Tuesday, December 16, 2025

ದಿನಭವಿಷ್ಯ: ವೃತ್ತಿಯಲ್ಲಿ ನಿಮ್ಮ ನಿರ್ವಹಣೆ ಎಲ್ಲರ ಗಮನ ಸೆಳೆಯಲಿದೆ, ಫ್ಯಾಮಿಲಿ ಜೊತೆ ಗುಡ್‌ಟೈಮ್‌

ಮೇಷ
ಸಂಘಟಿತ ಕಾರ್ಯಕ್ಕೆ ಗಮನ ಕೊಡಿ. ನಾನೇ ಎಲ್ಲವನ್ನು ಮಾಡುವೆ ಎಂಬ ಭಾವ ಬಿಡಿ. ಹೂಡಿಕೆಯಲ್ಲಿ ಲಾಭ. ಕೌಟುಂಬಿಕ ನೆಮ್ಮದಿ.  
ವೃಷಭ
ವೃತ್ತಿಯಲ್ಲೂ ಖಾಸಗಿ ವ್ಯವಹಾರದಲ್ಲೂ ನಿಮಗೆ ಪೂರಕ ಬೆಳವಣಿಗೆ. ಸಂಗಾತಿ ಜತೆ ಉತ್ತಮ ಹೊಂದಾಣಿಕೆ. ಆದಾಯದಲ್ಲಿ ಹೆಚ್ಚಳ.    
ಮಿಥುನ
ವೃತ್ತಿಯಲ್ಲಿ ನಿಮ್ಮ ನಿರ್ವಹಣೆ ಎಲ್ಲರ ಗಮನ ಸೆಳೆಯಲಿದೆ. ಕುಟುಂಬದ ಜತೆಗೆ ಕಾಲ ಕಳೆಯಿರಿ. ಅವರನ್ನು ಕಡೆಗಣಿಸಿದ ಭಾವನೆ ಬರದಿರಲಿ.  
ಕಟಕ
ಕೆಲಸದಲ್ಲಿ ತಪ್ಪು ಆಗದಂತೆ ಎಚ್ಚರ ವಹಿಸಿ. ಚಿಂತೆ ಬಾಽಸಬಹುದು. ಸಂಗಾತಿ ಜತೆಗೆ ಕಠಿಣವಾಗಿ ವರ್ತಿಸುವುದರಿಂದ ಸೌಹಾರ್ದತೆಗೆ ಭಂಗ.  
ಸಿಂಹ
ನಿಮ್ಮ ಉದ್ದೇಶ ಈಡೇರಬೇಕಾದರೆ ಕಠಿಣ ಶ್ರಮವೂ ಬೇಕು. ಜಡತ್ವ ತೊರೆಯಿರಿ. ಕೌಟುಂಬಿಕ ಅಶಾಂತಿ ಕಳೆದು ನೆಮ್ಮದಿ ನೆಲೆಸುವುದು.    
ಕನ್ಯಾ
ಮಾನಸಿಕ ಉದ್ವಿಗ್ನತೆ. ಗೊಂದಲದ ಮನಸ್ಥಿತಿ. ಕೆಲಸದಲ್ಲಿ ಉದಾಸೀನತೆ. ನಿಮ್ಮ ಕಾರ್ಯಶೈಲಿ ಬದಲಿಸಬೇಕು. ಕೌಟುಂಬಿಕ ಅಸಹಕಾರ.
ತುಲಾ
ವೃತ್ತಿಯಲ್ಲಿ ನಿಮಗೆ ಪೂರಕ ದಿನವಲ್ಲ. ಅಡ್ಡಿ ಎದುರಿಸುವಿರಿ.  ಕೆಲಸದಲ್ಲಿ ತಪ್ಪಾದೀತು. ಸಂಬಂಧದಲ್ಲಿ ಸೌಹಾರ್ದತೆ ಕಾಪಾಡಿ. ವಾಗ್ವಾದಕ್ಕೆ ಇಳಿಯದಿರಿ.
ವೃಶ್ಚಿಕ
ಸುಗಮವಾಗಿ ಕಾರ್ಯ ಸಾಗುವುದು. ಪ್ರೀತಿಯ ಕ್ಷೇತ್ರದಲ್ಲಿ ಪೂರಕ ಬೆಳವಣಿಗೆ.     ವಿರೋಧ ಶಮನ. ಆರ್ಥಿಕ ಉನ್ನತಿ.
ಧನು
ಹಿಡಿದ ಕೆಲಸ ಪೂರೈಸುವ ಛಲ ತೊಡಿ. ಅರ್ಧಕ್ಕೇ ಬಿಡುವ ಹವ್ಯಾಸ ಬಿಟ್ಟುಬಿಡಿ. ಆಪ್ತರ ಜತೆಗಿನ ಸಂಬಂಧ ಕೆಡದಂತೆ ಎಚ್ಚರ ವಹಿಸಿರಿ. ಆರ್ಥಿಕ ಹಿನ್ನಡೆ.      
ಮಕರ
ವೃತ್ತಿಯಲ್ಲಿ ನಿಮ್ಮ ಸ್ಥಾನ ಭದ್ರವಾಗಲಿದೆ. ಬಹುಕಾಲದಿಂದ ಬಯಸಿದ್ದನ್ನು ಪಡೆಯಲು  ಕಾಲ ಪಕ್ವವಾಗಿದೆ. ಸ್ನೇಹಿತರ ಸಹಕಾರ.  
ಕುಂಭ
ಕೆಲಸದ ಒತ್ತಡ ಎಂದಿಗಿಂತ ಹೆಚ್ಚು.  ಆತ್ಮೀಯ ಸಂಬಂಧದಲ್ಲಿ ಅಪಸ್ವರ. ಅತೃಪ್ತಿ ಕಾಡುವುದು. ಮಾನಸಿಕ ಉದ್ವಿಗ್ನತೆ, ಅಸಹನೆ.      
 ಮೀನ
ಅಲ್ಪಾವಽಯಲ್ಲೇ ಕೆಲವು ಕಾರ್ಯ ಪೂರೈಸಬೇಕಾದ ಒತ್ತಡ. ಅನಿರೀಕ್ಷಿತ ಖರ್ಚು ಒದಗಲಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ.  

error: Content is protected !!