ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟ ವಿಜಯ್ ರಂಗರಾಜು ಇಂದು (ಜನವರಿ 20) ರಂದು ಚೆನ್ನೈನಲ್ಲಿ ನಿಧನ ಹೊಂದಿದ್ದಾರೆ. ತೆಲುಗು, ಮಲಯಾಳಂ, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ರಂಗರಾಜು, ತಮ್ಮ ವಿಲನ್ ಪಾತ್ರಗಳಿಂದ ಜನಪ್ರಿಯರಾಗಿದ್ದರು. ನಂದಮೂರಿ ಬಾಲಕೃಷ್ಣ ನಟನೆಯ ‘ಭೈರವ ದ್ವೀಪಂ’ ಸಿನಿಮಾದಲ್ಲಿ ನಿರ್ವಹಿಸಿದ ವಿಲನ್ ಪಾತ್ರದಿಂದ ಅವರಿಗೆ ಹೆಚ್ಚು ಹೆಸರು ಬಂದಿತ್ತು.
ರಂಗರಾಜು ಅವರಿಗೆ ಕೆಲ ವಾರಗಳ ಹಿಂದೆ ಚಿತ್ರೀಕರಣದ ಸಂದರ್ಭದಲ್ಲಿ ಗಾಯವಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಚೆನ್ನೈಗೆ ತರಲಾಗಿತ್ತು. ಚಿಕಿತ್ಸೆ ನಡೆದು ವಿಶ್ರಾಂತಿಯಲ್ಲಿದ್ದ ರಂಗರಾಜು ಇಂದು ಚೆನ್ನೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಅವರಿಗೆ ಸುಮಾರು 65 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರಿಯರನ್ನು ರಂಗರಾಜು ಅಗಲಿದ್ದಾರೆ.
ವಿಲನ್ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದ ವಿಜಯ್ ರಂಗರಾಜು ಹೆಸರು ಹಲವು ವಿವಾದಗಳಲ್ಲಿ ಕೇಳಿ ಬಂದಿತ್ತು. ವಿಜಯ್ ರಂಗರಾಜು ಮೂಲ ಹೆಸರು ರಾಜ್‌ಕುಮಾರ್. ಈತ ಹುಟ್ಟಿದ್ದು ಮಹಾರಾಷ್ಟ್ರ ಪುಣೆಯಲ್ಲಿ ಆದರೆ ಬೆಳೆದಿದ್ದಲ್ಲಾ ಆಂಧ್ರದ ಗುಂತಕಲ್. ಉತ್ತಮ ಮೈಕಟ್ಟು, ವಿಕ್ಷಿಪ್ತ ಮುಖಚಹರೆ, ದೊಡ್ಡ ಮೀಸೆ ಹೊಂದಿದ್ದ ವಿಜಯ್ ರಂಗರಾಜು, ಮೊದಲಿಗೆ 1976 ರ ಸೀತಾಕಲ್ಯಾಣಂ ಸಿನಿಮಾದಲ್ಲಿ ನಟಿಸಿದ್ದರು, ಜೊತೆಗೆ ಕೆಲವು ಸಿನಿಮಾಗಳಲ್ಲಿ ಫೈಟರ್ ಸಹ ಆಗಿದ್ದರು. ಆ ನಂತರ ಮಲಯಾಳಂ ನ ಕೆಲವು ಸಿನಿಮಾಗಳು, ನಂತರ ಸಿಂಗೀತಂ ಶ್ರೀನಿವಾಸ್ ನಿರ್ದೇಶಿಸಿದ್ದ ‘ಭೈರವದೀಪಂ’ ಸಿನಿಮಾದಲ್ಲಿ ಭೈರವನ ಪಾತ್ರ ಇವರಿಗೆ ಗುರುತು ದೊರಕಿಸಿಕೊಟ್ಟಿತು.