ದಿನಭವಿಷ್ಯ: ಭಾವನೆಗಳ ಮೇಲೆ ಹಿಡಿತ ಇರಲಿ, ಇಲ್ಲವೇ ಭಾವುಕ ಸನ್ನಿವೇಶದಲ್ಲಿ ಸಿಲುಕುತ್ತೀರಿ!

ಮೇಷ
ಭಾವನೆಗಳ ಮೇಲೆ ನಿಯಂತ್ರಣವಿಡಿ. ಭಾವುಕ ಸನ್ನಿವೇಶ ಎದುರಾದೀತು. ಕಾರ್ಯದಲ್ಲಿ ನಿಷ್ಠತೆ ನಿಮ್ಮ ಕೆಲಸವನ್ನು ಸುಗಮಗೊಳಿಸುವುದು.

ವೃಷಭ
ಕಾರ್ಯ ಸಾಫಲ್ಯ. ಬಂಧುಗಳ ಜತೆ ಕಾಲಕ್ಷೇಪ. ವಿವಿಧ ಮೂಲಗಳಿಂದ ಧನಲಾಭ. ಕೆಲವರ ಮತ್ಸರದ ನುಡಿ ಮನಸ್ಸು ಕೆಡಿಸಬಹುದು.

ಮಿಥುನ
ಕೆಲಸದ ಒತ್ತಡ ಅಧಿಕ. ಎಲ್ಲವನ್ನೂ ಯೋಜನೆಯ ಪ್ರಕಾರ ನಡೆಸಿದರೆ ಸುಗಮವಾದೀತು. ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದೀತು.

ಕಟಕ
ಆತ್ಮೀಯ ಸಂಬಂಧದಲ್ಲಿ  ಬಿರುಕು ಉಂಟಾದೀತು.  ವಿವೇಕದಿಂದ ನಡೆದುಕೊಳ್ಳಿ. ಸಣ್ಣ ಮಾತಿಗೂ ರೇಗುವುದು ತರವಲ್ಲ. ಮುಕ್ತ ಮಾತು ಒಳ್ಳೆಯದು.

ಸಿಂಹ
ವೃತ್ತಿ ಮತ್ತು ಖಾಸಗಿ ಬದುಕಿನ ಮಧ್ಯೆ ಸಮತೋಲನ ಸಾಧಿಸಿರಿ. ಕೆಲವು ಸವಾಲು ಒದಗಬಹುದಾದರೂ ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲಿರಿ.

ಕನ್ಯಾ
ಇದು ಅತಿಯಾದ ಹೊಣೆಗಾರಿಕೆ. ಭವಿಷ್ಯದ ಕುರಿತಾದ ಚಿಂತನೆಯು ಆತಂಕ ಮೂಡಿಸಬಹುದು. ಆಪ್ತರ ಸಂಗದಲ್ಲಿ ಒತ್ತಡ ಮರೆಯಲೆತ್ನಿಸಿ.

ತುಲಾ
ಕೆಲಸದಲ್ಲಿ ಏಕಾಗ್ರತೆ ಮೂಡದು. ಇನ್ನಿತರ ವಿಷಯ ಮನಸ್ಸು ಆವರಿಸುವುದು.
 ವೃತ್ತಿ ಸಂಬಂಧವಾಗಿ ದೂರ ಪ್ರಯಾಣ ಸಂಭವ.

ವೃಶ್ಚಿಕ
ಮನಸ್ಸಿನಲ್ಲಿ ತಾಕಲಾಟ. ಅದು ನಿಮ್ಮ ವರ್ತನೆಯಲ್ಲೂ ಕಂಡುಬರಲಿದೆ. ಸರಿಯಾದ ಕಾಲಕ್ಕೆ ಆಹಾರ ಸ್ವೀಕರಿಸಿ, ಆರೋಗ್ಯ ಕಾಪಾಡಿ.

ಧನು
ಕೆಲಸದಲ್ಲಿ ಕಠಿಣ ನಿಲುವು ಬೇಡ. ಹೊಂದಾಣಿಕೆಯ ಸ್ವಭಾವ ರೂಢಿಸಿಕೊಳ್ಳಿ. ಬಂಧುಗಳಿಂದ ಅಸಹಕಾರ. ಆರೋಗ್ಯ ಸಮಸ್ಯೆ ಕಾಡೀತು.

ಮಕರ
ನಿಮ್ಮ ಸಮಸ್ಯೆ ಪರಿಹಾರಕ್ಕೆ ಸೂಕ್ತ ವ್ಯಕ್ತಿಗಳಿಂದ ಸೂಕ್ತ ಸಹಕಾರ ದೊರಕಲಿದೆ. ಅವರ ಸಲಹೆಯಂತೆ ನಡಕೊಳ್ಳಿ. ಕೌಟುಂಬಿಕ ಸಮಾಧಾನ.

ಕುಂಭ
ವೃತ್ತಿಯಲ್ಲಿ ಹೊಸ ಸಮಸ್ಯೆ ಎದುರಿಸುವಿರಿ. ಅದನ್ನು  ಕೌಶಲದಿಂದ ನಿಭಾಯಿಸಿ. ಆತುರದ ಕ್ರಮ ಹಾನಿ ತಂದೀತು.  ಕೌಟುಂಬಿಕ ವಾಗ್ವಾದ, ಭಿನ್ನಮತ.

ಮೀನ
ದಿನದರ್ಧದಲ್ಲೆ ನಿಮ್ಮ ಕಾರ್ಯ ಸಂಪೂರ್ಣ. ಇದರಿಂದ ಮನಸ್ಸಿಗೆ ನಿರಾಳತೆ. ಹೊಸ ವ್ಯವಹಾರದಲ್ಲಿ ಹೂಡಿಕೆ ನಡೆಸಲು ಸಕಾಲ, ಲಾಭ ಪಡೆಯುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!