ಮೇಷ
ಉತ್ಸಾಹಪೂರ್ಣ ದಿನ. ಕಠಿಣ ಕೆಲಸವೂ ಸುಲಭದಲ್ಲಿ ಸಾಧ್ಯ. ಉದ್ದೇಶಿತ ಭೇಟಿ -ಲಪ್ರದ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶ.
ವೃಷಭ
ಎಲ್ಲ ಕೆಲಸ ಇಂದು ವಿಳಂಬವಾಗಿ ಪೂರ್ಣ. ಅಸಹನೆ ಹೆಚ್ಚಲಿದೆ. ಆರ್ಥಿಕ ಒತ್ತಡ ಅಽಕ. ಆರೋಗ್ಯ ಕಾಪಾಡಲು ಕರಿದ ತಿಂಡಿ ದೂರವಿರಿಸಿ. ಮಿಥುನ
ಎಲ್ಲ ಬೆಳವಣಿಗೆ ಪೂರಕವಾಗಿ ನಡೆಯಲಿದೆ. ಅಡ್ಡಿ ನಿವಾರಣೆ. ಹಣದ ಕೊರತೆ ಪರಿಹಾರ. ನವದಂಪತಿಗಳಿಗೆ ಶುಭಕರ ಬೆಳವಣಿಗೆ.
ಕಟಕ
ತಲೆನೋವು ಅಥವಾ ಅಜೀರ್ಣದ ಸಮಸ್ಯೆ ಕಾಡಬಹುದು. ಕುಟುಂಬ ಸದಸ್ಯರ ಜತೆ ಕಳೆಯಿರಿ, ಒತ್ತಡ ನಿವಾರಿಸಿಕೊಳ್ಳಿ. ಧನಹಾನಿ ಸಂಭವ.
ಸಿಂಹ
ಕಾರ್ಯಸಿದ್ಧಿ. ಆತ್ಮೀಯರ ಜತೆಗಿನ ಭಿನ್ನಮತ ನಿವಾರಣೆ. ಕೌಟುಂಬಿಕ ಸಮಸ್ಯೆ ಇದ್ದರೆ ಸಂಜೆಯೊಳಗೆ ಪರಿಹಾರ. ಖರ್ಚು ಹೆಚ್ಚಬಹುದು.
ಕನ್ಯಾ
ಕೌಟುಂಬಿಕ ಸಮಸ್ಯೆ ದಂಪತಿ ಮಧ್ಯೆ ಕಲಹಕ್ಕೆ ಕಾರಣವಾದೀತು. ಸಂಧಾನದ ಮಾರ್ಗ ಒಳಿತು. ಚರ್ಮದ ಅಲರ್ಜಿ ಕಾಣಿಸೀತು.
ತುಲಾ
ಕೆಲದಿನಗಳ ಒತ್ತಡ ಇಂದು ನಿವಾರಣೆ. ಅನುಚಿತ ಆಹಾರ ಸೇವನೆ ಆರೋಗ್ಯಕ್ಕೆ ಸಮಸ್ಯೆ ಒಡ್ಡಬಹುದು. ಪ್ರೀತಿಯಲ್ಲಿ ಯಶಸ್ಸು.
ವೃಶ್ಚಿಕ
ಹೊಟ್ಟೆನೋವು, ಕಣ್ಣಿನ ಕಿರಿಕಿರಿಯಂತಹ ಸಮಸ್ಯೆ ಉಂಟಾದೀತು. ವೃತ್ತಿಯಲ್ಲಿ ಹೆಚ್ಚು ಹೊಣೆ. ಸಂಗಾತಿ ಜತೆಗೆ ವಾಗ್ವಾದ. ಆರ್ಥಿಕ ಉನ್ನತಿ.
ಧನು
ಅನವಶ್ಯ ಚಿಂತೆ ಕಾಡಲು ಬಿಡಬೇಡಿ. ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಹಣ ಹೂಡಿಕೆಗೆ ಪೂರಕ ದಿನವಲ್ಲ. ಮನೆಯಲ್ಲಿ ಸಾಮರಸ್ಯ.
ಮಕರ
ಮಕ್ಕಳಿಂದ ಸಮಸ್ಯೆ ಉಂಟಾದೀತು. ಅದನ್ನು ತಾಳ್ಮೆಯಿಂದ ನಿಭಾಯಿಸಿ. ಇತರರ ಬಿಕ್ಕಟ್ಟು ಪರಿಹರಿಸಲು ಸಮಯ ವ್ಯಯಿಸಬೇಕಾಗುವುದು.
ಕುಂಭ
ಸಂಗಾತಿ ಜತೆ ಪ್ರಾಮಾಣಿಕವಾಗಿ ವರ್ತಿಸಿ. ಮುಚ್ಚುಮರೆ ಬೇಡ. ಅನಿರೀಕ್ಷಿತ ಖರ್ಚು. ಮೇಲಽಕಾರಿಯ ಕಿರುಕುಳ ಎದುರಿಸುವಿರಿ.
ಮೀನ
ಬಿಕ್ಕಟ್ಟಿಗೆ ತಕ್ಷಣ ಪ್ರತಿಕ್ರಿಯಿಸಿ. ವಿಳಂಬ ಧೋರಣೆ ಒಳ್ಳೆಯದಲ್ಲ. ಉಪಯುಕ್ತ ಕಾರ್ಯಕ್ಕೆ ಹಣ ಹೆಚ್ಚು ಖರ್ಚು. ಕೌಟುಂಬಿಕ ಸಮಾಧಾನ.


