ಮೇಷ
ಕುಟುಂಬ ಸದಸ್ಯರ ಉತ್ತಮ ಸಾಧನೆ. ಇದು ನಿಮ್ಮಲ್ಲಿ ಹೆಮ್ಮೆ ತುಂಬುವುದು. ಉದ್ಯೋಗದಲ್ಲಿ ಉನ್ನತಿ. ಆರ್ಥಿಕ ಲಾಭ.
ವೃಷಭ
ನಿಮಗೆ ಪ್ರತಿಕೂಲ ಬೆಳವಣಿಗೆ ಉಂಟಾದೀತು. ಇದರಿಂದ ಮುಖ್ಯ ಪಾಠಕಲಿಯುವಿರಿ. ಕೌಟುಂಬಿಕ ಅಸಹಕಾರ. ಅಸಹನೆ ಹೆಚ್ಚು.
ಮಿಥುನ
ಕ್ಲಿಷ್ಟಕರ ಪರಿಸ್ಥಿತಿ ಯನ್ನು ಸಮರ್ಥವಾಗಿ ನಿಭಾಯಿಸುವಿರಿ. ಇತರರ ತಪ್ಪು ತಿದ್ದುವ ಕಾರ್ಯ ಮಾಡುವಿರಿ. ಬಂಧುಗಳ ಜತೆ ಕಾಲಕ್ಷೇಪ. .
ಕಟಕ
ದೂರ ಪ್ರಯಾಣ ಸಂಭವ. ಸಮಾರಂಭ ದಲ್ಲಿ ಪಾಲ್ಗೊಳ್ಳುವ ಅವಕಾಶ. ಧಾರ್ಮಿಕ ವಿಚಾರಗಳತ್ತ ಹೆಚ್ಚು ಆಸಕ್ತಿ. ಮಾನಸಿಕ ನಿಶ್ಚಿಂತೆ..
ಸಿಂಹ
ಇಂದು ಕೆಲಸದ ಒತ್ತಡ. ಹಾಗಾಗಿ ಉಳಿದ ಮೋಜಿನ ವಿಚಾರ ಗಳಿಗೆ ಗಮನಹರಿಸ ಲಾಗುವುದಿಲ್ಲ. ಕೌಟುಂಬಿಕ ಹೊಣೆಗಾರಿಕೆ ಹೆಚ್ಚಳ.
ಕನ್ಯಾ
ಆರ್ಥಿಕವಾಗಿ ಹಿನ್ನಡೆ. ಅನಿರೀಕ್ಷಿತ ಖರ್ಚು. ಹೊಸ ಆರ್ಥಿಕ ವ್ಯವಹಾರಗಳಿಗೆ ಕೈ ಹಾಕಬೇಡಿ. ಕೌಟುಂಬಿಕ ಶಾಂತಿ, ಸಮಾಧಾನ.
ತುಲಾ
ಕೆಲವು ಹಿನ್ನಡೆ, ನಿರಾಶೆ ಎದುರಿಸಲು ಸಜ್ಜಾಗಿ. ನಿಮ್ಮ ಪ್ರಯತ್ನಗಳು ಫಲ ನೀಡಲಾರದು.ಹತಾಶೆ, ಅಸಹನೆ ಆವರಿಸ
ಬಹುದು. ನಿರಾಶರಾಗದಿರಿ.
ವೃಶ್ಚಿಕ
ಆಪ್ತ ನೆನಪು ಕಲಕುವ ವ್ಯಕ್ತಿಗಳ ಭೇಟಿ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ಕೌಟುಂಬಿಕ ಪರಿಸ್ಥಿತಿ ಸಮಾಧಾನಕರ.
ಧನು
ಭಾವುಕರಾಗಿ ದುಡುಕಿನ ನಿರ್ಧಾರ ಬೇಡ. ಕೌಟುಂಬಿಕ ವಿಚಾರಕ್ಕೆ ಮಹತ್ವ ಕೊಡಿ. ಎಲ್ಲರೊಡನೆ ಕೂಡಿ ಕಳೆಯುವ ಅವಕಾಶ.
ಮಕರ
ಸೂಕ್ಷ್ಮ ಸಂವೇದಿಯಾಗಿ ಇಂದು ವರ್ತಿಸು ತ್ತೀರಿ. ಸಣ್ಣ ವಿಷಯಗಳೂ ಭಾವೋದ್ವೇಗಕ್ಕೆ ಕಾರಣ ವಾಗುತ್ತದೆ. ಕೆಲವರಿಂದ ನಿಮಗೆ ನೋವು .
ಕುಂಭ
ಹೆಚ್ಚು ಭಾವನಾತ್ಮಕ ವಾಗಿ ವರ್ತಿಸುವಿರಿ. ಆಪ್ತರೊಂದಿಗೆ ಭಾವನೆ ಹಂಚಿಕೊಳ್ಳಿ. ಅದರಿಂದ ಸಮಾಧಾನ. ಜೀವನ ಸಂಗಾತಿಯ ಹುಡುಕಾಟ ಸಫಲ.
ಮೀನ
ಯಾವುದೋ ವಿಷಯ ಮನದಲ್ಲಿ ಭಯ ಸೃಷ್ಟಿಸುತ್ತದೆ. ಜೀವನದ ಬಗ್ಗೆ ಅನಿಶ್ಚಿತತೆ. ಕೆಲವು ವ್ಯಕ್ತಿಗಳು ಮನಸ್ಸಿನ ಸ್ವಾಸ್ಥ್ಯ ಕದಡುತ್ತಾರೆ. ಎಚ್ಚರ.
ದಿನಭವಿಷ್ಯ: ಇಂದು ದೂರ ಪ್ರಯಾಣ ಸಂಭವ, ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ
