April 9, 2026
Thursday, April 9, 2026
spot_img

ದಿನಭವಿಷ್ಯ: ಗುಣಾತ್ಮಕ ಸಂಕೇತಗಳಿಂದಲೇ ಇಂದಿನ ದಿನ ಆರಂಭ, ಎಲ್ಲವೂ ನಿಮಗೆ ಪೂರಕ

ಮೇಷ
ಗುಣಾತ್ಮಕ ಸಂಕೇತ ಗಳಿಂದಲೇ ಇಂದಿನ ದಿನ ಆರಂಭ. ನಿಮಗೆ ಪೂರಕ ಪರಿಸ್ಥಿತಿ. ಆರ್ಥಿಕ ಚಿಂತೆ ನಿವಾರಣೆ. ಆತ್ಮೀಯರ ಸಂಗಡ ಖುಷಿ ಪಡುವಿರಿ.    
ವೃಷಭ
ಎಲ್ಲರೂ ನಿಮ್ಮಂತೆ ಯೋಚಿಸಬೇಕು ಎಂದು ಬಯಸುವುದು ತಪ್ಪು. ಇತರರ ಭಾವನೆ ಗೌರವಿಸಿ. ಮನೆಯಲ್ಲಿ ಹಿರಿಯರಿಗೆ ಅನಾರೋಗ್ಯ ಸಂಭವ.
ಮಿಥುನ
ಕೌಟುಂಬಿಕ ವಿಷಯ ಮುಖ್ಯವಾಗುತ್ತದೆ. ಕಳೆದು ಹೋದುದಕ್ಕೆ ಕೊರಗುತ್ತಾ ಕೂರದಿರಿ. ನಗುನಗುತ್ತಾ ನಿಮ್ಮ ಹೊಣೆ ನಿಭಾಯಿಸಿ. ಆರೋಗ್ಯ ಕಾಯ್ದುಕೊಳ್ಳಿ.  
ಕಟಕ
ಗತದಿನಗಳ ಬಗ್ಗೆ ಅತಿಯಾಗಿ ಚಿಂತಿಸದಿರಿ. ಈಗ ಮಾಡಬೇಕಾದ ಕೆಲಸಕ್ಕೆ ಆದ್ಯತೆ ಕೊಡಿ. ಕೆಲ ವಿಷಯಗಳಿಗೆ ಅತಿರೇಕದ ಪ್ರತಿಕ್ರಿಯೆ ತೋರುತ್ತೀರಿ.            
ಸಿಂಹ
ವಿರಾಮದ ಮಧ್ಯೆಯೂ ಕೆಲಸದ ಒತ್ತಡ ಬಾಽಸುವುದು. ಆಪ್ತರ ಸಂಗಡ ವಾಗ್ವಾದಕ್ಕೆ ಇಳಿಯಬೇಡಿ. ನೀವು ಮೌನವಾಗಿ ಉಳಿಯಿರಿ.    
ಕನ್ಯಾ
ವ್ಯವಹಾರದ ಬಗ್ಗೆ ಹೆಚ್ಚು ಗಮನ ಕೊಡಿ. ನಿರ್ಲಕ್ಷ್ಯ ತೋರಿದರೆ ನಷ್ಟ ಉಂಟಾದೀತು. ಹೆತ್ತವರು ಮಕ್ಕಳ ಜತೆ ಮೆದುವಾಗಿ ವರ್ತಿಸಬೇಕು.   ತುಲಾ
ನಿಮ್ಮ ಜತೆಗೆ ಅತಿಯಾದ ಸಲುಗೆ ಸಾಽಸುವವರ ಕುರಿತು ಎಚ್ಚರವಿರಲಿ.   ಮನೆಯಲ್ಲಿ ಸೌಹಾರ್ದ ವಾತಾವರಣ, ನೆಮ್ಮದಿ.
ವೃಶ್ಚಿಕ
 ಕೆಲವರನ್ನು ಕುರುಡಾಗಿ ನಂಬದಿರಿ. ಅವರಿಂದಲೇ ಮೋಸ ಹೋಗುವಿರಿ. ಕೆಲಸದ ಒತ್ತಡದಿಂದಾಗಿ ವಿಶ್ರಾಂತಿಗೆ  ಆಸ್ಪದ ಸಿಗಲಾರದು.
ಧನು
ಕೌಟುಂಬಿಕ ಪರಿಸ್ಥಿತಿ ನೆಮ್ಮದಿ ತರಲಿದೆ. ಆತ್ಮೀಯರ ಒಡನಾಟದಲ್ಲಿ ಸಂತೋಷ ಕಾಣುವಿರಿ. ಹಣ ಗಳಿಕೆಗೆ ಮೊಟಕು ದಾರಿ ಹಿಡಿಯದಿರಿ.   ಮಕರ
ಜಡತ್ವ ಬಿಟ್ಟು ಕ್ರಿಯಾಶೀಲರಾಗಿ. ನಿಮ್ಮ ಹವ್ಯಾಸ ಬಿಡಬೇಡಿ. ದೈಹಿಕ ಶ್ರಮದಿಂದ ಬಳಲುವಿರಿ. ಆಪ್ತರ ಜತೆ ಮಾತಿನ ಚಕಮಕಿ.  
ಕುಂಭ
ವ್ಯವಹಾರದಲ್ಲಿ ಮಹತ್ವದ ಬದಲಾವಣೆ ತೋರುವ ಸಾಧ್ಯತೆಯಿದೆ.  ಮಾನಸಿಕ ಒತ್ತಡ  ನಿವಾರಣೆಗೆ ಧ್ಯಾನ ಸಹಕಾರಿಯಾದೀತು.        
 ಮೀನ
ಯೋಜನೆ ಹಾಕಿ ಕೆಲಸ ನಿರ್ವಹಿಸಿ. ಇಲ್ಲವಾದರೆ ಗೊಂದಲ ಎದುರಿಸುವಿರಿ. ಆರೋಗ್ಯ ಸ್ಥಿರ. ಹಣದ ಚಿಂತೆಯೊಂದು ಪರಿಹಾರ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !