March 16, 2026
Monday, March 16, 2026
spot_img

ದಿನಭವಿಷ್ಯ: ಇಂದು ಅಂದುಕೊಂಡ ಎಲ್ಲಾ ಕೆಲಸ ಮುಗಿದೇಬಿಡುತ್ತೆ, ಖುಷಿಯಾಗ್ತೀರಿ

ಮೇಷ.
ಇಂದು ಹಣದ ವಿಚಾರ ಬದಿಗಿಡಿ, ತಕ್ಷಣದ ಪರಿಣಾಮ ಬೀರುವ ವಿಷಯಕ್ಕೆ ಗಮನ ಕೊಡಿ. ನಿಮ್ಮ ನಿರ್ಧಾರ ಒಳ್ಳೆ -ಲ ನೀಡಲಿದೆ, ಚಿಂತೆ ಬೇಡ.
ವೃಷಭ
ಕೆಲ ಸಮಯದ ಚಿಂತೆ ಕಳೆದು ಹುರುಪು ತುಂಬುವ ಬೆಳವಣಿಗೆ. ಪ್ರೀತಿಪಾತ್ರರ ಸಂಗದಲ್ಲಿ ಉತ್ಸಾಹ. ಹಮದ ಬಿಕ್ಕಟ್ಟು ಪರಿಹಾರ ಕಾಣಲಿದೆ.      
ಮಿಥುನ
ಕೆಲ ವಿಷಯದಲ್ಲಿ ನಿಮ್ಮ ಧೋರಣೆ ಬದಲಿಸಿ. ಹೊಂದಾಣಿಕೆಯ ಸ್ವಭಾವ ಬೆಳೆಸಿಕೊಳ್ಳಿ. ಇತರರ ಮಾತಿಗೂ ಬೆಲೆ ಕೊಡಿ.  ಸಂಘರ್ಷ ತಪ್ಪಿಸಿರಿ.
ಕಟಕ
ಕಚೇರಿ ಮತ್ತು ಮನೆಯಲ್ಲಿ ಕೆಲವಾರು ವಿಷಯ ನಿಮ್ಮ ತಾಳ್ಮೆ ಕೆಣಕುವುದು. ಯಾವುದೂ ನಿಮ್ಮ ಮನಸ್ಸಿಗೆ ತೃಪ್ತಿ ತರುವಂತಿರುವುದಿಲ್ಲ.    
ಸಿಂಹ
ಒತ್ತಡ ಮತ್ತು ಅತಿ ಪ್ರಯಾಸದ ದಿನ. ಯಾವ ಕಾರ್ಯವೂ ಸುಲಭದಲ್ಲಿ ಸಾಧ್ಯವಾಗದು. ತೊಡಕು, ವಾದ ಉಂಟಾಗುವುದು. ನೆಗೆಟಿವ್ ಚಿಂತನೆ ಬಿಡಿ.
ಕನ್ಯಾ
ಪ್ರತಿ ಕೆಲಸ ಪರಿಪೂರ್ಣವಾಗಿ ಮುಗಿಯಲಿದೆ. ನಿಮ್ಮ ಸಾಧನೆ ನಿಮಗೇ ಅಚ್ಚರಿ ತಂದೀತು.
ತುಲಾ
ನಿಮ್ಮ ಚಿಂತೆ, ಹೆದರಿಕೆ ಕುರಿತು ಮುಕ್ತವಾಗಿ ಯೋಚಿಸಿ, ಹಂಚಿಕೊಳ್ಳಿ. ಹೆಗಲ ಮೇಲಿನ ಹೊರೆ ಕಡಿಮೆಯಾದೀತು. ಭಾವುಕತೆ ನಿಯಂತ್ರಿಸಿ.  ವೃಶ್ಚಿಕ
ಏರಿಳಿತ ಎರಡನ್ನೂ ಇಂದು ಅನುಭವಿಸುವಿರಿ. ಸುಖಕ್ಕೆ ಸಂತೋಷಿಸಿ. ಆದರೆ ಹಿನ್ನಡೆಗೆ ಕುಗ್ಗಬೇಡಿ. ಆಪ್ತರೊಬ್ಬರು ನಿಮ್ಮ ಜತೆ ಮುನಿಸಿಕೊಂಡಾರು.
ಧನು
ಕೆಲವರ ಜತೆ ವ್ಯವಹಾರ ಕಷ್ಟವಾದೀತು. ಆದರೆ ಅದರಿಂದ ಧೃತಿಗೆಡದಿರಿ. ಹಣದ ಕೊರತೆ ನಿವಾರಣೆ. ಆತ್ಮೀಯರಿಂದ ನೆರವು.
ಮಕರ
ನಿಮ್ಮ ಕುರಿತಂತೆ ಬಹಳಷ್ಟು ಮಂದಿ ಆಸಕ್ತಿ ತೋರುವರು. ನಿಮ್ಮ ಸಾಧನೆ ತೋರಿಸಲು ಮುಜುಗರ ಬೇಕಾಗಿಲ್ಲ. ಶ್ಲಾಘನೆ ಸ್ವೀಕರಿಸಿ.  
ಕುಂಭ
ವೃತ್ತಿ ಒತ್ತಡ ಮರೆತು, ದಿನವಹಿ ಜಂಜಾಟ ಬಿಟ್ಟು ಕಾಲ ಕಳೆಯಿರಿ. ನಿರಾಳ ದಿನವನ್ನು ಗ್ರಹಗತಿ ಸೂಚಿಸುತ್ತಿದೆ. ಆತ್ಮೀಯರ ಒಡನಾಟ ಸಾಧ್ಯತೆ.      
ಮೀನ
ಈ ಹಿಂದೆ ಗೊಂದಲ ಸೃಷ್ಟಿಸಿದ್ದ ವಿಷಯಗಳಲ್ಲಿ ಸ್ಪಷ್ಟತೆ ಬೆಳೆಸಿಕೊಳ್ಳಲು ಸಕಾಲ. ಬದುಕಿನಲ್ಲಿ ಖುಷಿ ಪಡಲು ಸಾಕಷ್ಟು ವಿಷಯಗಳಿವೆ, ಅರಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !