March 11, 2026
Wednesday, March 11, 2026
spot_img

ದಿನಭವಿಷ್ಯ: ಎಂದಿನಂತೆ ಹೊಸತನಕ್ಕೆ ಯತ್ನಿಸುವಿರಿ, ಮನಸ್ಸಿಗೆ ಉಲ್ಲಾಸ

ಮೇಷ
ಸವಾಲಿನ ದಿನ. ವೃತ್ತಿಯಲ್ಲೂ, ವೈಯಕ್ತಿಕವಾಗಿಯೂ ಹೆಚ್ಚು ಹೊಣೆ. ಸಂಬಂಧಕ್ಕೆ ಧಕ್ಕೆ. ಆರ್ಥಿಕ ಹಿಂಜರಿಕೆ. ಖರ್ಚೂ ಹೆಚ್ಚಳ.
ವೃಷಭ
ಪೂರೈಸಲಾಗದ ಆಶ್ವಾಸನೆ ನೀಡಿ ಇಕ್ಕಟ್ಟಿಗೆ ಸಿಲುಕುವಿರಿ. ವರ್ಚಸ್ಸಿಗೆ ಧಕ್ಕೆ ತರುವ ಕಾರ್ಯ ಎಸಗದಿರಿ. ಟೀಕೆಗಳಿಗೆ ಎರವಾಗದಂತೆ ವರ್ತಿಸಿ.
ಮಿಥುನ
ವೃತ್ತಿಯಲ್ಲಿ ಸಫಲತೆ. ಪರಿಶ್ರಮಕ್ಕೆ ಅಧಿಕ ಫಲ ಪಡೆಯುವಿರಿ. ಹೊಟ್ಟೆ ಕೆಡಿಸುವ ಆಹಾರ ತಿನ್ನದಿರಿ. ಪ್ರೀತಿಯ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿದೆ.      
ಕಟಕ
ಎಂದಿನಂತಲ್ಲದ ಹೊಸತನಕ್ಕೆ ಯತ್ನಿಸುವಿರಿ. ಮನಸ್ಸು ಉಲ್ಲಸಿತ ಗೊಳಿಸುವ ಪ್ರಸಂಗ ಉಂಟಾದೀತು. ಪ್ರೀತಿಯ ಕ್ಷೇತ್ರದಲ್ಲಿ ಸ-ಲತೆ.     ಸಿಂಹ
ಪ್ರಗತಿಯ ದಿನ. ಉದ್ಯೋಗದಲ್ಲಿ ಹೊಸ ಅವಕಾಶ. ಏಕಾಂಗಿಗಳಿಗೆ ವೈವಾಹಿಕ ಬಂಧ ಏರ್ಪಡಬಹುದು. ತೃಪ್ತಿಕರ ಆರ್ಥಿಕ ಪ್ರಗತಿ.  
ಕನ್ಯಾ
ದಂಪತಿಗಳು ತಮ್ಮ ಸಂಬಂಧ ಬಲಪಡಿಸುವ ಕ್ರಮ ತೆಗೆದುಕೊಳ್ಳಬೇಕು.  ಸಣ್ಣ ಭೇದವು ಸಂಬಂಧ ಕೆಡಿಸದಿರಲಿ. ಮುಖ್ಯ ಕಾರ್ಯ ಅಪೂರ್ಣ.
ತುಲಾ
ವೃತ್ತಿಯಲ್ಲಿ ನಿಮ್ಮ ಕಠಿಣ ದುಡಿಮೆಗೆ ತೃಪ್ತಿಕರ -ಲಿತಾಂಶ. ಆದರೆ ಕೆಲವು ವಿಷಯಗಳು ಮನಸ್ಸು ಕದಡುತ್ತವೆ. ನಿಮ್ಮ ಮಾತು ತಪ್ಪರ್ಥ ಬಿಂಬಿಸಬಹುದು.  
ವೃಶ್ಚಿಕ
ವೃತ್ತಿಯಲ್ಲಿ ಸೃಷ್ಟಿಯಾಗಿದ್ದ ಸಮಸ್ಯೆ ಪರಿಹಾರವಾಗಲಿದೆ. ಪ್ರೀತಿಯಲ್ಲಿ ಒಡಕು. ಕ್ಷುಲ್ಲಕ ವಿಷಯವೂ ಮನಸ್ಸು ಕೆಡಿಸಬಹುದು.  
ಧನು
ಹೊಣೆಗಾರಿಕೆ, ಒತ್ತಡ ಕಡಿಮೆ. ಯಾವುದೋ ವಿಷಯದಲ್ಲಿ ಭಾವುಕರಾಗಿ ನಿರ್ಧಾರ ತಾಳದಿರಿ. ಅದರ ಪ್ರಾಕ್ಟಿಕಲ್ ಆಯಾಮ ಪರಿಶೀಲಿಸಿ.   ಮಕರ
ದುಗುಡಕ್ಕೆ ಕಾರಣವಾಗಿದ್ದ ವಿಷಯ ಇಂದು ಇತ್ಯರ್ಥ ಕಾಣಬಹುದು. ಆದರೆ ಸ್ವಲ್ಪ ಮಟ್ಟಿನ ಹಿನ್ನಡೆಯೂ ಉಂಟಾದೀತು.  
ಕುಂಭ
ಆತ್ಮೀಯ ಸಂಬಂಧಕ್ಕೆ ಹುಳಿ ಹಿಂಡಲು ಕೆಲವರ ಯತ್ನ ನಡೆದೀತು. ನೀವು ಎಚ್ಚರದಿಂದಿರಿ. ವೃತ್ತಿಯಲ್ಲಿ ಪ್ರತಿಕೂಲ ಪರಿಣಾಮ ಎದುರಿಸುವಿರಿ.
 ಮೀನ
ಒಳಿತು, ಕೆಡಕು ಎರಡನ್ನು ಎದುರಿಸುವಿರಿ. ಉದ್ವಿಗ್ನ ಸ್ಥಿತಿ ಕಾಣುವಿರಿ. ಅದರ ಜತೆಗೇ ಪರಿಹಾರದ ನಿರಾಳತೆಯೂ. ಆರೋಗ್ಯ ಕಾಳಜಿ ವಹಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !