ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮ್ಯಾಟೊ ಇಲ್ಲದೆ ಹೇಗೋ ಅಡುಗೆ ಮಾಡಬಹುದು, ಆದ್ರೆ ಈರುಳ್ಳಿ ಇಲ್ಲ ಅಂದ್ರೆ?
ಇದೀಗ ಬಹುತೇಕ ಅಡುಗೆ ಮನೆಯ ಕಥೆಯೂ ಇದೆ ಆಗಿದೆ, ಅಡುಗೆಗೆ ಬಳಸುವ ಮುಖ್ಯ ಪದಾರ್ಥ ಈರುಳ್ಳಿಯ ಬೆಲೆ ಏಕಾಏಕಿ ಏರಿಕೆಯಾಗಿದ್ದು, ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ನಾಸಿಕ್ ಹಾಗೂ ಪುಣೆಯಿಂದ ಬಹುತೇಕ ಈರುಳ್ಳಿ ಪೂರೈಕೆಯಾಗುತ್ತಿದ್ದು, ಇದೀಗ ಈ ಪೂರೈಕೆ ಸ್ಥಗಿತವಾಗಿದೆ. ಈ ವರ್ಷ ಮಳೆ ಕಡಿಮೆಯಿಂದಾಗಿ ಬಿತ್ತನೆಯೂ ಕಡಿಮೆಯಾಗಿದೆ.
ಈ ಹಿಂದೆ 25 ರೂಪಾಯಿ ಇದ್ದ ಈರುಳ್ಳಿ ಬೆಲೆ ಇದೀಗ 50 ರೂಪಾಯಿ ದಾಟಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಕೊರತೆಯಿಂದ ದರ ಇನ್ನಷ್ಟು ಹೆಚ್ಚಾಗುವ ಸಆಧ್ಯತೆ ಇದೆ.