Thursday, September 4, 2025

ದಿನಭವಿಷ್ಯ: ಕೆಲವರ ವರ್ತನೆ ಅಸಹನೀಯ ಎನಿಸುವುದು, ಆದರೆ ಅದರ ಬಗ್ಗೆ ಚಿಂತೆ ಬಿಡಿ!

ಮೇಷ
 ದೀರ್ಘಕಾಲದ  ಕೊರಗೊಂದು ನಿವಾರಣೆ ಆಗುವ ಕಾಲ ಬಂದಿದೆ. ಆ ವಿಚಾರದಲ್ಲಿ ಹೆಚ್ಚು ಚಿಂತೆ ಮಾಡಬೇಡಿ. ಆಪ್ತ ಬಂಧುಗಳ  ಸಹಕಾರ.
ವೃಷಭ
ಖಾಸಗಿ ಬದುಕಲ್ಲಿ ಏರುಪೇರು. ಅದಕ್ಕೆಲ್ಲ ಕುಗ್ಗುವ ವ್ಯಕ್ತಿ ನೀವಲ್ಲ. ಆದರೂ ಮನಸ್ಸಿನ ಶಾಂತಿ ಹಾಳು. ವೃತ್ತಿಯ ಉನ್ನತಿ ಸಮಾಧಾನ ತರುವುದು.  
ಮಿಥುನ
ಮನೆಯಲ್ಲಿ ಸೌಹಾರ್ದ ವಾತಾವರಣ.ಸಮಸ್ಯೆ ನಿವಾರಣೆ. ಮಾನಸಿಕ ನಿರಾಳತೆ.  ದುಂದುವೆಚ್ಚಕ್ಕೆ ಕಡಿವಾಣ ಹಾಕುವುದೊಳಿತು. ಕಟಕ
ಕೆಲವರ ವರ್ತನೆ  ಅಸಹನೀಯ ಎನಿಸಲಿದೆ. ಆ ಬಗ್ಗೆ ಅತಿಯಾಗಿ ಚಿಂತಿಸಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಸ್ಥಿತಪ್ರಜ್ಞತೆ ಇರಲಿ.  
ಸಿಂಹ
ನಿಮ್ಮನ್ನು ಇತರರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಕೊರಗು.  ಅವರನ್ನು ಮೆಚ್ಚಿಸಲು ನಿಮ್ಮ ನಿಲುವಿನೊಂದಿಗೆ ರಾಜಿ ಮಾಡಿಕೊಳ್ಳದಿರಿ.      
ಕನ್ಯಾ
ವ್ಯವಹಾರ, ಹಣದ ವಿಚಾರ ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ. ಸೂಕ್ತ ತಪಾಸಣೆ ಒಳಿತು.  
ತುಲಾ
ದೊಡ್ಡ ಕಾರ್ಯಕ್ಕೆ ಕೈ ಹಾಕಬೇಕಾದ ಸನ್ನಿವೇಶ. ಅಂಜಿಕೆ ಬೇಡ. ಎಲ್ಲವೂ ನಿಮಗೆ ಪೂರಕವಾಗಿದೆ. ಅವಶ್ಯ ನೆರವು ಲಭ್ಯ. ಆರ್ಥಿಕ ಉನ್ನತಿ.    
ವೃಶ್ಚಿಕ
ಸಣ್ಣ ಕಾರಣಕ್ಕೆ ಇತರರನ್ನು ಟೀಕಿಸಲು ಹೋಗಬೇಡಿ. ನಿಮಗೇ ತಿರುಗುಬಾಣವಾದೀತು.ಚಿಂತೆಯೊಂದಕ್ಕೆ ಪರಿಹಾರ ಕಾಣದೆ ಅಸಮಾಧಾನ.                
ಧನು
ಎಲ್ಲರನ್ನೂ  ಮೆಚ್ಚಿಸುವ ಯತ್ನಕ್ಕೆ ಕೈ ಹಾಕದಿರಿ. ಅದರಿಂದ ನಿಮಗೆ ಲಾಭವಾಗದು. ಕೌಟುಂಬಿಕ ಮನಸ್ತಾಪ ಹೆಚ್ಚಬಹುದು.  
ಮಕರ
ಆತ್ಮೀಯರ ಜತೆ  ಭಿನ್ನಾಭಿಪ್ರಾಯ.  ಜಗಳಕ್ಕಿಂತ ಹೊಂದಾಣಿಕೆ ಒಳಿತು. ನಿಮ್ಮದೇ ನಿಲುವಿಗೆ ಹಠ ಹಿಡಿಯಬೇಡಿ.  
ಕುಂಭ
ನೀವು ನಿರೀಕ್ಷಿಸದ ಸಮಸ್ಯೆ ಸೃಷ್ಟಿ. ಪರಿಶ್ರಮ ಪಟ್ಟರೆ ಅದನ್ನು ಪರಿಹರಿಸ ಬಹುದು. ಕೈಚೆಲ್ಲಿ ಕೂರಬೇಡಿ.ಕೌಟುಂಬಿಕ ಸಹಕಾರ ಸಿಗಲಿದೆ.          
 ಮೀನ
ವಿರೋಽಗಳ  ಅಪಪ್ರಚಾರದಿಂದ ನೆಮ್ಮದಿ ಹಾಳು. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಿ. ಸಮಾನ ಮನಸ್ಕರ ಸಂಗದಲ್ಲಿ ನೆಮ್ಮದಿ.

ಇದನ್ನೂ ಓದಿ