ಮೇಷ
ನಿಮ್ಮ ಘನತೆ, ವೈಯಕ್ತಿಕ ಗುರಿ, ಕರ್ತವ್ಯ ಶಕ್ತಿ ಎಲ್ಲವೂ ಇಂದು ಉನ್ನತ ಮಟ್ಟದಲ್ಲಿರುವುದು. ಎಲ್ಲರಿಂದ ಬೆಂಬಲ ಪಡೆಯುವಿರಿ. ಮಾನಸಿಕ ನಿರಾಳತೆ.
ವೃಷಭ
ನೆಮ್ಮದಿ ಹಾಳು ಮಾಡುವ ಗತಕಾಲದ ಕೆಲವು ವಿಚಾರಗಳನ್ನು ಇತ್ಯರ್ಥ ಮಾಡಲು ಸಮರ್ಥರಾಗುವಿರಿ. ಆಪ್ತರಿಂದ ಸೂಕ್ತ ನೆರವು, ಸಾಂತ್ವನ ಲಭ್ಯ.
ಮಿಥುನ
ಪ್ರೀತಿಪಾತ್ರರನ್ನು ಸಂತೋಷಪಡಿಸಲು ಯತ್ನಿಸುವಿರಿ. ಭಿನ್ನಮತ ನಿವಾರಣೆ. ಆರೋಗ್ಯದ ಕುರಿತು ಎಚ್ಚರ ವಹಿಸಿ. ಖರ್ಚು ಹೆಚ್ಚಳವು ಚಿಂತೆ ತರುತ್ತದೆ.
ಕಟಕ
ಅದೃಷ್ಟದ ದಿನ. ಎಲ್ಲವೂ ಗುಣಾತ್ಮಕವಾಗಿ ಸಾಗುವವು. ಪ್ರತಿಕೂಲ ಸನ್ನಿವೇಶವೂ ನಿಮಗೆ ಪೂರಕವಾಗಿ ಬದಲಾಗುವುದು. ತೃಪ್ತಿಕರ ಅನುಭವ.
ಸಿಂಹ
ಪ್ರೀತಿಪಾತ್ರರ ವರ್ತನೆ ನಿಮಗೆ ಅಸಹನೀಯ ಎನಿಸಬಹುದು. ತಾತ್ಕಾಲಿಕ ವಿಷಯಗಳ ಬಗ್ಗೆ ಅತಿಯಾಗಿ ಚಿಂತಿಸಬೇಡಿ. ತಾಳ್ಮೆ ಕಳಕೊಳ್ಳದಿರಿ.
ಕನ್ಯಾ
ನೆರೆಕರೆಯವರ ಜತೆ ಸಂಘರ್ಷ ನಡೆದೀತು. ಸಣ್ಣ ವಿಷಯವನ್ನು ವಿವಾದವಾಗಿಸದಿರಿ. ಕುಟುಂಬಸ್ಥರ ಜತೆ ಹೆಚ್ಚು ಕಾಲ ಕಳೆಯಲು ಗಮನ ಕೊಡಿ.
ತುಲಾ
ಕುಟುಂಬ ಮತ್ತು ವೃತ್ತಿಯ ನಡುವೆ ಹೊಂದಾಣಿಕೆ ಕಷ್ಟವಾದೀತು. ಎರಡನ್ನೂ ಕಡೆಗಣಿಸದಂತೆ ಯೋಜನೆ ರೂಪಿಸಿ.
ವೃಶ್ಚಿಕ
ವೃತ್ತಿಯಲ್ಲಿ ಸವಾಲು. ಕೆಲವರು ನಿಮ್ಮ ಸ್ಥೈರ್ಯ ಕೆಡಿಸಲು ಯತ್ನಿಸುವರು. ಸಂಬಂಧದಲ್ಲಿನ ತೊಡಕು ನಿವಾರಣೆ. ಪ್ರೀತಿಯ ವಿಷಯದಲ್ಲಿ ಗುಣಾತ್ಮಕ ಬೆಳವಣಿಗೆ.
ಧನು
ಮನಸ್ಸು ಅಶಾಂತ. ಯಾವುದೋ ಸಮಸ್ಯೆ ಕಾಡುತ್ತಿರುತ್ತದೆ. ಸಮಾಧಾನ ಚಿತ್ತರಾಗಿ ಯೋಚಿಸಿ. ಸಂಧಿನೋವು ಅಥವಾ ಬೆನ್ನುನೋವು ಕಾಡಬಹುದು.
ಮಕರ
ಯಾವುದೇ ಪರಿಸ್ಥಿತಿ ಒದಗಿದರೂ ಅದನ್ನು ನಿಮ್ಮ ಪರವಾಗಿ ಬದಲಿಸಲು ಯತ್ನಿಸಿ. ಹತಾಶರಾಗಿ ಕೈ ಚೆಲ್ಲಬೇಡಿ. ಪ್ರಯತ್ನಕ್ಕೆ ತಕ್ಕ ಫಲವಿದೆ.
ಕುಂಭ
ಯಾವುದೇ ಸವಾಲು ಎದುರಿಸುವ ಆತ್ಮವಿಶ್ವಾಸ ಇಂದು ನಿಮ್ಮಲ್ಲಿದೆ. ಹಾಗಾಗಿ ಯಾವುದೇ ಸೋಲು ತಟ್ಟದು. ಕೌಟುಂಬಿಕ ಸಹಕಾರ ನಿಮ್ಮ ಜತೆಗಿದೆ.
ಮೀನ
ನಿಮಗಿಂದು ಪೂರಕ ದಿನ. ಉದ್ದೇಶಿತ ಕಾರ್ಯ ಸಫಲ. ಬಂಧುಗಳಿಂದ ಕಿರಿಕಿರಿ ಒದಗಿದರೂ ಅದನ್ನು ನಿಭಾಯಿಸುವಿರಿ. ಖರ್ಚು ತಹಬಂದಿಗೆ.