ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರದ ಎಪಿಎಂಸಿಯಿಂದ ಕಾಣೆಯಾಗಿದ್ದ ಟೊಮ್ಯಾಟೊ ಲಾರಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಿಕ್ಕಿದೆ.
ಬರೋಬ್ಬರಿ 21 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೊ ಇದರಲ್ಲಿದ್ದು, ರಾಜಸ್ಥಾನದ ಜೈಪುರಕ್ಕೆ ತೆರಳಬೇಕಿತ್ತು. ಆದರೆ ಚಾಲಕ ಗಾಡಿಯ ಜಿಪಿಎಸ್ ಎಸೆದು ಅಹಮದಾಬಾದ್‌ಗೆ ಬಂದು ಅರ್ಧಬೆಲೆಗೆ ಟೊಮ್ಯಾಟೊ ಮಾರಿಕೊಂಡಿದ್ದಾರೆ.
ಅನ್ವರ್ ಎಂಬಾತ ಲಾರಿ ಚಾಲಕನಾಗಿದ್ದು, ಟೊಮ್ಯಾಟೊ ಮಾರಿ ತಲೆಮರೆಸಿಕೊಂಡು ಹೋಗಿದ್ದಾನೆ. ಸಾಧಿಕ್ ಎನ್ನುವವರಿಗೆ ಸೇರಿದ್ದ ಟೊಮ್ಯಾಟೊ ಇದಾಗಿದ್ದು, ಅನ್ವರ್ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಅನ್ವರ್‌ನ್ನು ಹುಡುಕುತ್ತಿದ್ದಾರೆ.