್ಲವಾದರೆ ಆ ಕುರಿತಾದ ಒತ್ತಡ ಹೆಚ್ಚುವುದು. ಕೌಟುಂಬಿಕ ಭಿನ್ನಮತ ಉಂಟಾದೀತು.

ಕಟಕ
ನೀವು ಮಾಡುವ ಪ್ರತೀ ಕಾರ್ಯದಲ್ಲಿ ಇಂದು ಯಶಸ್ಸು ಸಿಗುವುದು. ವೇತನದಲ್ಲಿ ಉನ್ನತಿ. ಆತ್ಮೀಯ ಬಂಧುಗಳ ಜತೆ ಭಿನ್ನಾಭಿಪ್ರಾಯ ಉಂಟಾದೀತು.

ಸಿಂಹ
ಇತರರು ಏನು ಹೇಳುತ್ತಾರೆ ಎಂದು  ಚಿಂತಿಸುವುದು ಬಿಡಿ. ನೀವು ತೆಗೆದುಕೊಳ್ಳುವ ನಿರ್ಧಾರ ಇತರರನ್ನು ಘಾಸಿಗೊಳಿಸದಂತೆ ಎಚ್ಚರ ವಹಿಸಿರಿ.

ಕನ್ಯಾ
ಉತ್ಸಾಹದ ದಿನ. ಕೌಟುಂಬಿಕ ಸಂಭ್ರಮ. ನಿಮ್ಮ ಮಾತು , ವರ್ತನೆಯಲ್ಲಿ ಹಿಡಿತವಿರಲಿ. ಇತರರ ಮನಸ್ಸು ನೋಯದಂತೆ ನೋಡಿಕೊಳ್ಳಿ.

ತುಲಾ
ಕ್ಲಿಷ್ಟಕರ ಪರಿಸ್ಥಿತಿ. ಆದರೆ ನಿಮಗೆ ನೆರವು ನೀಡುವ ಹಸ್ತಗಳು ಹಲವಾರಿವೆ. ಪ್ರೀತಿಯ ವಿಷಯದಲ್ಲಿ ಬಿಕ್ಕಟ್ಟು ಎದುರಿಸುವಿರಿ. ಪ್ರತಿಕೂಲ ಬೆಳವಣಿಗೆ ಉಂಟಾದೀತು.

ವೃಶ್ಚಿಕ
ಆತ್ಮೀಯ ಸಂಬಂಧದಲ್ಲಿ ಸಮಸ್ಯೆ ಉಂಟಾದೀತು. ಪರಸ್ಪರ ಹೊಂದಾಣಿಕೆಗೆ ಆದ್ಯತೆ ಕೊಡಬೇಕು. ಹಠವಾದಿ ಧೋರಣೆ ಬಿಡಬೇಕು. ಆರ್ಥಿಕ ಒತ್ತಡ ನಿವಾರಣೆ.

ಧನು
ದೊಡ್ಡ ಖರ್ಚು ನಿಮ್ಮನ್ನು ಕಾಯುತ್ತಿದೆ. ವಾದವಿವಾದದಿಂದ ದೂರವಿರಿ. ಏಕೆಂದರೆ ಇಂದು ನಿಮ್ಮ ದಿನವಲ್ಲ. ಎದುರಾಳಿಗಳು ಮೇಲುಗೈ ಸಾಧಿಸುವರು.

ಮಕರ
ಮನೆಯಲ್ಲಿ ಭಿನ್ನಮತ ಉಂಟಾದೀತು. ನಿಮ್ಮ ಕರ್ತವ್ಯ ನೆರವೇರಿಸುವಲ್ಲಿ ಲೋಪ ಮಾಡಬೇಡಿ. ಹಿರಿಯರ ಸಲಹೆಗಳಿಗೆ ಕಿವಿಗೊಟ್ಟರೆ ಒಳಿತು.

ಕುಂಭ
ಕೆಲಸದ ಒತ್ತಡದಿಂದ ತುಸು ವಿರಾಮ ಪಡೆಯುವುದು ಒಳ್ಳೆಯದು. ಇದು ನಿಮ್ಮ ಮನಸ್ಸನ್ನೂ ಉಲ್ಲಸಿತಗೊಳಿಸೀತು. ಕೌಟುಂಬಿಕ ಸಹಕಾರ.

ಮೀನ
ಕೆಲವು ಬದಲಾವಣೆ ಇಂದು ಉಂಟಾದೀತು. ಕೆಲಸದ ಮೇಲೆ ಆಸ್ಥೆ ಕಳಕೊಳ್ಳದಿರಿ. ಕೆಲವರ ವರ್ತನೆ ಬೇಸರ ತರುವುದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!