ಮೇಷ.
ಮುಕ್ತ ಮನದಿಂದ, ಪ್ರಾಮಾಣಿಕತೆಯಿಂದ ವ್ಯವಹರಿಸಿ. ಇತರರ ಜತೆಗಿನ ಸಂಬಂಧ ವೃದ್ಧಿಸುವುದು. ಆರ್ಥಿಕ ಪರಿಸ್ಥಿತಿ ತೃಪ್ತಿಕರ.
ವೃಷಭ
ಸಹನೆ ಕೆಣಕುವ ಪ್ರಸಂಗ ಉಂಟಾದೀತು. ಕೆಲಸದ ಮೇಲೆ ಏಕಾಗ್ರತೆ ಕಳಕೊಳ್ಳದಿರಿ. ವಾಗ್ವಾದ ತಪ್ಪಿಸಿ. ಗಂಟಲು ನೋವಿನ ಸಮಸ್ಯೆ ಕಾಡಬಹುದು.
ಮಿಥುನ
ವೃತ್ತಿಯಲ್ಲಿ ಪೂರಕ ವಾತಾವರಣ. ಕುಟುಂಬ ಸದಸ್ಯರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಸ್ವಂತ ಉದ್ದಿಮೆಯಲ್ಲಿ ಧನಾಗಮನ.
ಕಟಕ
ವೃತ್ತಿಯಲ್ಲಿ ಎಚ್ಚರ ಇರಲಿ. ಅಪೇಕ್ಷಿತ ಕಾರ್ಯ ಸಾಗದು. ಟೀಕೆ ಎದುರಿಸುವಿರಿ. ಸಂಗಾತಿ ಜತೆ ಅಸಹನೆ ತೋರದಿರಿ. ಸೌಹಾರ್ದತೆ ಕಾಪಾಡಿ.
ಸಿಂಹ
ವೃತ್ತಿಯಲ್ಲಿ ಉನ್ನತಿ. ಕೌಟುಂಬಿಕ ಒಗ್ಗಟ್ಟಿಗೆ ಆದ್ಯತೆ ಕೊಡಿ. ಸಣ್ಣ ಮಾತು ಮನಸು ಕೆಡಿಸದಿರಲಿ. ಹಣದ ಹರಿವು ಸುಗಮ.
ಕನ್ಯಾ
ಕೌಟುಂಬಿಕ ಭಿನ್ನಾಭಿಪ್ರಾಯ. ನಿಮ್ಮ ನಿಲುವಿಗೆ ಮನ್ನಣೆ ಸಿಗದು. ಹಿರಿಯರ ಕಿವಿಮಾತಿಗೆ ಅಸಡ್ಡೆ ಬೇಡ. ಅಲ್ಪ ಅಸ್ವಸ್ಥತೆ ಕಾಡಬಹುದು.
ತುಲಾ
ಕೌಟುಂಬಿಕ ಹೊಣೆ ಹೆಚ್ಚಳ. ಇತರರು ನಿಮ್ಮ ನಿರ್ಧಾರಕ್ಕೆ ಕಾಯುವರು. ಕೌಟುಂಬಿಕ ಭಿನ್ನಮತ ನಿಮ್ಮ ಏಳಿಗೆಗೆ ಅಡ್ಡಿ ತಾರದಂತೆ ನೋಡಿಕೊಳ್ಳಿ.
ವೃಶ್ಚಿಕ
ನಿಮ್ಮ ಪ್ರಾಮಾಣಿಕ ನಡೆ ಬಿಕ್ಕಟ್ಟು ನಿವಾರಣೆಗೆ ಸಹಕಾರಿ. ಇತರರ ಅಭಿಪ್ರಾಯ ಆಲಿಸಿ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ.
ಧನು
ಕೆಲಸದಲ್ಲಿ ಪ್ರಸಂಗವಧಾನತೆ ಮುಖ್ಯ. ಬಿಕ್ಕಟ್ಟಿಗೆ ತಕ್ಷಣವೇ ಸ್ಪಂದಿಸಿ. ಅದನ್ನು ದೀರ್ಘ ಎಳೆಯಲು ಹೋಗಬೇಡಿ. ಆರ್ಥಿಕ ಸ್ಥಿತಿ ಚೇತರಿಕೆ.
ಮಕರ
ಒತ್ತಡ, ಅಸಹನೆಯ ದಿನ. ಪರಿಸ್ಥಿತಿಯನ್ನು ಸಮಾಧಾನದಿಂದ ನಿಭಾಯಿಸಿ. ವ್ಯವಹಾರ ದಲ್ಲಿ ಪ್ರಗತಿ. ಆರ್ಥಿಕ ಬಿಕ್ಕಟ್ಟು ಪರಿಹಾರ.
ಕುಂಭ
ಸಂವಹನ ಕೊರತೆ. ಯಿಂದ ಆತ್ಮೀಯರ ಜತೆ ಮನಸ್ತಾಪವಾದೀತು. ಆರ್ಥಿಕ ವಿಚಾರದಲ್ಲಿ ವಿವೇಕದಿಂದ ನಡಕೊಳ್ಳಿ. ಅವಸರ ಬೇಡ.
ಮೀನ
ಏಕಾಂಗಿಗಳಿಗೆ ವೈವಾಹಿಕ ಬಂಧ. ವೃತ್ತಿಯಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ. ವ್ಯವಹಾರದಲ್ಲಿ ಉನ್ನತಿ. ಕೌಟುಂಬಿಕ ಜಗಳದಿಂದ ದೂರವಿರಿ.
ದಿನಭವಿಷ್ಯ: ಪ್ರಾಮಾಣಿಕತೆಯಿಂದ ವ್ಯವಹರಿಸಿ, ಇತರರ ಜೊತೆಗಿನ ಸಂಬಂಧ ವೃದ್ಧಿಸುವುದು
