ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಹೈಕೋರ್ಟ್ ಅನುಮತಿ ಕೊಟ್ಟ ಬೆನ್ನಲ್ಲೇ ಡಿಕೆಶಿ ಮತ್ತೆ ಜೈಲಿಗೆ ಹೋಗೇ ಹೋಗುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಒಬ್ಬ ಭಂಡ ರಾಜಕಾರಣಿ. ಆವತ್ತು ಜೈಲಿನಿಂದ ಬಿಡುಗಡೆಯಾಗಿ ರಾಜ್ಯಕ್ಕೆ ಬರುತ್ತಿದ್ದಂತೆ ತಮ್ಮ ಮೇಲೆ ಯಾವ ಕೇಸ್ ಇಲ್ಲವೆಂಬಂತೆ ಏರ್‌ಪೋರ್ಟ್‌ನಿಂದ ತೆರೆದ ವಾಹನದಲ್ಲಿ ಮೆರವಣಿಗೆ ಬಂದಿದ್ದರು. ಇದೀಗ ಮತ್ತೆ ಇದೇ ಕೇಸ್ ಮೇಲೆ ಅವರು ಜೈಲಿಗೆ ಹೋಗುವ ಪರಿಸ್ಥಿತಿ ಬಂದೇ ಬರುತ್ತದೆ ಇದು ಪಕ್ಕಾ ಎಂದರು.
ಬೆಂಗಳೂರಿನಲ್ಲಿ ಮತ್ತೆ ನೂರು ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ಮಾಡಿ ಅಂದರೆ ಅದಕ್ಕೆ ಕೈಲಾಗೋದಲ್ಲ. ವಿರೋಧ ಪಕ್ಷದವರಾಗಿ ತನಿಖೆ ಮಾಡಿ ಅಂತ ಹೇಳೋದು ತಪ್ಪಾ? ಡಿಕೆಶಿ ಕೊಡುವ ಉತ್ತರದಲ್ಲೂ ಗೂಂಡಾಗಿರಿ ಕಂಡುಬರುತ್ತದೆ. ಜೈಲಿಗೆ ಹೋಗಿ ಬಂದರೂ ವೀರೋಚಿತವಾಗಿ ಮೆರವಣಿಗೆಯಲ್ಲಿ ಬರೋದಕ್ಕೆ ಏನಾದ್ರೂ ಸಾಧನೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು.