ಗುರುವಾರ, 23 ಡಿಸೆಂಬರ್ 2021, ಮಂಗಳೂರು
ಮೇಷ
ಮನೆಯವರ ಇಷ್ಟಾರ್ಥ ಈಡೇರಿಸಲು ಕೊನೆಗೂ ಮನ ಮಾಡುವ ಸಾಧ್ಯತೆಯಿದೆ. ಸ್ವಲ್ಪ ಹಣ ಜಾರಿದರೂ ಮನಸ್ಸಿಗೆ ತೃಪ್ತಿಯಾಗಲಿದೆ. ಕೌಟುಂಬಿಕ ನೆಮ್ಮದಿ.
ವೃಷಭ
ನಿಮ್ಮ ನೆಗೆಟಿವ್ ಚಿಂತನೆ ಗಳು ಮನಸ್ಸಿನ ನೆಮ್ಮದಿ ಹಾಳು ಮಾಡಬಹುದು. ಪ್ರತೀ ವಿಷಯಕ್ಕೂ ನಕಾರಾತ್ಮಕವಾಗಿ ಆಲೋಚಿಸುವುದು ಬಿಟ್ಟುಬಿಡಿ.
ಮಿಥುನ
ಭೌತಿಕ ವಸ್ತುಗಳಿಂದಲೇ ಜೀವನದಲ್ಲಿ ಸುಖ ಸಿಗುವುದು ಎಂಬ ನಿಮ್ಮ ಕಲ್ಪನೆ ಬದಲಿಸುವಂತಹ ಪ್ರಸಂಗ ಉಂಟಾದೀತು. ಅನುಭವ ದಿಂದ ಪಾಠ ಕಲಿಯಬೇಕು.
ಕಟಕ
ಕಷ್ಟಗಳಿಲ್ಲದ, ಚಿಂತೆಗಳಿಲ್ಲದ ನಿರಾಳ ದಿನ. ಬಂಧುಮಿತ್ರರ ಜತೆ ಆತ್ಮೀಯ ಕಾಲಕ್ಷೇಪ. ಉದ್ಯೋಗದಲ್ಲಿ ಹೆಚ್ಚಿನ ಏರುಪೇರುಗಳು ಸಂಭವಿಸಲಾರವು.
ಸಿಂಹ
ನಿಮ್ಮ ವ್ಯವಹಾರ ಚಾತುರ್ಯಕ್ಕೆ ಉತ್ತಮ ಫಲ ಸಿಗುವುದು. ಬಹುಮುಖ್ಯ ಕಾರ್ಯ ಈಡೇರುವುದು. ಕೌಟುಂಬಿಕ ಅಶಾಂತಿ ನಿವಾರಣೆ.
ಕನ್ಯಾ
ನಿಮ್ಮ ಮೆಚ್ಚಿನ ಹವ್ಯಾಸದಲ್ಲಿ ಉತ್ತಮ ಪ್ರಗತಿ. ಮನಸ್ಸಿಗೆ ಆಹ್ಲಾದ. ಆರ್ಥಿಕ ನಿಶ್ಚಿಂತೆ. ವ್ಯಕ್ತಿಯೊಬ್ಬರ ಆಕರ್ಷಣೆಗೆ ಸಿಲುಕುವ ಸಾಧ್ಯತೆಯಿದೆ.
ತುಲಾ
ನಿಮ್ಮ ಯಶಸ್ಸಿಗೆ ಕುಟುಂಬವು ಮುಖ್ಯ ಕಾರಣವಾಗುತ್ತದೆ. ಕೈಹಿಡಿದ ಕಾರ್ಯದಲ್ಲಿ ಯಶಸ್ಸು. ಆರ್ಥಿಕ ಪರಿಸ್ಥಿತಿ ಉತ್ತಮ. ಖರೀದೀಯ ಉತ್ಸಾಹ.
ವೃಶ್ಚಿಕ
ನಿಮ್ಮ ಇತ್ತೀಚಿನ ಕೆಲವು ವರ್ತನೆ, ಕಾರ್ಯಗಳ ಪರಾಮರ್ಶೆ ನಡೆಸಬೇಕಾದ ಕಾಲ ಬಂದಿದೆ. ತಪ್ಪುಗಳಾಗಿದ್ದರೆ ತಿದ್ದಿಕೊಳ್ಳಲು ಇದುವೇ ಸರಿಯಾದ ಸಮಯ.
ಧನು
ಪೂರ್ಣ ಮನಸ್ಸಿನಿಂದ ಕಾರ್ಯವೆಸಗಿದರೂ ನೀವು ನಿರೀಕ್ಷಿಸಿದ ಫಲಿತಾಂಶ ಮಾತ್ರ ಸಿಗುವುದಿಲ್ಲ. ಇದರಿಂದ ಮನಸ್ಸಿಗೆ ತುಸು ಬೇಸರ ಉಂಟಾದೀತು.
ಮಕರ
ಇತರರ ಜತೆ ಉತ್ತಮ ಸಂವಹನ ಸಾಸುವಿರಿ. ಇದರಿಂದ ಕಾರ್ಯದಲ್ಲಿ ಯಶಸ್ಸು. ಮುಜುಗರದ ಪ್ರಸಂಗವೊಂದರಿಂದ ಪಾರಾಗುವಿರಿ. ಆಪ್ತರ ನೆರವು ಲಭ್ಯ.
ಕುಂಭ
ಕಾರ್ಯ ಸಾಧನೆಗೆ ತುಂಬಾ ಶ್ರಮ ಪಡಬೇಕಾಗುವುದು. ಆದರೆ ಅಂತ್ಯದಲ್ಲಿ ಅತ್ಯಂತ ತೃಪ್ತಿಕರ ಫಲಿತಾಂಶ ಪಡೆಯುವಿರಿ.
ಮೀನ
ಹಣದ ಲೆಕ್ಕಾಚಾರದಲ್ಲಿ ನಿಮ್ಮಿಂದ ಇಂದು ತಪ್ಪಾಗದು. ಹಾಗಾಗಿ ಹೂಡಿಕೆಯಲ್ಲಿ ಲಾಭ ಗಳಿಸುವಿರಿ. ಕೌಟುಂಬಿಕ ಬೇಡಿಕೆಯೊಂದು ಇಂದು ಈಡೇರಲಿದೆ.