April 21, 2026
Tuesday, April 21, 2026
spot_img

ದಿನಭವಿಷ್ಯ: ಬಾಕಿ ಉಳಿದ ಕೆಲಸವನ್ನು ಕಡೆಗಣಿಸಬೇಡಿ, ಇಂದೇ ಮುಗಿಸಿ

ಮೇಷ.
ಕೆಲವು ಸಮಸ್ಯೆ ಎದುರಾಗಲಿದೆ. ಚಿಂತೆ ಬೇಕಾಗಿಲ್ಲ. ಪರಿಹಾರ ನಿಮ್ಮ ಎಟಕಿನಲ್ಲೆ ಇದೆ. ಆಪ್ತ ಬಂಧು ಭೇಟಿಯಿಂದ ಉತ್ಸಾಹ. ಆರ್ಥಿಕ ಸ್ಥಿರತೆ.            
ವೃಷಭ
ನಿಮ್ಮ ದಿನಚರಿ ಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಿ. ತೊಡಕು ನಿವಾರಿಸಿಕೊಳ್ಳಬಲ್ಲಿರಿ. ದೊಡ್ಡ ಮಟ್ಟದ ವೆಚ್ಚಕ್ಕೆ ಕೈಹಾಕಬೇಡಿ.          
ಮಿಥುನ
ಬಾಕಿ ಉಳಿದ ಕೆಲಸ ಕಡೆಗಣಿಸಬೇಡಿ. ಬೇಗ ಮುಗಿಸಿರಿ.  ಸಂಜೆ ವೇಳೆ ಕುಟುಂಬಸ್ಥರ ಜತೆ ಆತ್ಮೀಯ ಕಾಲಕ್ಷೇಪ. ಪ್ರೇಮಿಗಳ ಮಧ್ಯೆ ಒಡಕು.        
ಕಟಕ
ಎಲ್ಲರು ಮೆಚ್ಚುವ ಸಾಧನೆ ನಿಮ್ಮದು. ಮನೆಯಲ್ಲಿನ ಅಶಾಂತಿ ನಿವಾರಣೆ. ಕಠಿಣ ಕಾರ್ಯ ಸುಲಭದಲ್ಲಿ ಪೂರ್ಣ. ಹೊಸ ಹೊಣೆಗಾರಿಕೆ.       ಸಿಂಹ
ಮನಸ್ಸೇಕೋ ಉದಾಸ. ಎಲ್ಲರ ಜತೆ ಬೆರೆಯಲು ಮನಸ್ಸು  ಬಾರದು. ಕಾರಣವಿಲ್ಲದ ಚಿಂತೆ. ಕೆಲವರಿಗೆ ಹೊಟ್ಟೆ ನೋವು ಕಾಡಬಹುದು.   ಕನ್ಯಾ
ಕೆಲಸದ ಒತ್ತಡದಿಂದ ಮುಕ್ತಿ. ನಿಮ್ಮ ಇಷ್ಟದ ಕಾರ್ಯ ನಡೆಸಲು ಅವಕಾಶ. ಧನಲಾಭ. ಅನುಚಿತ ಆಹಾರ ಸೇವನೆ ಜಡತ್ವಕ್ಕೆ ಕಾರಣವಾದೀತು.                
ತುಲಾ
ಕೌಟುಂಬಿಕ ಪರಿಸರ ಸಕಾರಾತ್ಮಕ ಬದಲಾವಣೆ ಕಾಣಲಿದೆ. ಸಮಸ್ಯೆ ನಿವಾರಣೆ. ವೃತ್ತಿಯಲ್ಲಿ ತೊಡಕು ಪರಿಹಾರ. ಬಂಧುಗಳ ಸಹಕಾರ.   ವೃಶ್ಚಿಕ
ಮಹತ್ವದ ನಿರ್ಧಾರ ತಾಳಬೇಕಾದ ದಿನ. ಮನದಲ್ಲಿ ಶಾಂತತೆ ಕಾಯ್ದುಕೊಳ್ಳಿ. ಒತ್ತಡಗಳು ಪ್ರಭಾವಿಸದಂತೆ ನೋಡಿ. ದೈಹಿಕ ನೋವು ಸಂಭವ.          
ಧನು
 ವೃತ್ತಿಯಲ್ಲಿ ಹೆಚ್ಚು ಎಚ್ಚರದಿಂದಿರಿ. ಪ್ರತಿಕೂಲ ಸನ್ನಿವೇಶ ಎದುರಾದೀತು. ಇದರ ಮಧ್ಯೆಯೇ ಆರ್ಥಿಕ ಉನ್ನತಿ. ಮುಖ್ಯ ಯೋಜನೆ ಯಶಸ್ಸು.          
ಮಕರ
ಕೆಲ ವಿಚಾರಗಳಲ್ಲಿ ಗೊಂದಲದ ಮನಸ್ಥಿತಿ. ವಿವೇಕದಿಂದ ವರ್ತಿಸಿ, ಇತರರನ್ನು ನಿಯಂತ್ರಿಸಲು ಹೋಗದಿರಿ. ಅವರ ವಿರೋಧ ಎದುರಿಸುವಿರಿ.
ಕುಂಭ
ಏರುಪೇರಿನ ದಿನ. ಸಂತೋಷ, ಬೇಸರ ಎರಡೂ ಅನುಭವಿಸುವಿರಿ. ಪ್ರೀತಿಗೆ ಅಡ್ಡಿ. ಒತ್ತಡ ಕಳೆಯಲು ಭಜನೆ, ಧ್ಯಾನ ನೆರವಾದೀತು.     ಮೀನ
ನಿಮ್ಮ ಸುತ್ತಲಿನ ಪರಿಸರ ಗಂಭೀರತೆ ತುಂಬಿಕೊಳ್ಳಲಿದೆ.  ಅದಕ್ಕೆ ಹೊಂದಿಕೊಳ್ಳಿ. ಕೆಲಸದಲ್ಲಿ ಭಾರೀ ಒತ್ತಡ. ಇತರರ ಅಸಹಕಾರ ಎದುರಿಸುವಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !