ಮೇಷ
ಹೊಂದಾಣಿಕೆ ಸ್ವಭಾವ ತೋರಿ. ಹಠ, ಬೇಕಾಬಿಟ್ಟಿ ಧೋರಣೆ ಸಂಬಂಧ ಕೆಡಿಸೀತು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಫಲತೆ.
ವೃಷಭ
ನೀವು ನಿರೀಕ್ಷಿಸಿದ ಫಲ ಇಂದು ಸಿಗದು. ವೃತ್ತಿ ಕ್ಷೇತ್ರದಲ್ಲಿ ಬಯಸದ ಬೆಳವಣಿಗೆ. ನಿಮ್ಮ ಮನಸ್ಸು ಕೆಡಿಸುವ ವ್ಯಕ್ತಿಗಳ ಸಂಗದಿಂದ ದೂರವಿರಿ.
ಮಿಥುನ
ನಿರಾಳ ದಿನ. ಮುಖ್ಯ ಕೆಲಸವನ್ನು ಬಹುತೇಕ ನೆರವೇರಿಸಿದ ಸಮಾಧಾನ. ಉದ್ಯಮದಲ್ಲಿ ಪ್ರಗತಿ. ಆರೋಗ್ಯ ಸುಸ್ಥಿರ. ಬಂಧುಮಿತ್ರರ ಸಹಕಾರ.
ಕಟಕ
ವೃತ್ತಿಯಲ್ಲಿ ಎಲ್ಲವೂ ಉತ್ತಮವಾಗಿ ಸಾಗಲಿದೆ. ಆದರೆ ಕೌಟುಂಬಿಕ ಬದುಕಲ್ಲಿ ಏರುಪೇರು ಎದುರಿಸುವಿರಿ. ಅತಿರೇಕವಾಗಿ ವರ್ತಿಸದಿರಿ. ಸಿಂಹ
ಎಂದಿಗಿಂತ ಹೆಚ್ಚೇ ಕೆಲಸದ ಒತ್ತಡ. ಸಹಚರರ ಜತೆ ಸಂಘರ್ಷ. ಹಣಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳದಿರಿ. ಕಾದು ನೋಡುವುದೊಳಿತು.
ಕನ್ಯಾ
ವೃತ್ತಿ ಮತ್ತು ಖಾಸಗಿ ಬದುಕಿನ ಮಧ್ಯೆ ಹೊಂದಾಣಿಕೆಯ ಕೊರತೆ. ಎರಡನ್ನೂ ಸಮಾನವಾಗಿ ನಿಭಾಯಿಸಿ. ಯಾವುದನ್ನೂ ಕಡೆಗಣಿಸಬೇಡಿ. ತುಲಾ
ಕೆಲವು ದಿನಗಳ ಕಠಿಣ ಶ್ರಮಕ್ಕೆ ಸೂಕ್ತ ಫಲ ಸಿಗಲಿದೆ. ಸಂತೃಪ್ತಿ. ವಿದ್ಯಾರ್ಥಿಗಳಿಂದ ಕಠಿಣ ಪರಿಶ್ರಮ ಅಗತ್ಯ. ನಿರ್ಲಕ್ಷ್ಯ ಸಲ್ಲದು. ವೃಶ್ಚಿಕ
ಎಲ್ಲರ ಮಾತೂ ಕೇಳುತ್ತಾ ಹೋದರೆ ನಿಮ್ಮ ಮೇಲಿನ ಒತ್ತಡ ಹೆಚ್ಚಲಿದೆ. ನೀವೇ ವಿವೇಕಯುತವಾಗಿ ಯೋಚಿಸಿ. ಮನೆಯಲ್ಲಿ ಸೌಹಾರ್ದ ಪರಿಸರ.
ಧನು
ಸಂತೋಷ ಹೆಚ್ಚಿಸುವ ದಿನ. ಅದೃಷ್ಟ ನಿಮ್ಮ ಜತೆಗಿದೆ. ಕಾಡುತ್ತಿದ್ದ ಸಮಸ್ಯೆ ಪರಿಹಾರ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ. ವೆಚ್ಚ ಅಧಿಕ. ಮಕರ
ಪ್ರಗತಿಪರ ದಿನ. ದೃಢಚಿತ್ತದಿಂದ ಕೆಲಸ ನಿರ್ವಹಿಸಿ. ಉತ್ತಮ ಫಲ ಖಂಡಿತ. ಆರ್ಥಿಕ ಸ್ಥಿತಿ ತೃಪ್ತಿಕರ. ದಂಪತಿ ಮಧ್ಯೆ ವಿರಸ ಉಂಟಾದೀತು.
ಕುಂಭ
ಆರ್ಥಿಕ ಲಾಭ. ಉದ್ಯಮದಲ್ಲಿ ಯಶಸ್ಸು. ವಯಸ್ಸಾದವರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಕೌಟುಂಬಿಕ ಸಾಮರಸ್ಯ.
ಮೀನ
ಗ್ರಹಗತಿ ಒಳಿತನ್ನು ಸೂಚಿಸುತ್ತಿದೆ. ವೃತ್ತಿಯಲ್ಲಿ ಉನ್ನತಿ. ನಿರುದ್ಯೋಗಿಗಳಿಗೆ ಉದ್ಯೋಗವಕಾಶ. ಪ್ರೀತಿ, ಸ್ನೇಹದಲ್ಲಿ ವಿರಸ ಮಾಯ, ಸಮರಸತೆ ಬೆಳೆಯಲಿದೆ



