Monday, September 8, 2025

ದಿನಭವಿಷ್ಯ: ಇಂದು ನೀವು ತೀರಾ ಭಾವುಕರಾಗಿ ವರ್ತಿಸುತ್ತೀರಿ, ಗಮನ ಇರಲಿ

ಮೇಷ
 ನೀವು ಇಂದು ತೀರಾ ಭಾವುಕರಾಗಿ ವರ್ತಿಸುವಿರಿ. ಮನಸ್ಸು ತಹಬಂದಿಗೆ ತನ್ನಿ. ಕೆಲಸಕಾರ್ಯದಲ್ಲಿ  ಏಕಾಗ್ರತೆ ಕಳಕೊಳ್ಳದಿರಿ.
ವೃಷಭ
ಇತರರಿಗೆ ನೆರವು ನೀಡುವ ಧಾವಂತದಲ್ಲಿ ನಿಮ್ಮನ್ನೇ ಕಷ್ಟಕ್ಕೆ ತಳ್ಳದಿರಿ.   ಕೆಲಸದಲ್ಲಿ ನಿಧಾನ ಪ್ರಗತಿ. ಸಹೋದ್ಯೋಗಿ ಅಸಹಕಾರ.      
ಮಿಥುನ
ಕಷ್ಟ ಎದುರಿಸಿದರೂ  ಅದರ ಪರಿಹಾರಕ್ಕೆ ಅನ್ಯರ ನೆರವೂ ಸಿಗಲಿದೆ.  ದಿನದ ಅಂತ್ಯಕ್ಕೆ ನಿಮಗೆ ನಿರಾಳತೆ, ನೆಮ್ಮದಿ. ಬಂಧುಗಳಿಂದ ಉತ್ತಮ ಸಹಕಾರ.
ಕಟಕ
ಆತ್ಮೀಯರ ಜತೆ ದಿನ ಕಳೆಯುವ ಉದ್ದೇಶ -ಲಿಸದು. ಅನಿರೀಕ್ಷಿತ ಕೆಲಸದ ಒತ್ತಡ. ಹಣದ ಕೊರತೆ ಕಾಡಲಿದೆ. ಬಂಧುಗಳ ಅಸಹಕಾರ.
ಸಿಂಹ
ಭಾವನಾತ್ಮಕ ಏರುಪೇರು ಎದುರಿಸುವಿರಿ. ಆಪ್ತರಿಗೆ ಸಂಬಂಽಸಿದ ವಿಷಯ ಅದಕ್ಕೆ ಕಾರಣ. ಕೆಲ ವಿಚಾರದಲ್ಲಿ ನಿರ್ಲಿಪ್ತ ಧೋರಣೆ ಬೆಳೆಸಿಕೊಳ್ಳಿ.      
ಕನ್ಯಾ
ದೈನಂದಿನ ಕೆಲಸದ ಜತೆಗೇ ಹೆಚ್ಚುವರಿ ಹೊಣೆಯ ಹೊರೆ. ಯಾವುದೋ ವಿಷಯದಲ್ಲಿ ಇತರರ ಒತ್ತಡಕ್ಕೆ ಬಲಿಯಾಗುವಿರಿ.    
ತುಲಾ
ಪ್ರತಿಕೂಲ ಸನ್ನಿವೇಶ ಎದುರಾದೀತು. ಸಹನೆಯ ವರ್ತನೆ ಇಂದು ಅವಶ್ಯ. ತಾಳ್ಮೆಗೆಟ್ಟರೆ ಪರಿಸ್ಥಿತಿ ಬಿಗಡಾಯಿಸಬಹುದು. ಕೌಟುಂಬಿಕ ಒತ್ತಡ ಹೆಚ್ಚು .  
ವೃಶ್ಚಿಕ
 ನಿಮ್ಮ ಅಗತ್ಯದ ಬಗ್ಗೆ  ಸ್ಪಷ್ಟತೆ ಇರಲಿ. ಬಳಿಕ ಅದನ್ನು ಪಡೆಯಲು ಯತ್ನಿಸಿ. ಇತರರ ಬದುಕಿನ ಜತೆ ತುಲನೆ ಮಾಡಿ  ಕೊರಗುವುದು ಸರಿಯಲ್ಲ್ಲ.    
ಧನು
ಕ್ಷಣಿಕ ಸಂತೋಷದ ಮೋಹಕ್ಕೆ ಒಳಗಾಗದಿರಿ.  ಅದು ಪ್ರತಿಕೂಲ ಪರಿಣಾಮ ಉಂಟು ಮಾಡೀತು. ಕುಟುಂಬದ ಹಿತಾಸಕ್ತಿಗೆ ಗಮನ ಕೊಡಿ.    
ಮಕರ
ಸದಾ ಕೆಲಸದಲ್ಲಿ ನಿರತರಾಗಬೇಕಾದ ಅನಿವಾರ್ಯತೆ. ವಿರಾಮಕ್ಕೆ ಅವಕಾಶ ಸಿಗದು. ಕೊರಗೊಂದು ಬಾಽಸಲಿದೆ.    
ಕುಂಭ
ಆತ್ಮೀಯರ ಕುರಿತು ವೃಥಾ ಸಂಶಯ ಬೆಳೆಸಿಕೊಳ್ಳದಿರಿ. ವಿಶ್ವಾಸ ಕೆಟ್ಟರೆ ಮತ್ತೆ ಸರಿಯಾಗದು. ಕೌಟುಂಬಿಕ ಮನಸ್ತಾಪ.  
 ಮೀನ
ಮನೆಯಲ್ಲಿನ ಬೆಳವಣಿಗೆ ಅಸಂತೋಷ ಉಂಟು ಮಾಡುವುದು. ಸಮಸ್ಯೆ ಮುಗಿಯುತ್ತಿಲ್ಲ ಎಂಬ ಅಸಹಾಯಕತೆ. ಇಷ್ಟದೇವರ ಪ್ರಾರ್ಥಿಸಿ.

ಇದನ್ನೂ ಓದಿ