ಮೇಷ
ಕೆಲಸ, ಮನೆಯ ಕಡೆಗೇ ಗಮನ ಕೊಟ್ಟು ಇತರ ವಿಷಯ ಕಡೆಗಣಿಸಿದ್ದೀರಿ. ಖಾಸಗಿ ವಿಷಯಕ್ಕೂ ಆದ್ಯತೆ ಕೊಡಿ. ಹೂಡಿಕೆಯಿಂದ ಧನಲಾಭ ವೃಷಭ
ಉದಾಸೀನತೆ. ಅದರಿಂದ ಕೆಲಸ ನಿಧಾನ. ತುರ್ತು ಕಾರ್ಯ ಕಡೆಗಣಿಸಬೇಡಿ. ಶೇರು ಹೂಡಿಕೆಯಲ್ಲಿ ಎಚ್ಚರ ವಹಿಸುವುದೊಳಿತು. ಮಿಥುನ
ಉದ್ವಿಗ್ನ ಪರಿಸ್ಥಿತಿ ಎದುರಿಸುವಿರಿ. ಮನಸು ಶಾಂತಗೊಳಿಸಲು ಹೆಚ್ಚು ಗಮನ ಕೊಡಿ. ಆದಾಯ ಮತ್ತು ಖರ್ಚಿನ ಮಧ್ಯೆ ಸಮತೋಲನ ಸಾಧಿಸಿ.
ಕಟಕ
ಈ ದಿನ ಹೆಚ್ಚು ಎಚ್ಚರ ಅವಶ್ಯ. ಸಣ್ಣ ತಪ್ಪು ದೊಡ್ಡ ಪರಿಣಾಮ ಉಂಟು ಮಾಡೀತು. ಖರೀದಿ ಹುಮ್ಮಸ್ಸಿನಲ್ಲಿ ಖರ್ಚು ಅಧಿಕ. ಬಂಧು ಭೇಟಿ. ಸಿಂಹ
ಎಲ್ಲವೂ ನಿಮಗೆ ಪೂರಕವಾಗಿದ್ದರೂ ಏನೋ ಕೊರಗು, ಬೇಸರ. ಪ್ರೀತಿಯಲ್ಲಿ ಹಿನ್ನಡೆ. ನಿಮ್ಮ ಧೋರಣೆ ಬದಲಿಸುವ ಪ್ರಸಂಗ ಬಂದೀತು. ಕನ್ಯಾ
ಭವಿಷ್ಯದ ಯೋಜನೆ ರೂಪಿಸಲು ಸಕಾಲ. ಉದ್ಯೋಗ ಪಡೆಯುವಲ್ಲಿ ಸಫಲ. ಧೂಳು ಸಂಬಂಽ ಅಲರ್ಜಿ ಉಂಟಾದೀತು. ಕೌಟುಂಬಿಕ ಸೌಹಾರ್ದ.
ತುಲಾ
ಕಲ್ಪನೆಗೆ ರೆಕ್ಕೆ ಮೂಡಲಿದೆ. ಅದನ್ನು ಸಾಕಾರಗೊಳಿಸಲು ಸಫಲ. ಆತ್ಮೀಯರ ಸಾಧನೆಯ ತೃಪ್ತಿ. ಚಾಲನೆಯಲ್ಲಿ ತುಸು ಎಚ್ಚರವಿರಲಿ. ವೃಶ್ಚಿಕ
ಏಕತಾನತೆಯಿಂದ ಹೊರಬಂದು ಹೊಸತನಕ್ಕೆ ಕ್ರಿಯಾಶೀಲರಾಗಿ.ಅನವಶ್ಯ ಜಗಳಕ್ಕೆ ಹೋಗದಿರಿ. ತಾಳ್ಮೆ ಪ್ರದರ್ಶಿಸಿ. ಪ್ರೀತಿಯಲ್ಲಿ ಮಹತ್ವದ ಬೆಳವಣಿಗೆ.
ಧನು
ಕಡೆಗಣಿಸಿದ್ದ ವಿಷಯವೊಂದು ಮುನ್ನೆಲೆಗೆ ಬರಲಿದೆ. ಆ ಬಗ್ಗೆ ಗಮನ ಹರಿಸಿ. ವೃತ್ತಿಗೆ ಸಂಬಂಧಿಸಿ ಶುಭ ಸುದ್ದಿ ಕೇಳಲಿದೆ. ಧನಪ್ರಾಪ್ತಿ. ಮಕರ
ಉದ್ಯೋಗಕ್ಕೆ ಸಂಬಂಧಿಸಿ ಶುಭ ಸುದ್ದಿ. ಆಪ್ತರ ಜತೆಗಿನ ಭಿನ್ನಮತ ಶಮನ. ಹಣದ ವ್ಯವಹಾರದಲ್ಲಿ ಅನಿರೀಕ್ಷಿತ ತೊಡಕು ಉಂಟಾಗಲಿದೆ. ಕುಂಭ
ನೀವು ನಿರರ್ಥಕ ಅಂದುಕೊಂಡ ಕೆಲಸ ಉತ್ತಮ ಫಲಿತಾಂಶ ನೀಡಲಿದೆ. ತೃಪ್ತಿಕರ ಆರ್ಥಿಕ ಬೆಳವಣಿಗೆ.ಕೌಟುಂಬಿಕ ಸಾಮರಸ್ಯ.
ಮೀನ
ವಿವಾಹ ಸಂಬಂಧ ಕೂಡಿಬಂದೀತು. ಉದ್ವಿಗ್ನತೆ ಸೃಷ್ಟಿಸುವ ವಿಷಯಗಳಿಂದ ದೂರವಿರಿ. ವೃತ್ತಿ ಕಾರ್ಯದಲ್ಲಿ ಸಫಲತೆ. ಬಂಧುಗಳ ಸಹಕಾರ.



