Monday, March 27, 2023

Latest Posts

ದಿನಭವಿಷ್ಯ| ಪ್ರತೀ ವಿಷಯದಲ್ಲೂ ಇಂದು ನಿಮಗೆ ಮಹತ್ವದ ದಿನ!

ಮಂಗಳವಾರ, 14 ಮಾರ್ಚ್ 2023, ಮಂಗಳೂರು

ಮೇಷ
ಸಂಬಂಧದಲ್ಲಿ ಮೂಡಿದ್ದ ತಪ್ಪುಕಲ್ಪನೆ, ಒತ್ತಡ ನಿವಾರಣೆ. ತುರ್ತು ಕಾರ್ಯ ಪೂರೈಸಲು ಪ್ರಾಮುಖ್ಯತೆ ಕೊಡಿ. ಇನ್ನಷ್ಟು ವಿಳಂಬ ಮಾಡಬೇಡಿ.

ವೃಷಭ
ಅನಿರೀಕ್ಷಿತ ಖರ್ಚು ಒದಗಿಬರುವುದು. ಅದನ್ನು ತಪ್ಪಿಸುವುದು ನಿಮ್ಮಿಂದಾಗದು. ವೃತ್ತಿಯಲ್ಲಿ ಅಸಹಕಾರ ಎದುರಿಸುವಿರಿ. ಮನಶ್ಯಾಂತಿ ದೂರ.

ಮಿಥುನ
ಎಲ್ಲ ಕಾರ್ಯಗಳಲ್ಲಿ ಯಶಸ್ಸು. ವೃತ್ತಿಯ ವ್ಯವಹಾರ ಸಲೀಸು. ಕೌಟುಂಬಿಕ ಒತ್ತಡಗಳು ಕಡಿಮೆಯಾಗುವವು. ಆರ್ಥಿಕ ಉನ್ನತಿಯ ದಾರಿ ತೋರುವುದು.

ಸಿಂಹ
ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿರುವುದನ್ನು ನಿವಾರಿಸಲು ಆದ್ಯತೆ ಕೊಡಿ. ಪರಸ್ಪರ ಮಾತು ಆಲಿಸುವುದು ಅದಕ್ಕೆ ಉತ್ತಮ ದಾರಿ.

ಕನ್ಯಾ
ನಿಮ್ಮ ಕೆಲಸವು ಕೆಟ್ಟ ಫಲಿತಾಂಶ ನೀಡದಂತೆ ಎಚ್ಚರ ವಹಿಸಿ. ಕೆಲವರ ಹಸ್ತಕ್ಷೇಪ ಕೆಲಸವನ್ನೆ ಕೆಡಿಸಬಹುದು. ಹಿರಿಯರ ಕಿವಿಮಾತು ನಿರ್ಲಕ್ಷಿಸಬೇಡಿ.

ತುಲಾ
ನಿಮ್ಮ ಕೆಲವು ನಿಲುವು ಟೀಕೆ ಎದುರಿಸುತ್ತವೆ. ನಿಮ್ಮ ಧೋರಣೆ ಬದಲಿಸಬೇಕಾದ ಪ್ರಸಂಗ ಒದಗುವುದು. ಅದನ್ನು ವಿವಾದವಿಲ್ಲದೆ ಒಪ್ಪಿಕೊಳ್ಳಿ.

ವೃಶ್ಚಿಕ
ಉತ್ಸಾಹಪೂರ್ಣ ದಿನ. ನಿಮ್ಮ ಉತ್ಸಾಹವನ್ನು ಫಲಪ್ರದ ಕಾರ್ಯಗಳಿಗೆ ಮೀಸಲಿಡಿ. ಬಂಧು ಸಹಕಾರ. ಖರೀದಿಯ ಹುಮ್ಮಸ್ಸಿನಲ್ಲಿ ಖರ್ಚು ಅಧಿಕವಾದೀತು.

ಧನು
ಪ್ರತೀ ವಿಷಯದಲ್ಲೂ ಇಂದು ನಿಮಗೆ ಮಹತ್ವದ ದಿನ. ಉದ್ಯೋಗದಲ್ಲಿ ಮತ್ತು ಕೌಟುಂಬಿಕ ಬದುಕಿನಲ್ಲಿ ಮಹತ್ತರವಾದುದನ್ನು ಸಾಧಿಸುವಿರಿ.

ಮಕರ
ಮನದೊಳಗಿನ ಉದ್ವಿಗ್ನತೆಯು ಇಂದು ಒಮ್ಮೆಗೆ ಶಮನ ಆಗುವುದು. ನಿರಾಳತೆ ಲಭಿಸುವುದು. ನಿಮ್ಮ ನಿರೀಕ್ಷೆ ಈಡೇರುವುದು ಅದಕ್ಕೆ ಕಾರಣ.

ಕುಂಭ
ಯಶಸ್ವೀ ದಿನ. ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ಕೌಟುಂಬಿಕ ಬೆಳವಣಿಗೆ ತೃಪ್ತಿಕರ ಅಂತ್ಯ ಕಾಣುವುದು.

ಮೀನ
ಉದ್ಯೋಗದಲ್ಲಿ ಅಧಿಕ ಒತ್ತಡ. ನೀವಿಂದು ಹೆಚ್ಚು ತಾಳ್ಮೆಯಿಂದ ವರ್ತಿಸಬೇಕು. ಸುಲಭದಲ್ಲಿ ಹಣ ಗಳಿಸುವ ಆಮಿಷಕ್ಕೆ ಬಲಿಯಾಗಬೇಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!