ದಿನಭವಿಷ್ಯ: ದೀರ್ಘ ಕಾಲದ ಆರೋಗ್ಯ ಸಮಸ್ಯೆ ಪರಿಹಾರಗೊಳ್ಳುವ ಸಂಕೇತ ತೋರಲಿದೆ…

ಮೇಷ
ಈ ದಿನ ನಿಮ್ಮ ಬದುಕಿನಲ್ಲಿ ಹೊಸತನ ತರಲಿದೆ. ನಿಮ್ಮ ಬಹುದೊಡ್ಡ ಬಯಕೆ ಈಡೇರಲಿದೆ. ಆಪ್ತ ಸಂಬಂಧ ದೀರ್ಘಾವಧಿ ಬೆಳೆಯಲಿದೆ.

ವೃಷಭ
ಸಂತೋಷದ ಮನಸ್ಥಿತಿ. ಹೊಸ ವ್ಯವಹಾರಕ್ಕೆ ಕೈ ಹಚ್ಚಲು ಸೂಕ್ತ ಅವಕಾಶ ದೊರಕಲಿದೆ. ವೃತ್ತಿಯಲ್ಲಿ ಹಾಗೂ ಮನೆಯಲ್ಲಿ ಕಾರ್ಯಗಳೆಲ್ಲ ಸಲೀಸಾಗಲಿವೆ.

ಮಿಥುನ
ದೀರ್ಘ ಕಾಲದ ಆರೋಗ್ಯ ಸಮಸ್ಯೆ ಪರಿಹಾರಗೊಳ್ಳುವ ಸಂಕೇತ ತೋರಲಿದೆ. ಮನೆಯ ವಾತಾವರಣ ನಿಮ್ಮ ಮನಸ್ಸು ಹಿಗ್ಗಿಸುವುದು.

ಕಟಕ
ಸವಾಲಿನ ದಿನ. ಸಾಂತ್ವನ ನೀಡುವ ಪರಿಸರ, ವ್ಯಕ್ತಿಗಾಗಿ ಹಾತೊರೆಯುವಿರಿ. ಹಿರಿಯರ ಜತೆ ವಾಗ್ವಾದಕ್ಕೆ ಇಳಿಯಬೇಡಿ.

ಸಿಂಹ
ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ನಿಮ್ಮ ನಿಲುವು, ಧೋರಣೆ ಬದಲಿಸುವ ಪ್ರಸಂಗ ಬಂದೀತು. ಇಷ್ಟವಿಲ್ಲದ ಕಾರ್ಯ ಮಾಡಬೇಕಾದೀತು. ದೃಢ ಮನಸ್ಕರಾಗಿರಿ.

ಕನ್ಯಾ
ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ. ಏಕೆಂದರೆ ಇತರರು ನಿಮ್ಮನ್ನು ಗಮನಿಸುತ್ತಿರುತ್ತಾರೆ. ಕೌಟುಂಬಿಕ ಬಿಕ್ಕಟ್ಟು ಪರಿಹಾರಗೊಳ್ಳುವ ಸಂಕೇತ ತೋರುವುದು.

ತುಲಾ
ನೆಗೆಟಿವ್ ಚಿಂತನೆ ಮೊದಲು ನಿವಾರಿಸಿ.  ಇಲ್ಲವಾದರೆ ನಿಮ್ಮ ಕಾರ್ಯ ಸರಿಯಾಗಿ ನೆರವೇರದು. ಗಂಟಲು ಸಮಸ್ಯೆ ಕಾಣಿಸಬಹುದು.

ವೃಶ್ಚಿಕ
ಮನೆಯಲ್ಲಿ, ವೃತ್ತಿಯಲ್ಲಿ ನಿಮ್ಮ ಬಿಚ್ಚು ಮಾತು ಕೆಲವರಿಗೆ ಇಷ್ಟ ಆಗದಿದ್ದರೂ ನಿಮ್ಮ ಪಾಲಿಗೆ ಕಾರ್ಯ ಸುಸೂತ್ರಗೊಳ್ಳಲು ನೆರವಾಗಲಿದೆ.

ಧನು
ಕುಟುಂಬ ಸದಸ್ಯರ ಮನೋಭಾವ ಸರಿಯಾಗಿ ಅರ್ಥೈಸಿ ವ್ಯವಹರಿಸುವಿರಿ. ಯಾವುದೇ ಬಿಕ್ಕಟ್ಟು ಪರಿಹರಿಸಲು ಶಕ್ತರಾಗುವಿರಿ.

ಮಕರ
ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಆತ್ಮೀಯರ ಜತೆಗೆ ಸಣ್ಣ ಕಾರಣಕ್ಕೂ ಮುನಿಸಿಕೊಳ್ಳಲು ಹೋಗಬೇಡಿ. ಹೊಂದಾಣಿಕೆ ಮುಖ್ಯ.

ಕುಂಭ
ವೃತ್ತಿಯಲ್ಲಿ ಅದೃಷ್ಟ ನಿಮ್ಮ ಜತೆಗಿದೆ. ಹಾಗಾಗಿ ಯಾವುದೇ ಕಾರ್ಯ ಯಶಸ್ವಿಯಾಗಿ ನೆರವೇರಲಿದೆ. ಆಪ್ತ ಬಂಧುವಿನಿಂದ ಶುಭ ಸುದ್ದಿ ಕೇಳುವಿರಿ.

ಮೀನ
ಹಲವಾರು ಅಡತಡೆ ಎದುರಿಸುವಿರಿ. ಹಾಗಾಗಿ ನಿಮ್ಮ ಕೆಲಸ ಸರಾಗವಾಗಿ ನಡೆಯದು. ಆದಾಯ ಹೆಚ್ಚಾದರೂ ಅದರ ಜತೆಗೇ ಖರ್ಚೂ ಹೆಚ್ಚಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!